– ಇಸ್ರೇಲ್‍ನಿಂದಲೂ ಪ್ರತಿದಾಳಿ
ಜೆರುಸಲೆಂ: ಇಸ್ರೇಲ್- ಪ್ಯಾಲೇಸ್ಟೈನ್ (Isreal- Palestine ನಡುವೆ ನಡೆಯುತ್ತಿರುವ ಕಾಳಗ ಸದ್ಯ ತಣ್ಣಗಾಗುವ ಲಕ್ಷಣಗಳು ಕಂಡು ಬರುತ್ತಿಲ್ಲ. ಇಷ್ಟು ದಿನ ಇಸ್ರೇಲ್ ಮೇಲೆ ಪ್ರತ್ಯೇಕವಾಗಿ ದಾಳಿ ಮಾಡುತ್ತಿದ್ದ ಹಮಾಸ್ ಮತ್ತು ಲೆಬನಾನ್‍ನ ಹಿಜ್ಬುಲ್ಲಾ ಈಗ ಏಕ ಕಾಲದಲ್ಲಿ ರಾಕೆಟ್ ಹಾರಿಸಲು ಶುರು ಮಾಡಿವೆ. ಇದಕ್ಕೆ ಪ್ರತಿದಾಳಿ ಆರಂಭಿಸಿರುವ ಇಸ್ರೇಲ್ ಗಾಜಾ (Gaza) ಪಟ್ಟಿಯಲ್ಲಿ ಬಿಳಿರಂಜಕದ ಬಳಕೆ ಮಾಡಿದೆ ಎನ್ನಲಾಗಿದೆ.
ಪ್ಯಾಲೇಸ್ಟೈನ್ ಮತ್ತು ಇಸ್ರೇಲ್ ನಡುವೆ ಯುದ್ಧ ಆರಂಭವಾಗಿ ಐದು ದಿನಗಳಾಗಿದೆ. ಆದರೂ ಎರಡು ದೇಶಗಳ ನಡುವೆ ನಡೆಯುತ್ತಿರುವ ಸಮರ ಅಂತ್ಯ ಕಾಣುತ್ತಿಲ್ಲ. ಈ ನಡುವೆ ಹಮಾಸ್ ದಾಳಿಯಿಂದ ದೇಶದಲ್ಲಿ ಸತ್ತವರ ಸಂಖ್ಯೆ 1,000ಕ್ಕಿಂತ ಹೆಚ್ಚಿದೆ ಎಂದು ಇಸ್ರೇಲಿ ಮಿಲಿಟರಿ ಹೇಳಿದೆ. ಇತ್ತ ಪ್ಯಾಲೇಸ್ಟೈನ್ ನಲ್ಲೂ ಸರಿ ಸುಮಾರು ಐದು ಸಾವಿರ ಜನರು ಸಾವನ್ನಪ್ಪಿದ್ದಾರೆ. ಸಾವಿರಾರು ಜನರು ಮನೆ ಮಠ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಇದನ್ನೂ ಓದಿ: ಯುದ್ಧ ನಾವು ಆರಂಭಿಸಿಲ್ಲ ಆದ್ರೆ ಮುಗಿಸುತ್ತೇವೆ – ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಗುಡುಗು
ರಾಕೆಟ್ ಹಾರಿಸಿ ಯುದ್ಧ ಸಾರಿದ ಹಮಾಸ್‍ನ ಯುದ್ಧದಾಹಿ ಮನಸ್ಥಿತಿ ಇನ್ನೂ ಕಡಿಮೆಯಾಗಿಲ್ಲ. ಇಸ್ರೇಲ್ ಮೇಲೆ ನಿರಂತರ ದಾಳಿ ಮಾಡುತ್ತಲೇ ಇದೆ. ಇಷ್ಟು ದಿನ ಇಸ್ರೇಲ್ ಮೇಲೆ ಪ್ರತ್ಯೇಕವಾಗಿ ದಾಳಿ ಮಾಡುತ್ತಿದ್ದ ಹಮಾಸ್ ಮತ್ತು ಲೆಬನಾನ್‍ನ ಹಿಜ್ಬುಲ್ಲಾ ಈಗ ಏಕ ಕಾಲದಲ್ಲಿ ರಾಕೆಟ್ ಹಾರಿಸಲು ಶುರು ಮಾಡಿವೆ. ಹಮಾಸ್ ಅಶ್ಕೆಲೋನ್, ಬೀರ್ ಗನಿಮ್ ಮತ್ತು ಜಿಕಿಮ್‍ನಲ್ಲಿ ಹೊಸ ದಾಳಿ ಮಾಡಿದೆ. ಹಿಜ್ಬುಲ್ಲಾ ತನ್ನ ಇಸ್ರೇಲ್ ಗಡಿಯಲ್ಲಿ 15 ರಾಕೆಟ್ ದಾಳಿ ಮಾಡಿದೆ. ಇದನ್ನೂ ಓದಿ: ಉಗ್ರರಿದ್ದ ಕಾರನ್ನು ಬೆನ್ನಟ್ಟಿ ಬೈಕ್ ಓಡಿಸುತ್ತಲೇ ಗುಂಡು ಹಾರಿಸಿದ ಇಸ್ರೇಲ್ ಪೊಲೀಸ್ – ರೋಚಕ ದೃಶ್ಯದ ವೀಡಿಯೋ ವೈರಲ್
ಇದಕ್ಕೆ ಪ್ರತಿ ದಾಳಿ ನಡೆಸಿರುವ ಇಸ್ರೇಲ್ ಸೇನೆ ದಕ್ಷೀಣ ಲೆಬನಾನ್‍ನಲ್ಲಿರುವ ಹಿಜ್ಬುಲ್ಲಾ ವೀಕ್ಷಣಾ ಸ್ಥಳಗಳನ್ನು ಗುರಿಯಾಗಿಸಿ ದಾಳಿ ಮಾಡಿದೆ. ಗಾಜಾ ಪಟ್ಟಿಯಲ್ಲಿ ಏರ್ ಸ್ಟೈಕ್ ಮುಂದುವರಿದಿದ್ದು, ಜೊತೆಗೆ ನಿಷೇಧಿತ ಬಿಳಿ ರಂಜಕ ಬಾಂಬ್‍ಗಳನ್ನು ಬಳಸುತ್ತಿದೆ ಎಂದು ವರದಿಯಾಗಿದೆ. ಅಷ್ಟಕ್ಕೂ ಏನಿದು ಬಿಳಿ ರಂಜಕದ ಬಾಂಬ್ ಅಂತಾ ನೋಡುವುದಾದ್ರೆ.
