ಬೆಂಗಳೂರು: ಚಂದ್ರನ ಅಂಗಳದಲ್ಲಿ ಇಳಿದು ಚಂದ್ರಯಾನ-3 (Chandrayaan-3) ನೌಕೆ ಸೆರೆ ಹಿಡಿದ ಮೊದಲ ಫೋಟೊವನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಇಸ್ರೋ (ISRO) ವಿಜ್ಞಾನಿಗಳು ಉಡುಗೊರೆಯಾಗಿ ನೀಡಿದರು.
ಚಂದ್ರಯಾನ-3 ಯಶಸ್ಸಾದ ಹಿನ್ನೆಲೆಯಲ್ಲಿ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಲು ಪ್ರಧಾನಿ ಮೋದಿ ಅವರು ಶನಿವಾರ ಬೆಂಗಳೂರಿಗೆ ಆಗಮಿಸಿದ್ದರು. ಈ ವೇಳೆ ಚಂದ್ರಯಾನ-3 ನೌಕೆ ಸೆರೆ ಹಿಡಿದ ಮೊದಲ ಫೋಟೊವನ್ನು ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ (S.Somanath) ಅವರು ಪ್ರಧಾನಿಗಳಿಗೆ ಉಡುಗೊರೆಯಾಗಿ ಕೊಟ್ಟರು. ಇದನ್ನೂ ಓದಿ: ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಳಿದ ಸ್ಥಳ ‘ಶಿವಶಕ್ತಿ’: ಹೆಸರಿಟ್ಟ ಮೋದಿ
ಆ.23 ರಂದು ಸಂಜೆ 6:04 ರ ಹೊತ್ತಿಗೆ ನಿಗದಿತ ಸಮಯಕ್ಕೆ ಚಂದ್ರಯಾನ-3 ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಯಶಸ್ವಿಯಾಗಿ ಕಾಲಿಟ್ಟಿತು. ಅದಾದ ಕೆಲವೇ ಗಂಟೆಗಳಲ್ಲಿ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈ ಚಿತ್ರವನ್ನು ತೆಗೆದಿತ್ತು.
ಚಂದ್ರನ ಮೇಲ್ಮೈನಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡಿರುವ ರಾಷ್ಟ್ರಗಳ ಸಾಲಿಗೆ ಭಾರತವೂ ಸೇರಿದೆ. ಅಮೆರಿಕ, ರಷ್ಯಾ, ಚೀನಾ, ಜಪಾನ್ ರಾಷ್ಟ್ರಗಳ ಜೊತೆ ಈಗ ಭಾರತ ಸ್ಥಾನ ಪಡೆದಿದೆ. ಮುಖ್ಯವಾಗಿ ಚಂದ್ರನ ದಕ್ಷಿಣ ಧ್ರುವದಲ್ಲಿ ಹೆಜ್ಜೆಯಿಟ್ಟ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಇದನ್ನೂ ಓದಿ: ಚಂದ್ರಯಾನ-3 ಸಕ್ಸಸ್; ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಲು ಬೆಂಗಳೂರಿಗೆ ಮೋದಿ
Web Stories