ಟೆಲ್ ಅವೀವ್: ತನ್ನನ್ನು ಕೆಣಕಿದ ಹಮಾಸ್ ಉಗ್ರರ ಮೇಲೆ ಇಸ್ರೇಲ್ ಬಾಂಬ್ (Israel Bomb) ದಾಳಿಯನ್ನು ಮುಂದುವರಿಸಿದೆ. ಈ ನಡುವೆ ಇಸ್ರೇಲ್ ವಾಯುಪಡೆಯು ಇದೇ ಮೊದಲ ಬಾರಿಗೆ ಅತ್ಯಂತ ಶಕ್ತಿಶಾಲಿ `ಐರನ್ ಸ್ಟಿಂಗ್’ (Iron Sting) ಬಾಂಬ್ ಅನ್ನು ಪ್ರಯೋಗಿಸಿ ದಾಳಿ ಮಾಡಿದೆ.
ಇಸ್ರೇಲ್ ವಾಯುಪಡೆಯ ಮ್ಯಾಗ್ಲಾನ್ ಘಟಕವು ಗಾಜಾ ಪಟ್ಟಿಯಲ್ಲಿರುವ ಹಮಾಸ್‌ನ ರಾಕೆಟ್ ಲಾಂಚರ್‌ಗಳನ್ನ ಗುರಿಯಾಗಿಸಲು ಮತ್ತು ಉಗ್ರರನ್ನ ಹತ್ಯೆಗೈಯಲು ಇಸ್ರೇಲ್ ಈ ಅಸ್ತ್ರ ಪ್ರಯೋಗಿಸಿರುವುದಾಗಿ ತಿಳಿಸಿದೆ. ಇದನ್ನೂ ಓದಿ: ಸಿಯಾಚಿನ್‌ನಲ್ಲಿ ಕರ್ತವ್ಯದಲ್ಲಿದ್ದ ಅಗ್ನಿವೀರ್ ಹುತಾತ್ಮ – ಸೇನೆಯಿಂದ ಗೌರವ
Advertisement
יחידת מגלן בשיתוף חיל-האוויר, סיכלה עשרות מחבלים באמצעות מגוון אמצעי לחימה, ביניהם פצצת מרגמה (פצמ״ר) חדשנית ומדויקת, הנקראת “עוקץ פלדה”.
צפו בתיעוד מתקיפת משגר רקטות באמצעות “עוקץ פלדה” pic.twitter.com/ucphdgboJN
— Israeli Air Force (@IAFsite) October 22, 2023
Advertisement
ವಾಯುಪಡೆಯ ಸಹಕಾರದೊಂದಿಗೆ ಮ್ಯಾಗ್ಲಾನ್ ಘಟಕವು `ಸ್ಟೀಲ್ ಸ್ಟಿಂಗ್’ ಹೆಸರಿನಿಂದ ಕರೆಯಲ್ಪಡುವ ಮೋರ್ಟರ್ ಬಾಂಬ್ ಸೇರಿದಂತೆ ವಿವಿಧ ಶಸ್ತ್ರಾಸ್ತ್ರಗಳನ್ನು ಬಳಸಿಕೊಂಡು ಡಜನ್‌ಗಟ್ಟಲೇ ಭಯೋತ್ಪಾದಕರನ್ನು ಹತ್ಯೆಗೈದಿದೆ. ಅಲ್ಲದೇ ಹಮಾಸ್ ಉಗ್ರರ (Hamas Terrorists) ದಾಳಿಯನ್ನು ಹಿಮ್ಮೆಟ್ಟಿಸುವಲ್ಲಿಯೂ ಯಶಸ್ವಿಯಾಗಿದೆ. ಇದರೊಂದಿಗೆ `ಸ್ಟೀಲ್ ಸ್ಟಿಂಗರ್’ ಬಳಸಿಕೊಂಡು ರಾಕೆಟ್ ಲಾಂಚರ್ ಮೇಲಿನ ದಾಳಿಯನ್ನು ಚಿತ್ರೀಕರಿಸಿ ಈ ವೀಡಿಯೋವನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.
Advertisement
Advertisement
ಕೇವಲ 14 ಸೆಕೆಂಡುಗಳ ವೀಡಿಯೋದಲ್ಲಿ 120 MM ಪವರ್‌ಫುಲ್ ಮಾರ್ಟರ್ ಶತ್ರು ಸೇನೆಯ ರಾಕೆಟ್ ಲಾಂಚರ್‌ಗಳನ್ನ (Rocket Launchers) ಬ್ಲಾಸ್ಟ್ ಮಾಡುತ್ತಿರುವುದನ್ನು ತೋರಿಸಿದೆ. ಸದ್ಯ ಈ ವೀಡಿಯೋ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ: 25 ವರ್ಷಗಳ ಒಡನಾಟಕ್ಕೆ ಬ್ರೇಕ್ – BJPಗೆ ನಟಿ ಗೌತಮಿ ತಡಿಮಲ್ಲ ಗುಡ್‍ಬೈ
ಮುಖ್ಯವಾಗಿ `ಐರನ್ ಸ್ಟಿಂಗ್’ ಎಂಬುದು 120 MM ಯುದ್ಧ ಸಾಮಗ್ರಿಯಾಗಿದ್ದು, ಲೇಸರ್ ಮತ್ತು ಜಿಪಿಎಸ್ ನಿಂದ ಮಾರ್ಗದರ್ಶನ ಮಾಡಬಹುದಾಗಿದೆ (ಕಮಾಂಡಿಂಗ್ ಅಥವಾ ಗೈಡ್). 12 ಕಿಮೀವರೆಗಿನ ದಾಳಿ ಸಾಮರ್ಥ್ಯಗಳನ್ನು ಹೊಂದಿದೆ. 2021ರಲ್ಲಿ ಅಮೆರಿಕದ ಪ್ರತಿಷ್ಠಿತ ಎಲ್ಬಿಟ್ ಸಿಸ್ಟಮ್ಸ್ ಕಂಪನಿ ಈ ಅಸ್ತ್ರವನ್ನು ಅಭಿವೃದ್ಧಿಪಡಿಸಿ, ಮೊದಲಬಾರಿಗೆ ಬಹಿರಂಗಪಡಿಸಿತ್ತು. ಇದೀಗ ಇಸ್ರೇಲ್ ದಾಳಿಯಲ್ಲೂ ಈ ಪವರ್ ಫುಲ್ ಅಸ್ತ್ರವನ್ನು ಬಳಸಲಾಗುತ್ತಿದೆ. ಇದನ್ನೂ ಓದಿ: Israel Hamas War: ಸಂಕಷ್ಟದಲ್ಲಿರುವ ಪ್ಯಾಲೆಸ್ತೀನಿಯರಿಗೆ ಭಾರತದಿಂದ ಮಾನವೀಯ ನೆರವು
Web Stories