ನವದೆಹಲಿ: ಇಸ್ರೇಲ್-ಹಮಾಸ್ ನಡುವೆ ಯುದ್ಧ ಮುಂದುವರಿದಿದ್ದು, ಈ ನಡುವೆ ದೆಹಲಿಯಲ್ಲಿರುವ (New Delhi) ಇಸ್ರೇಲ್ ರಾಯಭಾರಿ ಅಧಿಕಾರಿ (Ambassador of Israel) ನೌರ್ ಗಿಲೋನ್ ಮೇಲೆ ಮಾರಣಾಂತಿಕ ದಾಳಿ ಸಂಭವಿಸಬಹುದು ಮತ್ತು ಕಚೇರಿ (Embassy of Israel) ಮೇಲೆ ದಾಳಿ ನಡೆಯಬಹುದು ಎಂದು ಗುಪ್ತಚರ ಇಲಾಖೆ (Intelligence Department) ದೆಹಲಿ ಪೊಲೀಸರಿಗೆ ಎಚ್ಚರಿಕೆ ನೀಡಿದೆ.
ರಾಯಭಾರಿ ಮೇಲಿನ ದಾಳಿಯ ಬಗ್ಗೆ ದೇಶದ ಗುಪ್ತಚರ ಇಲಾಖೆಗೆ ಮಾಹಿತಿ ನೀಡಿದೆ. ಇದಲ್ಲದೆ ಇಸ್ರೇಲ್ ರಾಯಭಾರ ಕಚೇರಿಗೂ ಸಾಮಾಜಿಕ ಜಾಲತಾಣಗಳಲ್ಲಿ ಬೆದರಿಕೆಗಳು ಬರುತ್ತಿವೆ. ಈ ಬಗ್ಗೆ ಮಾಹಿತಿ ಆಧರಿಸಿ ದೆಹಲಿಯ ರಾಯಭಾರಿ ಕಚೇರಿಗೆ ಭದ್ರತೆ ಹೆಚ್ಚಿಸಲಾಗಿದೆ. ಇದನ್ನೂ ಓದಿ: ದೆಹಲಿಯಲ್ಲಿ ತಗ್ಗಿದ ವಾಯು ಮಾಲಿನ್ಯ – ಶಾಲೆ, ಕಾಲೇಜುಗಳು ಪುನಾರಂಭ
Advertisement
Advertisement
ಎರಡು ದಿನಗಳ ಹಿಂದೆ ಕೇಂದ್ರ ಗೃಹ ಸಚಿವಾಲಯವು ದೆಹಲಿ ಪೊಲೀಸರಿಗೆ ಪತ್ರ ಬರೆದಿದ್ದು, ಇಸ್ರೇಲ್ ರಾಯಭಾರ ಕಚೇರಿಯಿಂದ ಪತ್ರ ಬಂದಿದೆ. ಇಸ್ರೇಲ್ ರಾಯಭಾರಿ ಮೇಲೆ ಉಗ್ರರ ದಾಳಿಯ ಬೆದರಿಕೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಬರುತ್ತಿವೆ ಎಂದು ರಾಯಭಾರ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಉಲ್ಲೇಖಿಸಿದೆ. ದೆಹಲಿ ಪೊಲೀಸರಿಗೆ ಸೂಕ್ತ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಳಲಾಗಿದೆ. ಇದನ್ನೂ ಓದಿ: ವಿಶಾಖಪಟ್ಟಣಂ ಬಂದರಿನಲ್ಲಿ ಬೆಂಕಿ ಅವಘಡ- 40 ದೋಣಿಗಳು ಭಸ್ಮ
Advertisement
ಇಸ್ರೇಲ್ ಅಬೆನ್ಸಿ ನವೆಂಬರ್ 16 ರಂದು ಗೃಹ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ. ಈ ಪತ್ರದ ಮೂಲಕ ಇಸ್ರೇಲ್ ರಾಯಭಾರಿಯ ಭದ್ರತೆಯನ್ನು ಕೂಡಲೇ ಹೆಚ್ಚಿಸುವಂತೆ ಗೃಹ ಸಚಿವಾಲಯಕ್ಕೆ ಆಗ್ರಹಿಸಲಾಗಿದೆ. ಗೃಹ ಸಚಿವಾಲಯದ ಪತ್ರದ ನಂತರ, ನವದೆಹಲಿ ಜಿಲ್ಲಾ ಪೊಲೀಸ್ ಉಪ ಆಯುಕ್ತ ಪ್ರವನ್ ತಾಯಲ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಇಸ್ರೇಲ್ ರಾಯಭಾರಿಗೆ ಬರುತ್ತಿರುವ ಬೆದರಿಕೆಗಳ ಬಗ್ಗೆ ವಿವರವಾಗಿ ತನಿಖೆ ನಡೆಸಬೇಕು ಎಂದು ಆದೇಶಿಸಿದ್ದಾರೆ. ಇದನ್ನೂ ಓದಿ: ವಿಶ್ವಕಪ್ ಟ್ರೋಫಿ ಮೇಲೆ ಕಾಲಿಟ್ಟು ಕುಳಿತ ಮಿಚೆಲ್ ಮಾರ್ಷ್- ಭಾರೀ ಟ್ರೋಲ್
Advertisement
ಗೃಹ ಸಚಿವಾಲಯದ ಪತ್ರದ ನಂತರ ನವದೆಹಲಿ ಜಿಲ್ಲಾ ಪೊಲೀಸ್ ಉಪ ಆಯುಕ್ತ ಪ್ರವನ್ ತಾಯಲ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಇಸ್ರೇಲ್ ರಾಯಭಾರಿಗೆ ಬರುತ್ತಿರುವ ಬೆದರಿಕೆಗಳ ಬಗ್ಗೆ ವಿವರವಾಗಿ ತನಿಖೆ ನಡೆಸಬೇಕು ಎಂದು ಆದೇಶಿಸಿದ್ದಾರೆ. ರಾಯಭಾರಿ ಮತ್ತು ಇಸ್ರೇಲ್ ರಾಯಭಾರಿ ಕಚೇರಿಯ ಭದ್ರತೆಯನ್ನು ಹೆಚ್ಚಿಸುವಂತೆ ಪೊಲೀಸ್ ಉಪ ಆಯುಕ್ತರು ಕೇಳಿಕೊಂಡಿದ್ದಾರೆ. ಅಲ್ಲದೆ ಈ ಭಾಗದಲ್ಲಿ ಬೀಟ್ ಮತ್ತು ಗಸ್ತು ಸಿಬ್ಬಂದಿ ಜಾಗರೂಕರಾಗಿರಲು ಆದೇಶಿಸಲಾಗಿದೆ. ಇದನ್ನೂ ಓದಿ: ಕೋಚ್ ಆಗಿ ಮುಂದುವರಿಯೋ ನಿರ್ಧಾರ ಕೈಗೊಳ್ಳಲು ಸಮಯಬೇಕು: ರಾಹುಲ್ ದ್ರಾವಿಡ್