ತಿರುವನಂತಪುರಂ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಪ್ರತಿನಿತ್ಯ ನೂರು ಸೈಬರ್ ದಾಳಿಗಳ (Cyber Attacks) ವಿರುದ್ಧ ಹೋರಾಡುತ್ತಿದೆ ಎಂದು ಸಂಸ್ಥೆಯ ಅಧ್ಯಕ್ಷ ಎಸ್.ಸೋಮನಾಥ್ (S.Somanath) ಹೇಳಿದ್ದಾರೆ. ಕೇರಳದ ಕೊಚ್ಚಿಯಲ್ಲಿ ಅಂತಾರಾಷ್ಟ್ರೀಯ ಸೈಬರ್ ಸಮ್ಮೇಳನದ 16ನೇ ಆವೃತ್ತಿಯ ಸಮಾರೋಪ ಸಮಾರಂಭದಲ್ಲಿ ಈ ವಿಚಾರವನ್ನು ಅವರು ಬಹಿರಂಗ ಪಡಿಸಿದ್ದಾರೆ.
ಅಲ್ಟ್ರಾ-ಆಧುನಿಕ ಸಾಫ್ಟ್‍ವೇರ್ ಬಳಸುವ ರಾಕೆಟ್ ತಂತ್ರಜ್ಞಾನದಲ್ಲಿ ಸೈಬರ್ ದಾಳಿಯ ಸಾಧ್ಯತೆ ಹೆಚ್ಚು. ಅಂತಹ ದಾಳಿಗಳನ್ನು ಎದುರಿಸಲು ಸಂಸ್ಥೆಯು ದೃಢವಾದ ಸೈಬರ್ ಭದ್ರತೆಯ ನೆಟ್‍ವರ್ಕ್‍ನೊಂದಿಗೆ ಸಜ್ಜುಗೊಂಡಿದೆ. ಇದರ ಸಲುವಾಗಿ ಸಾಫ್ಟ್‍ವೇರ್ ಮಾತ್ರವಲ್ಲದೇ ರಾಕೆಟ್‍ಗಳೊಳಗಿನ ಹಾರ್ಡ್‍ವೇರ್ ಚಿಪ್‍ಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ವಿವಿಧ ಸಂಶೋಧನೆಗಳು ನಡೆಯುತ್ತಿವೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಹಮಾಸ್ ಉಗ್ರರಿಂದ ಮಗಳ ಬೆತ್ತಲೆ ಮೆರವಣಿಗೆ- ಸಾರ್ವಜನಿಕರಲ್ಲಿ ತಾಯಿ ಮನವಿ
Advertisement
Advertisement
ಉಪಗ್ರಹವನ್ನು ನಿಯಂತ್ರಣ ಮಾಡುವ ವಿಧಾನವು ಒಂದೇ ಸಮಯದಲ್ಲಿ ಅನೇಕ ಉಪಗ್ರಹಗಳನ್ನು ನಿಯಂತ್ರಿಸುವ ಸಾಫ್ಟ್‍ವೇರ್ ವಿಧಾನವಾಗಿ ಬದಲಾಗಿದೆ. ಇದು ಈ ವಲಯದ ಮಹತ್ವದ ಬೆಳವಣಿಗೆಯನ್ನು ಸೂಚಿಸುತ್ತದೆ. ಇಂದು ಸಾಮಾನ್ಯ ಜನರ ದೈನಂದಿನ ಜೀವನಕ್ಕೆ ಸಹಾಯ ಮಾಡುವ ಉಪಗ್ರಹಗಳು ಸಹ ಪ್ರಸ್ತುತವಾಗಿವೆ. ಇವೆಲ್ಲವನ್ನೂ ವಿವಿಧ ರೀತಿಯ ಸಾಫ್ಟ್‍ವೇರ್‍ಗಳಿಂದ ನಿಯಂತ್ರಿಸಲಾಗುತ್ತದೆ. ಇವೆಲ್ಲವನ್ನೂ ರಕ್ಷಿಸಲು ಸೈಬರ್ ಸುರಕ್ಷತೆ ಬಹಳ ಮುಖ್ಯ ಎಂದು ಅವರು ತಿಳಿಸಿದ್ದಾರೆ.
Advertisement
Advertisement
ಸುಧಾರಿತ ತಂತ್ರಜ್ಞಾನವು ಒಂದು ವರದಾನವಾಗಿದೆ. ಇದೇ ವೇಳೆ ಅದು ಬೆದರಿಕೆಗೂ ಕಾರಣವಾಗಿದೆ. ಕೃತಕ ಬುದ್ಧಿಮತ್ತೆಯಂತಹ ತಂತ್ರಜ್ಞಾನವನ್ನು ಬಳಸಿಕೊಂಡು ಸೈಬರ್ ಅಪರಾಧಿಗಳು ಒಡ್ಡುವ ಸವಾಲುಗಳನ್ನು ನಾವು ಅದೇ ತಂತ್ರಜ್ಞಾನದಿಂದ ಎದುರಿಸಬಹುದು. ಈ ನಿಟ್ಟಿನಲ್ಲಿ ಸಂಶೋಧನೆ ಆಗಬೇಕಿದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಹಾವೇರಿ, ಅತ್ತಿಬೆಲೆ ದುರಂತಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ಮಾಡಲಿ: ಬೊಮ್ಮಾಯಿ
Web Stories