ನವದೆಹಲಿ: ಉಡಾವಣೆಗೊಂಡ 48 ಘಂಟೆ ಬಳಿಕ ಜಿಸ್ಯಾಟ್-6ಎ ಉಪಗ್ರಹ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಇಸ್ರೋ ದೃಢಪಡಿಸಿದೆ. ಮಾರ್ಚ್ 29 ಗುರುವಾರದಂದು ಸಂವಹನ ಉಪಗ್ರಹ ಉಡಾವಣೆಯಾಗಿತ್ತು.
ದೇಶದ ಸಂವಹನ ಕ್ಷೇತ್ರದ ಸುಧಾರಣೆಗಾಗಿ ಉಪಗ್ರಹವನ್ನು ಉಡಾವಣೆ ಮಾಡಲಾಗಿತ್ತು. ಸಂಪೂರ್ಣ ಭೂ ಭಾಗದ ಸಂಪರ್ಕವನ್ನು ಈ ಭೂಸ್ಥಿರ ಉಪಗ್ರಹದಿಂದ ನಿರೀಕ್ಷೆ ಮಾಡಲಾಗಿತ್ತು. ಶುಕ್ರವಾರ ಉಪಗ್ರಹವನ್ನು ಎರಡನೇ ಕಕ್ಷೆಗೆ ಏರಿಸುವಾಗ ಸಂಪರ್ಕ ಕಳೆದುಕೊಂಡಿದೆ.
Advertisement
Advertisement
ಈ ಉಪಗ್ರಹ ಸುಮಾರು 2 ಟನ್ ತೂಕವಿದ್ದು, ಇದರ ನಿರ್ಮಾಣಕ್ಕಾಗಿ ಇಸ್ರೋ 270 ಕೋಟಿ ರೂ. ವೆಚ್ಚ ಮಾಡಿದೆ. 400ಕ್ಕೂ ಹೆಚ್ಚು ವಿಜ್ಞಾನಿಗಳು ಈ ಉಪಗ್ರಹ ನಿರ್ಮಾಣದಲ್ಲಿ ಕೆಲಸ ಮಾಡಿದ್ದರು. ಉಪಗ್ರಹದ ಜೊತೆ ಸಂಪರ್ಕ ಸಾಧಿಸಲು ಇಸ್ರೊ ಅಧ್ಯಕ್ಷ ಕೆ.ಶಿವನ್ ಹಾಗೂ ಇತರೆ ವಿಜ್ಞಾನಿಗಳು ಸಭೆ ನಡೆಸಿ ಕಾರ್ಯನಿರತರಾಗಿದ್ದಾರೆ. ಮತ್ತೆ ಉಪಗ್ರಹದೊಂದಿಗೆ ಸಂಪರ್ಕ ಹೊಂದಲು ವಿಜ್ಞಾನಿಗಳು ನಿರತರಾಗಿದ್ದಾರೆ. ಇದನ್ನೂ ಓದಿ: ಜಿಸ್ಯಾಟ್ 6ಎ ಉಪಗ್ರಹ ಉಡಾವಣೆ ಯಶಸ್ವಿ: ಏನಿದರ ವಿಶೇಷತೆ? ಸೈನಿಕರಿಗೆ ಹೇಗೆ ಸಹಾಯ ಆಗುತ್ತೆ? ಇಲ್ಲಿದೆ ಮಾಹಿತಿ
Advertisement
ಉಪಗ್ರಹದ ವಿಶೇಷತೆ ಏನು?
ಈ ಉಪಗ್ರಹ 6 ಮೀ. ಉದ್ದದ ಎಸ್-ಬ್ಯಾಂಡ್ `ಸ್ವಯಂ ಚಾಲಿತ’ ಹರಡಿಕೊಳ್ಳುವ ಆಂಟೆನಾ ಇದರ ವಿಶೇಷ. ಕಕ್ಷೆಗೆ ಸೇರುತ್ತಲೇ ಇದು ಛತ್ರಿಯಂತೆ ಹರಡಿಕೊಳ್ಳುತ್ತದೆ. ಈವರೆಗೆ ಇಸ್ರೋ ಅಳವಡಿಸಿರುವ ಆಂಟೆನಾಗಳಿಗಿಂತಾ ಮೂರು ಪಟ್ಟು ದೊಡ್ಡದಾಗಿರುವುದು ಇದರ ವಿಶೇಷತೆ.