Connect with us

Uncategorized

ಇಸ್ರೋದಿಂದ ಕಾರ್ಟೊಸ್ಯಾಟ್ 2 ಸೇರಿದಂತೆ 31 ಉಪಗ್ರಹಗಳ ಉಡಾವಣೆ ಯಶಸ್ವಿ

Published

on

ನವದೆಹಲಿ: ದೇಶದ ಹೆಮ್ಮೆಯ ಇಸ್ರೋ ಕಾರ್ಟೊಸ್ಯಾಟ್ 2  ಸೇರಿದಂತೆ 31 ಉಪಗ್ರಹಗಳ ಉಡಾವಣೆ ಮಾಡಿದೆ.

ಇಂದು ಬೆಳಗ್ಗೆ 9.29ಕ್ಕೆ ಸರಿಯಾಗಿ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಪಿಎಸ್‍ಎಲ್‍ವಿ ಮೂಲಕ ಒಟ್ಟು 31 ಉಪಗ್ರಹಗಳನ್ನು ಉಡಾವಣೆ ಮಾಡಲಾಗಿದೆ. ಇದ್ರಲ್ಲಿ ಕಾರ್ಟೋಸ್ಯಾಟ್ 2 ಮತ್ತು ವಿಶ್ವವಿದ್ಯಾಲಯವೊಂದರ ಚಿಕ್ಕ ಉಪಗ್ರಹವಿದ್ದು, ಇನ್ನುಳಿದ 29 ಉಪಗ್ರಹಗಳು 14 ವಿವಿಧ ದೇಶಗಳಿಗೆ ಸೇರಿದ್ದಾಗಿವೆ. ಉಪಗ್ರಹ ಉಡಾವಣೆಗೆ ಗುರುವಾರ ಸಂಜೆಯಿಂದ ಕೌಂಟ್‍ಡೌನ್ ಶುರುವಾಗಿತ್ತು.

ಪಿಎಸ್‍ಎಲ್‍ವಿ ರಾಕೆಟ್‍ನ ಎಕ್ಸೆಲ್ ಮಾದರಿಯು, 712 ಕೆಜಿ ತೂಕದ ಕಾರ್ಟೊಸಾಟ್ 2 ಸರಣಿ ಉಪಗ್ರಹ ಮತ್ತು 30 ಸಹಪ್ರಯಾಣಿಕ ಸ್ಯಾಟಲೈಟ್‍ಗಳನ್ನ(29 ವಿದೇಶಿ ಸಹ ಪ್ರಯಾಣಿಕ ಸ್ಯಾಟಲೈಟ್ ಹಾಗೂ 1 ಭಾರತೀಯ ನ್ಯಾನೋ ಸ್ಯಾಟ್‍ಲೈಟ್) ಒಟ್ಟಾಗಿ ಹೊತ್ತೊಯ್ದಿದೆ.30 ಉಪಗ್ರಗಳ ತೂಕ 243 ಕೆಜಿ ಹಾಗೂ ಕಾರ್ಟೋಸ್ಯಾಟ್ ಉಪಗ್ರಹ ಸೇರಿದಂತೆ 31 ಉಪಗ್ರಹಳ ಒಟ್ಟು ತೂಕ 955 ಕೆಜಿ ಇದೆ ಎಂದು ಇಸ್ರೋ ಹೇಳಿದೆ.

ಕಾರ್ಟೊಸ್ಯಾಟ್ 2 ಉಪಗ್ರಹ 500 ಕಿಮೀ ಎತ್ತರದಲ್ಲಿ ಭೂಮಿ ಸುತ್ತ ಸುತ್ತಲಿದೆ. ಈ ಉಪಗ್ರಹವು ವೈರಿ ಪ್ರದೇಶದಲ್ಲಿ ಎಷ್ಟು ಸೇನಾ ಟ್ಯಾಂಕ್‍ಗಳಿವೆ ಎಂದು ಎಣಿಸಬಲ್ಲುದಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಭಾರತ ಈಗಾಗಲೇ ಇಂತಹ 5 ಉಪಗ್ರಹಗಳನ್ನು ಉಡಾವಣೆ ಮಾಡಿದ್ದು ಇದು ಆರನೆಯದ್ದಾಗಿದೆ. ಈಗಿರುವ ಉಪಗ್ರಹಗಳು ಅಭಿವೃದ್ಧಿ ಚಟುವಟಿಕೆಗಳಿಗೆ ಬೇಕಾಗಿರುವ ಹೈ ರೆಸಲ್ಯೂಷನ್ ಮಾಹಿತಿ ಪಡೆಯಲು ಸಾಕಾಗುವುದಿಲ್ಲ. ಆದ್ದರಿಂದ 6ನೇ ಉಪಗ್ರಹ ಉಡಾವಣೆ ಮಾಡಲಾಗುತ್ತಿದೆ ಎಂದು ಇಸ್ರೋ ಅಧ್ಯಕ್ಷಾದ ಕಿರಣ್ ಕುಮಾರ್ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

30 ಸಹಪ್ರಯಾಣಿಕ ಉಪಗ್ರಹಗಳಲ್ಲಿ ಆಸ್ಟ್ರಿಯಾ, ಬೆಲ್ಜಿಯಂ, ಬ್ರಿಟನ್, ಚಿಲಿ, ಝೆಚ್ ರಿಪಬ್ಲಿಕ್, ಫಿನ್‍ಲ್ಯಾಂಡ್, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಲಾಟ್ವಿಯಾ, ಲುಥಿಯಾನಾ, ಸ್ಲೋವ್ಯಾಕಿಯಾ ಹಾಗೂ ಅಮೆರಿಕ ಸೇರಿದಂತೆ 14 ದೇಶಗಳ 29 ಸಹಪ್ರಯಾಣಿಕ ಉಪಗ್ರಗಳಗಳು ಹಾಗೂ ಒಂದು ಭಾರತೀಯ ನ್ಯಾನೋ ಉಪಗ್ರಹ ಇದೆ. ಭಾರತದ ನ್ಯಾನೋ ಉಪಗ್ರಹವಾದ 15 ಕೆಜಿ ತೂಕದ NUISAT ತಮಿಳುನಾಡಿನ ನೂರ್ ಇಸ್ಲಾಂ ವಿಶ್ವವಿದ್ಯಾಲಯಕ್ಕೆ ಸೇರಿದ್ದಾಗಿದೆ.

Click to comment

Leave a Reply

Your email address will not be published. Required fields are marked *