ಬೆಂಗಳೂರು: ಈ ವರ್ಷದ ಮೊದಲ ಉಪಗ್ರಹ ಜಿಸ್ಯಾಟ್-30 ಅನ್ನು ಇಸ್ರೋ ಕಕ್ಷೆಗೆ ಸೇರಿಸಿದೆ. ಮಧ್ಯರಾತ್ರಿ 2.35ಕ್ಕೆ ಫ್ರೆಂಚ್ ಗಯಾನದಿಂದ ಉಪಗ್ರಹವನ್ನು ಹೊತ್ತ ಏರಿಯನ್ ರಾಕೆಟ್ ನಭಕ್ಕೆ ಚಿಮ್ಮಿತು. 3,357 ಕೆ.ಜಿ ತೂಕದ ಜಿಸ್ಯಾಟ್-30 ಭೂಸ್ಥಿರ ಕಕ್ಷೆಯಲ್ಲಿ ಸುತ್ತಲಿದ್ದು ಟಿವಿ, ಮೊಬೈಲ್, ಇಂಟರ್‌ನೆಟ್ ಸಂಪರ್ಕದ ಗುಣಮಟ್ಟ ಸುಧಾರಿಸಲು ಸಹಕಾರಿಯಾಗಲಿದೆ.
ಯುರೋಪಿಯನ್ ಬಾಹ್ಯಾಕಾಶ ಒಕ್ಕೂಟ ಏರಿಯಾನ್ ಸ್ಪೇಸ್‍ನ ಏರಿಯಾನ್ 5 ವಾಹನವು ಜಿಸ್ಯಾಟ್-30 ಉಪಗ್ರಹವನ್ನು ಸುಮಾರು 38 ನಿಮಿಷಗಳಲ್ಲಿ ಕಕ್ಷೆಗೆ ಸೇರ್ಪಡೆಗೊಳಿಸಿತು. 12ಸಿ ಮತ್ತು 12 ಕೆಯು ಬ್ಯಾಂಡ್ 3,357 ಕೆ.ಜಿ. ತೂಕವಿರುವ ಉಪಗ್ರಹವನ್ನು ಏರಿಯಾನ್-5 ಉಡ್ಡಯನ ವಾಹನದಿಂದ (ವಿಎ 251) ಭೂಸ್ಥಾಯಿ ವರ್ಗಾವಣೆ ಕಕ್ಷೆಗೆ(ಜಿಟಿಓ) ಕೆಳ ಪ್ರಯಾಣಿಕ ಸ್ಥಿತಿಯಿಂದ ಸೇರ್ಪಡೆಗೊಳಿಸಲಾಯಿತು. ಈ ಉಪಗ್ರಹವು ಇಸ್ರೋದ ಹಿಂದಿನ ಇನ್‍ಸ್ಯಾಟ್/ಜಿಸ್ಯಾಟ್ ಉಪಗ್ರಹ ಸೇವೆಗಳ ಸ್ವರೂಪವನ್ನು ಹೊಂದಿದ್ದು, 12ಸಿ ಮತ್ತು 12 ಕೆಯು ಬ್ಯಾಂಡ್ ಟ್ರಾನ್ಸ್‌ಪಾಂಡರ್‌ಗಳನ್ನು ಒಳಗೊಂಡಿದೆ.
Advertisement
India's communication satellite #GSAT30 was successfully launched into a Geosynchronous Transfer Orbit by #Ariane5 #VA251.
Thanks for your support !!!
For details please visit: https://t.co/FveT3dGuo6
Image Courtesy: Arianespace pic.twitter.com/67csn0zZq7
— ISRO (@isro) January 16, 2020
Advertisement
ವಿಶೇಷತೆ ಏನು?
