ಟೆಹ್ರಾನ್: ಕಳೆದ ಅಕ್ಟೋಬರ್ 1ರಂದು 180 ಕ್ಷಿಪಣಿಗಳನ್ನು ಹಾರಿಸಿ ದಾಳಿ ನಡೆಸಿದ್ದ ಇರಾನ್ ವಿರುದ್ಧ ಇಸ್ರೇಲ್ ಕೊನೆಗೂ ಪ್ರತೀಕಾರದ ದಾಳಿ ನಡೆಸಿದೆ. ಶನಿವಾರ (ಅ.26) ಬೆಳಗ್ಗೆ ಸುಮಾರು 200 ಕ್ಷಿಪಣಿಗಳ ಮಳೆ ಸುರಿಸಿ ಇರಾನ್ ಮೇಲೆ ದಾಳಿ (Israel Airstrikes) ನಡೆಸಿದೆ. ಈ ಬೆನ್ನಲ್ಲೇ ಇರಾನ್‌ನ (Iran) ಸುಪ್ರೀಂ ಲೀಡರ್ ಮತ್ತೆ ಯುದ್ಧದ ಎಚ್ಚರಿಕೆ ನೀಡಿದ್ದಾರೆ.
Advertisement
ಇಸ್ರೇಲ್ ದಾಳಿ ಕುರಿತು ಭಾನುವಾರ ಮಾತನಾಡಿರುವ ದೇಶದ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ (Ayatollah Ali Khamenei) ಮತ್ತೆ ಇಸ್ರೇಲ್ ಮೇಲೆ ಯುದ್ಧ ಮುಂದುವರಿಸುವ ಎಚ್ಚರಿಕೆ ನೀಡಿದ್ದಾರೆ. ಇರಾನ್ ತನ್ನ ಶಕ್ತಿಯನ್ನು ಇಸ್ರೇಲ್‌ಗೆ ಹೇಗೆ ಪ್ರದರ್ಶಿಸಬೇಕು ಎಂಬುದನ್ನು ಇರಾನ್ ಅಧಿಕಾರಿಗಳು ನಿರ್ಧರಿಸಬೇಕು. ಇಸ್ರೇಲ್ (Israel) ಮಾಡಿದ ದುಷ್ಟತನವನ್ನು ಕ್ಷಮಿಸಲೇಬಾರದು ಎಂದು ಕರೆ ಕೊಟ್ಟಿದ್ದಾರೆ. ಇದನ್ನೂ ಓದಿ: 100 ಕ್ಕೂ ಹೆಚ್ಚು ಯುದ್ಧ ವಿಮಾನಗಳ ಮೂಲಕ ಇರಾನ್‌ನ ಮಿಲಿಟರಿ ಸ್ಥಳಗಳ ಮೇಲೆ ಇಸ್ರೇಲ್ ಏರ್‌ಸ್ಟ್ರೈಕ್
Advertisement
Advertisement
ಏನಾಗಿತ್ತು?
ಇಸ್ರೇಲ್ ಶನಿವಾರ ಬೆಳಗ್ಗೆ ಇರಾನ್‌ನ 20 ಆಯಕಟ್ಟಿನ ಪ್ರದೇಶಗಳ ಮೇಳೆ ನೂರು ಯುದ್ಧ ವಿಮಾನಗಳ ಮೂಲಕ 200 ಕ್ಷಿಪಣಿಗಳನ್ನ ಹಾರಿಸಿ, ಭೀಕರ ದಾಳಿ ನಡೆಸಿತ್ತು. ಅಮೆರಿಕ ನಿರ್ಮಿತ ಎಫ್-35, ಎಫ್-151, ಎಫ್-26ಐ ಯುದ್ಧ ವಿಮಾನ ಬಳಸಿ, ಇರಾನ್ ಸಮೀಪವೇ ಬಂದು ಇಸ್ರೇಲ್ ವೈಮಾನಿಕ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಇರಾನ್‌ನ ನಾಲ್ವರು ಯೋಧರು ಬಲಿಯಾದರು. ಅಲ್ಲದೇ ಇರಾನ್‌ನ ಸೇನಾ ನೆಲೆಗಳು, ಕ್ಷಿಪಣಿ ಉತ್ಪಾದನಾ ಘಟಕಗಳು ಧ್ವಂಸವಾದವು. ಈ ಬೆನ್ನಲ್ಲೇ ಇಸ್ರೇಲ್ ತಕ್ಕ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಗುಡುಗಿತ್ತು.
Advertisement
ಬಳಿಕ ಇರಾನ್ ವಿರುದ್ಧ ಇಸ್ರೇಲ್ ಸೇನಾ ಕಾರ್ಯಚರಣೆ ಬಗ್ಗೆ ಇಸ್ರೇಲ್ ಸೇನಾ ಮುಖ್ಯಸ್ಥ ಹರ್ಜಿ ಹಲೇವಿ ಮಾಹಿತಿ ನೀಡಿದ್ದರು. ಇಸ್ರೇಲ್ ಮೂರು ಹಂತದ ದಾಳಿ ನಡೆಸಿದೆ. ಈ ದಾಳಿಯ ಬಳಿಕ ಇಸ್ರೇಲ್ ಮಿಲಿಟರಿ ಕಾರ್ಯಾಚರಣೆ ಅಂತ್ಯವಾಗಿದೆ. ನಾವು ಇರಾನ್‌ನಲ್ಲಿನ ಮಿಲಿಟರಿ ಗುರಿಗಳ ಮೇಲೆ ನಿಖರವಾದ ದಾಳಿಗಳನ್ನು ನಡೆಸಿದ್ದೇವೆ. ಇಸ್ರೇಲ್ ಮೇಲಿನ ತಕ್ಷಣದ ಬೆದರಿಕೆಗಳನ್ನು ತಡೆಯುವುದು ನಮ್ಮ ಉದ್ದೇಶವಾಗಿತ್ತು. ಇದನ್ನೂ ಓದಿ: ಎಡಪಂಥೀಯರ ವಿಕಿಪೀಡಿಯಗೆ ದೇಣಿಗೆ ನೀಡಬೇಡಿ: ಮಸ್ಕ್ ಕರೆ