ಬೈರುತ್: ಅಮೆರಿಕ-ಇರಾನ್ (US-Iran) ಮಾತುಕತೆ ವಿಫಲವಾದ ಕೆಲವೇ ಗಂಟೆಗಳ ನಂತರ ಹೆಜ್ಬೊಲ್ಲಾ (Hezbollah) ಭದ್ರಕೋಟೆಯನ್ನು ಗುರಿಯಾಗಿಸಿಕೊಂಡು ಇಸ್ರೇಲ್ (Israel) ನಡೆಸಿದ ದಾಳಿಯಲ್ಲಿ 11 ಮಂದಿ ಸಾವನ್ನಪ್ಪಿದ್ದಾರೆ.
ದಕ್ಷಿಣ ಲೆಬನಾನ್ನ ಟೈರ್ ಬಳಿಯ ಮಾರೂಬ್ ಮೇಲೆ ಇಸ್ರೇಲಿ ದಾಳಿ ನಡೆಸಿದೆ. ದಕ್ಷಿಣ ಪಟ್ಟಣವಾದ ಬಿಂಟ್ ಜೆಬೈಲ್ನಲ್ಲಿ ಇಸ್ರೇಲಿ ಮಿಲಿಟರಿ ಮತ್ತು ಹೆಜ್ಬೊಲ್ಲಾ ನಡುವೆ ತೀವ್ರ ಘರ್ಷಣೆಗಳು ನಡೆದಿವೆ ಎಂದು ವರದಿ ಮಾಡಿದೆ. ಇದನ್ನೂ ಓದಿ: ಅಮೆರಿಕದ ಅಸಮಂಜಸ ಬೇಡಿಕೆಗಳಿಂದ ಮಾತುಕತೆ ವಿಫಲ: ಇರಾನ್ ಬೇಸರ
ಇಸ್ರೇಲಿ ಪಡೆಗಳು, ಹೆಜ್ಬೊಲ್ಲಾ ಕಾರ್ಯಕರ್ತರು ಮತ್ತು ಮೂಲಸೌಕರ್ಯಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯ ಭಾಗವಾಗಿ ಪಟ್ಟಣವನ್ನು ಸುತ್ತುವರೆದಿವೆ. ಇಸ್ರೇಲಿ ಪಡೆಗಳು ಬಿಂಟ್ ಜೆಬೈಲ್ನಲ್ಲಿ ಉಳಿದ ನೆರೆಹೊರೆಗಳಿಗೆ ನುಸುಳಲು ಮತ್ತು ನಿಯಂತ್ರಣ ಸಾಧಿಸಲು ಇನ್ನೂ ಪ್ರಯತ್ನಿಸುತ್ತಿವೆ ಎನ್ನಲಾಗಿದೆ.
ಮಧ್ಯಪ್ರಾಚ್ಯ ಹಾಗೂ ಗಲ್ಫ್ನಲ್ಲಿ ಯುದ್ಧ ನಿಲ್ಲಿಸಲು ಇರಾನ್ ಮತ್ತು ಅಮೆರಿಕ ನಡುವೆ ಶನಿವಾರ ಸಂಧಾನ ಸಭೆ ನಡೆಯಿತು. ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ನಡೆದ ಸಂಧಾನ ಮಾತುಕತೆ ವಿಫಲವಾಗಿದೆ. ಇದನ್ನೂ ಓದಿ: ಇರಾನ್-ಅಮೆರಿಕ ಸಂಧಾನ ಮಾತುಕತೆ ವಿಫಲ – ‘ಕಹಿ ಸುದ್ದಿ’ ಎಂದ ಯುಎಸ್ ಉಪಾಧ್ಯಕ್ಷ

