ಜೆರುಸಲೆಂ: ಸದ್ಯ ನಾವೇಲ್ಲರೂ ಸೇಫ್ ಆಗಿದ್ದೇವೆ ಅಂತಾನೇ ಹೇಳಬಹುದು. ಅದರಲ್ಲೂ ನಾನಿರುವ ಪ್ರದೇಶ ಸುರಕ್ಷಿತವಾಗಿದೆ. ನಾನು ಇಸ್ರೇಲ್‍ನ ಕೇಂದ್ರ ಪ್ರದೇಶಲ್ಲಿದ್ದೇನೆ ಎಂದು ಇಸ್ರೇಲ್‍ನಲ್ಲಿ (Isreal) ನೆಲೆಸಿರುವ ಭಾರತೀಯ ಮೂಲದ ಲೆನಾರ್ಡ್ ಫೆರ್ನಾಂಡೀಸ್ ಹೇಳಿದ್ದಾರೆ.
ಇಸ್ರೇಲಿನಿಂದ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಅವರು ಸದ್ಯದ ಪರಿಸ್ಥಿತಿಯನ್ನು ಬಿಚ್ಚಿಟ್ಟರು. ಶನಿವಾರ ಎರಡು ಬಾರಿ ಮಿಸೆಲ್ ಬರುವ ಮುನ್ಸೂಚನೆ ಸಿಕ್ಕಿತ್ತು. ಆಗ ನಾವು ಶೆಲ್ಟರ್ ಇಲ್ಲಿನ ಬಾಂಬ್ ರೂಮ್ ಅಂತೀವಿ. ಇಲ್ಲಿನ ಭಾಷೆಯಲ್ಲಿ ಮಮ್ಮದ್ ಅಂತಾ ಕರೀತಿವಿ. ಅಲ್ಲಿ ಹೋಗಿ ಸೇಫ್ ಆಗಿ ಇದ್ವಿ ಅಂದ್ರು.
Advertisement
Advertisement
ಒಟ್ಟಿನಲ್ಲಿ ಸದ್ಯ ಇಲ್ಲಿನ ಪರಿಸ್ಥಿತಿ ಸೇಫ್ ಆಗಿದೆ. ಕಳೆದ 14 ವರ್ಷಗಳಿಂದ ಇಲ್ಲಿ ವಾಸವಿದ್ದೇನೆ. ಹೀಗಾಗಿ ನನಗೆ ಅಷ್ಟೊಂದು ಭಯ ಆಗ್ತಿಲ್ಲ. ಯಾಕೆಂದರೆ ಇದಕ್ಕಿಂತ ಮುಂಚೆಯೂ ಈ ರೀತಿಯ ದೊಡ್ಡಮಟ್ಟದ ಶಬ್ಧಗಳನ್ನು ಕೇಳಿದ್ದೇವೆ. ಶನಿವಾರ ಸಂಜೆಯೂ ಒಂದು ಬಾರಿ ಮುನ್ಸೂಚನೆ ಸಿಕ್ಕಿತ್ತು. ಈ ವೇಳೆ ಕೂಡ ನಾವು ಬಂಕರ್ ಗಳಿಗೆ ತೆರಳಿ ಸುರಕ್ಷಿತವಾದೆವು. ನಂತರ ಕೇಳಿದ ಶಬ್ದದ ಪ್ರಕಾರ ರಾಕೆಟ್‍ಗಳು ಇಂಟರ್ ಸೆಪ್ಟ್ ಆಗಿವೆ. ಅಂದ್ರೆ ಆಂಟಿ ಮಿಸೈಲ್‍ನಿಂದ ಧ್ವಂಸ ಮಾಡಿವೆ. ಇಲ್ಲಿನ ಆಂಟಿ ಮಿಸೈಲ್ ಬ್ಲಾಸ್ಟ್ ಮಾಡುವಾಗ ಆ ಶಬ್ಧಗಳು ಸ್ವಲ್ಪ ಭಯಂಕರವಾಗಿರುತ್ತವೆ. ಇದು ಹೊಸಬರಿಗೆ ಸ್ವಲ್ಪ ಭಯ ಹುಟ್ಟಿಸುತ್ತೆ ಎಂದು ತಿಳಿಸಿದರು.