3 ಡಿಗ್ರಿ ರೇಖಾಂಶದಲ್ಲಿ ಉಪಗ್ರಹ ನೆಲೆಗೊಳ್ಳಲಿದ್ದು ಉತ್ತಮ ಗುಣಮಟ್ಟದ ಟಿವಿ, ಟೆಲಿ ಕಮ್ಯೂನಿಕೇಶನ್ ಮತ್ತು ಬ್ರಾಡ್‍ಕಾಸ್ಟಿಂಗ್ ಸೇವೆಗಳನ್ನು ನೀಡಲಿದೆ. ಉಪಗ್ರಹ ಟೆಲಿವಿಷನ್ ಅಪ್ ಲಿಂಕಿಂಗ್ ಹಾಗೂ ಡೌನ್‍ಲಿಂಕಿಂಗ್, ಡಿಜಿಟಲ್ ಸ್ಯಾಟಲೈಟ್ ನ್ಯೂಸ್ ಗ್ಯಾದರಿಂಗ್ (ಡಿಎಸ್‍ಎನ್‍ಜಿ), ಸೆಲ್ಯೂರಲ್ ಬ್ಯಾಕ್‍ಹೌಲ್ ಕನೆಕ್ಟಿವಿಟಿ, ಡಿಟಿಎಚ್, ಟೆಲಿಪೋರ್ಟ್ ಸೇವೆಗಳು ಸೇರಿದಂತೆ ಅನೇಕ ಸೇವೆಗಳನ್ನು ಭಾರತ, ಗಲ್ಫ್ ದೇಶಗಳು, ಏಷ್ಯಾದ ಹಲವು ದೇಶಗಳು, ಆಸ್ಟ್ರೇಲಿಯಾದಲ್ಲಿ ಸಿ-ಬ್ಯಾಂಡ್ ಮೂಲಕ ಮುಂದಿನ 15 ವರ್ಷಗಳವರೆಗೆ ನೀಡಲಿದೆ. ಸಿ-ಬ್ಯಾಂಡ್ ಟ್ರಾನ್ಸ್‌ಪಾಂಡರ್ ಅನ್ನು ಪ್ರಾಥಮಿಕವಾಗಿ ದೂರಸಂಪರ್ಕ ಉದ್ದೇಶಕ್ಕಾಗಿ ಮತ್ತು ಮಾಹಿತಿ ಪ್ರಸರಣ ಸೇವೆಗಾಗಿ ಬಳಸಲಾಗುತ್ತದೆ. ಇದೇ ಸೇವೆಗಳ ನಿರ್ವಹಣೆಗಾಗಿ ಈ ಹಿಂದೆ ಹಾರಿಬಿಡಲಾಗಿದ್ದ ‘ಇನ್‍ಸ್ಯಾಟ್-4ಎ’ ಉಪಗ್ರಹದ ಬದಲಿಗೆ ‘ಜಿಸ್ಯಾಟ್-30’ ಅನ್ನು ಉಡಾವಣೆ ಮಾಡಲಾಗಿದೆ.
Advertisement
#GSAT30 successfully separated from the upper stage of #Ariane5 #VA251 pic.twitter.com/XraPhj37Xl
— ISRO (@isro) January 16, 2020
Advertisement
ಎರಡು ಉಪಗ್ರಹಗಳ ಉಡಾವಣೆ:
ಜಿಸ್ಯಾಟ್-30 ಜೊತೆ ಏರಿಯಾನ್ 5 ಕನೆಕ್ಟ್ ಉಪಗ್ರಹವನ್ನು ನಭಕ್ಕೆ ಸಾಗಿಸಲಾಗಿದೆ. ಆರಂಭದಲ್ಲಿ ಕನೆಕ್ಟ್ ಉಪಗ್ರಹವನ್ನು ಕಕ್ಷೆಗೆ ಸೇರಿಸಿದ ಬಳಿಕ ಜಿಸ್ಯಾಟ್ ಕಕ್ಷೆಗೆ ಸೇರಿಸಲಾಗಿದೆ. ಯೂಟೆಲ್‍ಸ್ಯಾಟ್ ಕನೆಕ್ಟ್ ಉಪಗ್ರಹವನ್ನು ಥೇಲ್ಸ್ ಅಲೆನಿಯಾ ಸ್ಪೇಸ್ ಅಭಿವೃದ್ಧಿ ಪಡಿಸಿದ್ದು, ಈ ಟೆಲಿಕಾಂ ಉಪಗ್ರಹ ಯುರೋಪ್ ಮತ್ತು ಆಫ್ರಿಕಾದಲ್ಲಿ ಸೇವೆ ನೀಡಲಿದೆ. ಈ ಕಂಪನಿಯ ಸೇವೆ ಪಡೆಯುವ ಗ್ರಾಹಕರು 100 ಎಂಬಿಪಿಎಸ್(ಮೆಗಾ ಬೈಟ್ಸ್ ಪರ್ ಸೆಕೆಂಡ್) ವೇಗದಲ್ಲಿ ಇಂಟರ್‌ನೆಟ್ ಸೌಲಭ್ಯ ಪಡೆಯಲಿದ್ದಾರೆ.
#Ariane5 Flight #VA251 carrying #GSAT30 and EUTELSAT KONNECT successfully liftoff pic.twitter.com/PLRiMgidPw
— ISRO (@isro) January 16, 2020