ಬಿಳಿ ರಂಜಕದ ಬಾಂಬ್ ದಾಳಿ ಯಾಕೆ?: ಇದು ಹೆಚ್ಚು ಸುಡುವ ರಾಸಾಯನಿಕವಾಗಿದ್ದು, ಗಾಳಿಯ ಸಂಪರ್ಕಕ್ಕೆ ಬಂದಾಗ ವೇಗವಾಗಿ ಸುಡುತ್ತದೆ. ಇದರ ರಾಸಾಯನಿಕ ಕ್ರಿಯೆಯು ತೀವ್ರವಾದ ಶಾಖವನ್ನು ಹೊರಸೂಸುತ್ತದೆ. ಬಿಳಿ ರಂಜಕವು ನೆಲದ ಮೇಲೆ ವೇಗವಾಗಿ ಹರಡುತ್ತದೆ, ಬೆಂಕಿಯನ್ನು ಉಂಟು ಮಾಡುತ್ತದೆ. ಚರ್ಮ ಮತ್ತು ಬಟ್ಟೆ ಸೇರಿದಂತೆ ಹಲವು ಮೇಲ್ಮೈಗಳಿಗೆ ವೇಗವಾಗಿ ಅಂಟಿಕೊಳ್ಳುತ್ತದೆ, ಉರಿ ಸೃಷ್ಟಿಸುತ್ತದೆ. ಅನೇಕ ರಾಷ್ಟ್ರಗಳು ತಮ್ಮ ಯುದ್ಧಗಳಲ್ಲಿ ಇದನ್ನು ವ್ಯಾಪಕವಾಗಿ ಬಳಸಿಕೊಂಡಿವೆ.
ಫೆನಿಯನ್ ಫೈರ್ ಎಂದು ಕರೆಯುವ ಇದನ್ನು ಮೊದಲ ಮತ್ತು 2ನೆಯ ಮಹಾಯುದ್ಧಗಳಲ್ಲಿ ಬ್ರಿಟಿಷ್ ಸೇನೆಯು ಬಳಸಿತು. 2006ರಲ್ಲಿ ಇಸ್ರೇಲ್ ಲೆಬನಾನ್ ಯುದ್ಧದ ಸಮಯದಲ್ಲಿ ಹೆಜ್ಬೊಲ್ಲಾ ವಿರುದ್ಧದ ಹೋರಾಟದಲ್ಲಿ ಬಳಸಿತು. ಇದೇ ತಂತ್ರವನ್ನೇ ಈಗ ಹಮಾಸ್ ವಿರುದ್ಧವೂ ಇಸ್ರೇಲ್ ಬಳಕೆ ಮಾಡುತ್ತಿದೆ. ಪ್ಯಾಲೇಸ್ಟೈನ್ ವಶಕ್ಕೆ ಹೊರಟಿರುವ ಇಸ್ರೇಲ್ ಎಲ್ಲ ಪ್ರಯತ್ನಗಳನ್ನು ಮಾಡುತ್ತಿರವುದಕ್ಕೆ ಇದೇ ಉದಾಹರಣೆ ಎನ್ನಲಾಗುತ್ತಿದೆ.
ಶನಿವಾರ ಹೋರಾಟ ಆರಂಭವಾದಾಗಿನಿಂದ ಗಾಜಾದಲ್ಲಿ ಕನಿಷ್ಠ 2,00,000 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ವಿಶ್ವಸಂಸ್ಥೆ ಹೇಳಿದೆ. ಇಸ್ರೇಲ್ ಪ್ರಧಾನಿ ಜೊತೆಗೆ ಮಾತನಾಡಿರುವ ಮೋದಿ ಭಯೋತ್ಪಾದನೆ ವಿರುದ್ಧ ಹೋರಾಟಕ್ಕೆ ಪೂರ್ಣ ಬೆಂಬಲ ನೀಡಿದ್ದಾರೆ. ಈ ನಡುವೆ ಆರ್ಥಿಕ ಸಹಾಯ ಮಾಡಿದೆ. ಈ ನಡುವೆ ಕ್ಯಾಬಿನೆಟ್ ಸಭೆ ನಡೆಸಿರುವ ಇಸ್ರೇಲ್ ಪ್ರಧಾನಿ ಯುದ್ಧ ತೀವ್ರಗೊಳಿಸಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.
Web Stories