ಟೆಲ್ ಅವೀವ್: ಗಾಯಾಳುಗಳನ್ನು ಸಾಗಿಸುತ್ತಿದ್ದ ಪ್ಯಾಲೆಸ್ತೀನ್‌ನ (Palestine) ಅಂಬುಲೆನ್ಸ್ (Ambulance) ಮೇಲೆ ಇಸ್ರೇಲ್ (Israel) ಸೇನೆ ನಡೆಸಿದ ದಾಳಿಯಲ್ಲಿ ಸುಮಾರು 15 ಜನ ಸಾವಿಗೀಡಾಗಿದ್ದು, 60 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಈ ಘಟನೆ ಬೆನ್ನಲ್ಲೇ ಅಮೆರಿಕ, ಇಸ್ರೇಲ್ ಸೇನೆ ಸುತ್ತುವರಿದ ಪ್ರದೇಶಗಳಲ್ಲಿ ಸಿಲುಕಿರುವ ನಾಗರಿಕರಿಗೆ ನೆರವು ನೀಡಲು ಗಾಜಾದಲ್ಲಿ ಕದನ ವಿರಾಮ ಘೋಷಿಸುವಂತೆ ಇಸ್ರೇಲ್‍ಗೆ ಒತ್ತಾಯಿಸಿದೆ. ಅದಾಗಿಯೂ ಅಮೆರಿಕಾದ ಸಲಹೆಯನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು (Benjamin Netanyahu) ತಿರಸ್ಕರಿಸಿದ್ದಾರೆ. ಅಲ್ಲದೇ ಒತ್ತೆಯಾಳುಗಳನ್ನು ಬಿಡಿಸಲು ಕ್ರಮಕೈಗೊಳ್ಳುವುದಾಗಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳಕ್ಕೆ ಹೊರಟ್ಟಿದ್ದ ಬಸ್ ಹಳ್ಳಕ್ಕೆ ಉರುಳಿಬಿದ್ದು ಮಹಿಳೆ ಸಾವು – ಐವರು ಗಂಭೀರ
Advertisement
ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧ ಯಾವುದೇ ಕದನ ವಿರಾಮವಿಲ್ಲದೆ ಒಂದು ತಿಂಗಳು ಸಮೀಪಿಸಿದೆ. ಈ ಯುದ್ಧ ಹಮಾಸ್ ಉಗ್ರರು ಒತ್ತೆಯಾಳುಗಳನ್ನು ಬಿಡುಗಡೆ ಮಾಡವವರೆಗೂ ಮುಂದುವರಿಯುತ್ತದೆ. ಒತ್ತೆಯಾಳುಗಳ ಬಿಡುಗಡೆಗೆ ಇನ್ನೂ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ನೇತಾನ್ಯಾಹು ಹೇಳಿದ್ದಾರೆ.
Advertisement
Advertisement
ಯುದ್ಧದ ಆರಂಭದ ನಂತರ ಟೆಲ್ ಅವೀವ್‍ನಲ್ಲಿ ನೇತನ್ಯಾಹು ಅವರನ್ನು ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಮೂರನೇ ಬಾರಿ ಭೇಟಿಯಾಗಿದ್ದರು. ಈ ವೇಳೆ ಗಾಜಾಕ್ಕೆ ನೆರವು ನೀಡಲು ಮಾನವೀಯ ದೃಷ್ಟಿಯಿಂದ ವಿರಾಮದ ಬಗ್ಗೆ ಪ್ರಸ್ತಾಪಿಸಿದ್ದರು. ಆಂಟೋನಿಯವರ ಸಲಹೆಯನ್ನು ಇಸ್ರೇಲ್ ಅಧ್ಯಕ್ಷ ತಿರಸ್ಕರಿಸಿದ್ದಾರೆ.
Advertisement
ಯುದ್ಧದಲ್ಲಿ ಇಲ್ಲಿಯವರೆಗೂ ಹಮಾಸ್ ನಡೆಸಿದ ದಾಳಿಯಲ್ಲಿ 1,400ಕ್ಕೂ ಹೆಚ್ಚಿನ ಇಸ್ರೇಲ್ ನಾಗರಿಕರು ಸಾವಿಗೀಡಾಗಿದ್ದಾರೆ. ಬಳಿಕ ಗಾಜಾದ ಮೇಲಿನ ಇಸ್ರೇಲ್ ದಾಳಿಯಲ್ಲಿ 3,826 ಮಕ್ಕಳು ಸೇರಿದಂತೆ ಕನಿಷ್ಠ 9,227 ಪ್ಯಾಲೆಸ್ತೀನಿಯರು ಸಾವಿಗೀಡಾಗಿದ್ದಾರೆ. ಇದನ್ನೂ ಓದಿ: ಹಾಸನಾಂಬೆ ಸಾರ್ವಜನಿಕ ದರ್ಶನಕ್ಕೆ 2ನೇ ದಿನ- ದೇವಿ ದರ್ಶನ ಪಡೆಯುತ್ತಿರೋ ಭಕ್ತರು
Web Stories