Advertisement
ಇಲ್ಲಿನ ಸೈನ್ಯದ ಶಕ್ತಿಯ ಮೇಲೆ ನಮಗೆ ನಂಬಿಕೆ ಇದೆ. ಇಲ್ಲಿ ಐರನ್ ಡೋಮ್ (Iron Dome) ಸಿಸ್ಟಮ್ ಇರುವುದರಿಂದ ನಾವು ಇನ್ನೂ ಬದುಕಿದ್ದೇವೆ. ಇಲ್ಲದಿದ್ದರೆ ನಾವು ಯಾವತ್ತೋ ಪ್ರಣ ಕಳೆದುಕೊಳ್ಳುತ್ತಿದ್ದೆವು. ಒಟ್ಟಿನಲ್ಲಿ ಇಸ್ರೆಲ್ ಡಿಫೆನ್ಸ್ ಫೋರ್ಸ್ (IDF) ಮೇಲೆ ನಮಗೆ ಸಂಪೂರ್ಣ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಇಸ್ರೇಲ್-ಹಮಾಸ್ ಯುದ್ಧ; ಚಿನ್ನ, ಬೆಳ್ಳಿ ದರದ ಮೇಲೆ ಎಫೆಕ್ಟ್
Advertisement
ಮಗನ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಾನು ಊರಿಗೆ ಬರುವುದಿತ್ತು. ಹೀಗಾಗಿ ಮಂಗಳವಾರ ವಿಮಾನದಲ್ಲಿ ಬರುವವನಿದ್ದೆ. ಆದರೆ ಇದೀಗ ದುರಾದೃಷ್ಟವಶಾತ್ ಫ್ಲೈಟ್‍ಗಳೆಲ್ಲ ಕ್ಯಾನ್ಸಲ್ ಆಗಿದೆ. ಹೀಗಾಗಿ ಸದ್ಯಕ್ಕೆ ಇಂಡಿಯಾಗೆ ಬರಲು ಸಾಧ್ಯವಾಗುತ್ತಿಲ್ಲ. ಸದ್ಯದ ಪ್ರಕಾರ ಉತ್ತರದಿಂದ ದಕ್ಷಿಣದವರೆಗೂ ಯಾವುದೇ ಭಾರತೀಯನಿಗೂ ಹಾನಿಯಾಗಿಲ್ಲ ಅಂತ ತಿಳಿದುಕೋಮಡಿದ್ದೇನೆ. ಆದರೆ ಈ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ಮೊದಲೇ ಸೂಚನೆಗಳು ಇರುವುದರಿಂದ ಎಲ್ಲರೂ ಸೇಫ್ ಆಗಿಯೇ ಇದ್ದಾರೆ ಎಂದರು.
ಸರ್ಕಾರ ಮತ್ತು ಇಲ್ಲಿನ ರಾಯಭಾರಿ ಹೇಳಿದಂತೆ ನಾವು ನಡೆದುಕೊಳ್ಳುವುದು ನಮ್ಮ ಕರ್ತವ್ಯ. ಬ್ಲಾಸ್ಟ್ ಆದ ಬಳಿಕವೂ 10 ನಿಮಿಷಗಳ ಕಾಲ ಬಂಕರ್ ಒಳಗಡೆಯೇ ಇರಲು ಸೂಚನೆ ಕೊಡುತ್ತಾರೆ. ಯಾಕೆಂದರೆ ಕೆಲವರು ಬ್ಲಾಸ್ಟ್ ಆದ ತಕ್ಷಣ ಮುಗಿಯಿತು ಎಂದು ಹೊರಗಡೆ ಶೂಟಿಂಗ್ ಮಾಡಲು ತೆರಳುತ್ತಾರೆ. ಬಾಸ್ಟ್ ಆದ ಕೆಲ ನಿಮಿಷಗಳ ಬಳಿಕ ಅದರ ಪಾರ್ಟ್ ಗಳು ಬೀಳುತ್ತವೆ. ಈ ಹಿನ್ನೆಲೆಯಲಿ ಜಾಗೃತ ವಹಿಸುವಂತೆ ಸೂಚಿಸುತ್ತಾರೆ ಎಂದು ಹೇಳಿದರು.
ಇಸ್ರೇಲ್‍ನ ಪ್ರತಿ ಕಟ್ಟಡದಲ್ಲಿಯೂ ಬಂಕರ್‍ಗಳು ಇರುತ್ತವೆ. ರಸ್ತೆ ಪಕ್ಕದಲ್ಲಿಯೂ ಬಂಕರ್ ಗಳು ಇರುತ್ತವೆ. ಒಂದು ವೇಳೆ ನೀವು ರಸ್ತೆಯಲ್ಲಿ ನಡೆಸುಕೊಂಡು ಹೋಗುತ್ತಿದ್ದರೆ ಅಲ್ಲಿಯೇ ಮಲಗಿಕೊಳ್ಳಿ ಎಂಬುದಾಗಿಯೂ ಸೂಚನೆಗಳನ್ನು ಕೊಡುತ್ತಾರೆ. ಕಳೆದ 14 ವರ್ಷಗಳಲ್ಲಿ ಈ ರೀತಿಯ ಘಟನೆಗಳನ್ನು ನಾನು ನೊಡಿಲ್ಲ. ಬಹುದೊಡ್ಡ ಸಂಖ್ಯೆಯಲ್ಲಿ ಇಸ್ರೇಲಿಗರು ಸಾವನ್ನಪ್ಪುವುದು, ಹಿಂಸೆ ಆಗಿರುವುದನ್ನು ನೋಡಿದ್ದು ನಾನು ಇದೇ ಮೊದಲು. ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ಇದು ಇನ್ನೂ ಕೆಲವು ದಿನಗಳು ಮುಂದುವರಿಯುವ ಸಾಧ್ಯತೆಗಳಿವೆ ಎಂದು ಅವರು ತಿಳಿಸಿದರು.
Web Stories