ನವದೆಹಲಿ: ಎಮಿಸ್ಯಾಟ್ ಉಪಗ್ರಹ ಸೇರಿದಂತೆ 28 ನ್ಯಾನೋ ಉಪಗ್ರಹಗಳನ್ನು ಇಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಶ್ರೀಹರಿಕೋಟಾದಿಂದ ಉಡಾವಣೆ ಮಾಡಿ ಮೂರು ವಿಶೇಷ ಸಾಧನೆ ನಿರ್ಮಿಸಿದೆ.
ಪಿಎಲ್‍ಎಲ್‍ವಿ-ಸಿ45 ಇಂದು ಬೆಳಗ್ಗೆ 9:30ಕ್ಕೆ ಯಶಸ್ವಿಯಾಗಿ ಉಡಾವಣೆಗೊಂಡಿತು. ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಸಂಶೋಧನಾ ಕೇಂದ್ರದಿಂದ ಈ ರಾಕೆಟನ್ನು ಉಡಾವಣೆ ಮಾಡಲಾಯಿತು ಎಂದು ಇಸ್ರೋ ತಿಳಿಸಿದೆ.
Advertisement
???????? #ISROMissions ????????
All set for today's launch!
In an hour (9:27 am IST), #PSLVC45 will lift off from the Satish Dhawan Space Centre in Sriharikota carrying #EMISAT and 28 customer satellites on board.
Our updates will continue. pic.twitter.com/4caRxmvRjY
— ISRO (@isro) April 1, 2019
Advertisement
436 ಕೆಜಿ ತೂಕವುಳ್ಳ ಕಡಿಮೆ ಗುರುತ್ವಾಕರ್ಷಣೆಯ ಕಕ್ಷೆಯಲ್ಲಿ ಕಾರ್ಯ ನಿರ್ವಹಿಸಲಿದೆ. ಎಮಿಸ್ಯಾಟ್ ಉಪಗ್ರಹಕ್ಕೆ ಶತ್ರು ರಾಷ್ಟ್ರಗಳ ನೆಲೆಗಳಲ್ಲಿರುವ ರೇಡಾರ್ ಗಳನ್ನು ಪತ್ತೆ ಹಚ್ಚುವ ಸಾಮರ್ಥ್ಯವಿದೆ. ಈ ಮೊದಲು ಏರ್ ಪ್ಲೇನ್‍ಗಳ ಮೂಲಕ ಶತ್ರು ರಾಷ್ಟ್ರಗಳಲ್ಲಿನ ರೇಡಾರ್ ಪತ್ತೆ ಮಾಡಿ ಎಚ್ಚರಿಸುವ ಕೆಲಸವನ್ನ ಮಾಡಿತ್ತಿತ್ತು.
Advertisement
ಇಸ್ರೋದ ಪಿಎಸ್‍ಎಲ್‍ವಿ-ಸಿ-45 ರಾಕೆಟ್ ಮೂಲಕ ಡಿಆರ್ ಡಿಒ ಅಭಿವೃದ್ಧಿಪಡಿಸಿದ ಎಮಿಸ್ಯಾಟ್, ಎಲೆಕ್ಟ್ರಾನಿಕ್ ಇಂಟೆಲಿಜೆನ್ಸ್ ಸ್ಯಾಟಲೈಟ್ ಸೇರಿದಂತೆ ಅಮೆರಿಕದ 24, ಸ್ವಿಟ್ಜರ್ಲ್ಯಾಂಡ್ ನ 01, ಸ್ಪೇನ್ 1, ಲಿಥುಯೇನಿಯಾದ 2 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದೆ.
Advertisement
ಮೂರು ಸಾಧನೆ ಹೇಗೆ?
