ವಾಷಿಂಗ್ಟನ್: ಚಂದ್ರಯಾನ ಹಾಗೂ ಮಂಗಳಯಾನ ಜೊತೆಗೆ ಭವಿಷ್ಯದಲ್ಲಿ ಬಾಹ್ಯಾಕಾಶ ಅನ್ವೇಷಣೆಯ ಹಲವು ಕನಸುಗಳನ್ನ ಹೊಂದಿರುವ ಮಹತ್ವದ ಆರ್ಟೆಮೆಸ್ ಒಪ್ಪಂದಕ್ಕೆ ಭಾರತ ಕೂಡ ಸಹಿ ಹಾಕಿದೆ.
Advertisement
ಮುಂದಿನ ವರ್ಷದ ಇಂಟರ್ ನ್ಯಾಷನಲ್ ಸ್ಪೇಸ್ ಸ್ಟೇಷನ್ (International Space Station) ಜಂಟಿ ಕಾರ್ಯಾಚರಣೆಗೆ ಅಮೆರಿಕದ ನಾಸಾ (NASA) ಹಾಗೂ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಜೊತೆಗೂಡಿ ಕೆಲಸ ಮಾಡಲಿವೆ. 2024ರಲ್ಲಿ ಮಾನವ ಸಹಿತ ಜಂಟಿ ಅಂತರಿಕ್ಷಯಾನ ಮಾಡಲಿವೆ ಹಾಗೂ ಇತರ ಅಂತರಿಕ್ಷ ಕುರಿತ ವಿಷಯಗಳ ಬಗ್ಗೆಯೂ ಅಧ್ಯಯನ ನಡೆಸಲಿದೆ. ಈ ಮೂಲಕ ಅಮೆರಿಕ ನೇತೃತ್ವದಲ್ಲಿ ಸೃಷ್ಟಿಯಾಗಿದ್ದ ವೇದಿಕೆ 26ನೇ ದೇಶವಾಗಿ ಭಾರತ ಸೇರ್ಪಡೆಯಾಗಿದೆ.
Advertisement
ಅಧ್ಯಕ್ಷ ಜೋ ಬೈಡನ್ (Joe Biden) ಅವರ ಆಹ್ವಾನದ ಮೇರೆಗೆ ಯುಎಸ್ಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಹಲವು ಒಪ್ಪಂದಗಳಿಗೆ ಸಹಿ ಹಾಕಿದರು. ಈ ವೇಳೆ ಆರ್ಟೆಮೆಸ್ ಯೋಜನೆಯ ಭಾಗವಾಗಿ 2024ರಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ (ISS) ಜಂಟಿ ಪ್ರಯಾಣ ಕೈಗೊಳ್ಳಲು ಉಭಯ ದೇಶಗಳು ಸಮ್ಮತಿಸಿವೆ. ಇದನ್ನೂ ಓದಿ: 30 ವರ್ಷಗಳ ಹಿಂದೆ ಸಾಮಾನ್ಯ ನಾಗರಿಕ.. ಈಗ ಭಾರತದ ಪ್ರಧಾನಿಯಾಗಿ ಶ್ವೇತಭವನಕ್ಕೆ ಮೋದಿ ಭೇಟಿ
Advertisement
Advertisement
1967ರ ಬಾಹ್ಯಾಕಾಶ ಒಪ್ಪಂದದ ಆಧಾರದಲ್ಲಿ ಆರ್ಟೆಮಿಸ್ ಒಪ್ಪಂದಗಳು ನಾಗರಿಕ ಬಾಹ್ಯಾಕಶ ಪರಿಶೋಧನೆ ಮತ್ತು ಬಳಕೆಗೆ ಮಾರ್ದರ್ಶನ ನೀಡಲು ವಿನ್ಯಾಸಗೊಳಿಸಲಾದ ಒಂದು ಕಾರ್ಯಾಚರಣೆಯಾಗಿದೆ. 2025ರ ವೇಳೆಗೆ ಮಾನವನನ್ನ ಚಂದ್ರನತ್ತ ಕಳುಹಿಸಲು ಪ್ರಯತ್ನ ನಡೆಸಿದೆ. ಜೊತೆಗೆ ಮಂಗಳಯಾನ ಮತ್ತು ಅದರಾಚೆಗೆ ಬ್ಯಾಹ್ಯಾಕಾಶ ಪರಿಶೋಧನೆ ವಿಸ್ತರಿಸುವ ಅಂತಿಮ ಗುರಿ ಹೊಂದಿದೆ. ನಾಸಾ ಮತ್ತು ಇಸ್ರೋ ಈ ವರ್ತಮಾನದ ಮಾನವ ಬಾಹ್ಯಾಕಾಶ ಯಾನ ಸಹಕಾರಕ್ಕಾಗಿ ಕಾಂರ್ಯತಂತ್ರವನ್ನು ಅಭಿವೃದ್ಧಿಪಡಿಸುತ್ತಿವೆ ಎಂದು ಶ್ವೇತಭವನ ತನ್ನ ತಿಳಿಸಿದೆ. ಇದನ್ನೂ ಓದಿ: ಫೈಟರ್ ಜೆಟ್ ಎಂಜಿನ್ ತಯಾರಿಕೆ – HAL ಜೊತೆಗೆ USನ GE ಏರೋಸ್ಪೇಸ್ ಒಪ್ಪಂದ