ಉಡಾವಣೆಯಾದ ಮೊದಲ 17 ನಿಮಿಷದಲ್ಲಿ 749 ಕಿ.ಮೀ ದೂರದಲ್ಲಿರುವ ಕಕ್ಷೆಗೆ 436 ಕೆಜಿ ತೂಕದ ಎಮಿಸ್ಯಾಟ್ ಉಪಗ್ರಹವನ್ನು ಸೇರಿಸಿದೆ. ಬಳಿಕ 220 ಕೆಜಿ ತೂಕದ ವಿವಿಧ ದೇಶಗಳಿಗೆ ಸೇರಿದ 28 ಉಪಗ್ರಹವನ್ನು 504 ಕಿ.ಮೀ ದೂರದ ಕಕ್ಷೆಗೆ ಸೇರಿಸಿದೆ. ಇದಾದ ನಂತರ 485 ಕಿ.ಮೀ ದೂರಕ್ಕೆ ರಾಕೆಟ್ ಇಳಿಸಿದೆ. ಬಾಹ್ಯಾಕಾಶ ಪರೀಕ್ಷಾ ಪ್ರಯೋಗಕ್ಕೆ ಈ ರಾಕೆಟ್ ಬಳಸಲು ಇಸ್ರೋ ಮುಂದಾಗಿದೆ. ಇದೇ ಮೊದಲ ಬಾರಿಗೆ ಇಸ್ರೋ ಮೂರು ಕಕ್ಷೆಯಲ್ಲಿ ರಾಕೆಟ್, ಉಪಗ್ರಹವನ್ನು ಇಳಿಸುವ ಮೂಲಕ ವಿಶೇಷ ಸಾಧನೆ ನಿರ್ಮಿಸಿದೆ.
???????? #ISROMissions ????????
An evening in Sriharikota! All set for the launch of #PSLVC45 from the Satish Dhawan Space Centre on April 1 at 09:30 am (IST). On board #EMISAT & 28 foreign satellites. Our updates will continue.
Photo: Dhayalan V, SDSC pic.twitter.com/0u3OjDTBjS
— ISRO (@isro) March 30, 2019
ಎಮಿಸ್ಯಾಟ್ ಉಪಗ್ರಹವನ್ನು ಡಿಆರ್ ಡಿಒ ಅಭಿವೃದ್ಧಿ ಪಡಿಸಿದೆ. ಮೊದಲ ಬಾರಿಗೆ ಮೂರು ವಿವಿಧ ಕಕ್ಷೆಗಳಲ್ಲಿ ರಾಕೆಟ್ ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲಿದೆ ಎಂದು ಇಸ್ರೋ ಅಧ್ಯಕ್ಷ ಕೆ.ಶಿವನ್ ಹೇಳಿದ್ದರು.
ಡಿಆರ್ ಡಿಒ ರೂಪಿಸಿರುವ 436 ಕೆ.ಜಿ. ತೂಕದ ‘ಎಮಿಸ್ಯಾಟ್’ (Electromagnetic Spectrum Measurement) ಉಪಗ್ರಹಕ್ಕೆ ವಿದ್ಯುತ್ಕಾಂತೀಯ ಅಲೆಗಳ ಕ್ಷೇತ್ರ ವಿಶ್ಲೇಷಣೆಯ ಸಾಮರ್ಥ್ಯವಿದೆ. ಇದನ್ನು ರಕ್ಷಣಾ ಉದ್ದೇಶಗಳಿಗೆ ಬಳಸಲಾಗುತ್ತದೆ. ಮೊದಲ ಬಾರಿಗೆ ಸಾಮಾನ್ಯ ಜನರಿಗೆ ರಾಕೆಟ್ ಉಡಾವಣೆಯನ್ನು ವೀಕ್ಷಿಸಲು ಅವಕಾಶ ಕಲ್ಪಿಸಲಾಗಿತ್ತು.
???????? #ISROMissions ????????
Here's the lift-off image of #PSLVC45.
Our updates will continue. pic.twitter.com/AdDYHdQehR
— ISRO (@isro) April 1, 2019