ಬೈರೂತ್: ಇಸ್ರೇಲ್ ಸೇನೆಯು ಸೆಂಟ್ರಲ್ ಬೈರೂತ್‌ನ ವಿಶ್ವಸಂಸ್ಥೆ ಶಾಂತಿಪಾಲನಾ ಪ್ರಧಾನ ಕಚೇರಿ ಮೇಲೆ ನಡೆಸಿದ ಭೀಕರ ವೈಮಾನಿಕ ದಾಳಿಯಲ್ಲಿ (Israeli Strikes) 22 ಮಂದಿ ಹತ್ಯೆಯಾಗಿದ್ದು, ಸುಮಾರು 117 ಮಂದಿ ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ಈ ದಾಳಿಯಲ್ಲಿ ಹಿಜ್ಬುಲ್ಲಾದ (Hezbollah) ಉನ್ನತ ಅಧಿಕಾರಿಯೊಬ್ಬರು ಬದುಕುಳಿದಿದ್ದಾರೆ ಎಂದು ಲೆಬನಾನ್ ಆರೋಗ್ಯ ಸಚಿವಾಲಯ ಹೇಳಿಕೊಂಡಿದೆ.
ಕಳೆದ 1 ವರ್ಷದಲ್ಲಿ ಇಸ್ರೇಲ್ (Israel) ನಡೆಸಿದ ಮಾರಣಾಂತಿಕ ದಾಳಿಗಳಲ್ಲಿ ಇದು ಒಂದು ಎನ್ನಲಾಗಿದೆ. ದಾಳಿಯಿಂದ ಲೆಬನಾನ್‌ನಲ್ಲಿ ವಿಶ್ವಸಂಸ್ಥೆಯ ಶಾಂತಿ ಪಾಲಕರಿಗೆ ಅಪಾಯವುಂಟಾಗಿದ್ದು, ಅಂತಾರಾಷ್ಟ್ರೀಯ ಕಾನೂನು ಉಲ್ಲಂಘನೆಯಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಇಸ್ರೇಲ್ ಕೆಣಕಿ ತಪ್ಪು ಮಾಡಿತೇ ಇರಾನ್? – ಉಭಯ ರಾಷ್ಟ್ರಗಳ ಸೇನಾ ಸಾಮರ್ಥ್ಯ ನೋಡಿದ್ರೆ ಮೈ ನಡುಗುತ್ತೆ!
- Advertisement
- Advertisement
ಸೆಂಟ್ರಲ್ ಬೈರೂತ್‌ನ ವಿಶ್ವಸಂಸ್ಥೆ ಶಾಂತಿಪಾಲನಾ ಪ್ರಧಾನ ಕಚೇರಿ, ಲೆಬನಾನ್ ಸೇನಾ ಟ್ಯಾಂಕರ್‌ಗಳನ್ನ ಗುರಿಯಾಗಿಸಿ ಇಸ್ರೇಲ್ ದಾಳಿ ನಡೆಸಿದೆ. ಹಿಜ್ಬುಲ್ಲಾ ಮುಖ್ಯಸ್ಥ ನಸ್ರಲ್ಲಾನನ್ನ ಹೊಡೆದುರುಳಿಸಿದ ನಂತರ ಉನ್ನತ ಅಧಿಕಾರಿಗಳ ಸರಣಿ ಹತ್ಯೆಯನ್ನೇ ಹೆಚ್ಚಾಗಿ ಗುರಿಯಾಗಿಸಿದೆ. ಆದ್ರೆ ಈ ದಾಳಿಯಲ್ಲಿ ಹಿಜ್ಬುಲ್ಲಾದ ಉನ್ನತಾಧಿಕಾರಿ ಬದುಕುಳಿದಿದ್ದಾರೆ. ಈ ದಾಳಿಯು ಅಂತಾರಾಷ್ಟ್ರೀಯ ಕಾನೂನು ಉಲ್ಲಂಘನೆ ಮಾಡಿದೆ ಎಂದು ಸ್ಪೇನ್ ಹಾಗೂ ಇಟಲಿ ದೇಶಗಳು ಆರೋಪಿಸಿವೆ.
ಇತ್ತೀಚೆಗೆ ಇಸ್ರೇಲ್ ಹಿಜ್ಬುಲ್ಲಾದ 120 ಉಗ್ರ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿತ್ತು. ಆ ನಂತರ ನಡೆದ ಅತಿದೊಡ್ಡ ದಾಳಿಯಾಗಿದೆ. ಇದನ್ನೂ ಓದಿ: ಇಸ್ರೇಲ್ ಯುದ್ಧಕ್ಕೆ ಬೆಚ್ಚಿದ ಜನ – 2.20 ಲಕ್ಷ ಮಂದಿ ಲೆಬನಾನ್‌ನಿಂದ ಸಿರಿಯಾಕ್ಕೆ ಪಲಾಯನ
2.20 ಲಕ್ಷ ಮಂದಿ ಲೆಬನಾನ್‌ನಿಂದ ಸಿರಿಯಾಕ್ಕೆ ಪಲಾಯನ
ಇತ್ತೀಚಿನ ದಿನಗಳಲ್ಲಿ ಇಸ್ರೇಲ್‌ನ ಯುದ್ಧ ವಿಮಾನಗಳು (Israeli Fighter Jets) ಲೆಬನಾನ್‌ನ ಬೆಕಾ ಪ್ರದೇಶ ಮತ್ತು ಬೈರೂತ್‌ನಲ್ಲಿ ವ್ಯಾಪಕವಾದ ವೈಮಾನಿಕ ದಾಳಿಗಳನ್ನು ನಡೆಸಿದೆ. ಮೂಲಸೌಕರ್ಯ ತಾಣಗಳು, ಲಾಂಚರ್‌ಗಳು, ಕಮಾಂಡ್ & ಕಂಟ್ರೋಲ್ ಸೆಂಟರ್‌ಗಳು ಹಾಗೂ ಶಸ್ತ್ರಾಸ್ತ್ರಗಳ ಸಂಗ್ರಹಣಾ ಸೌಲಭ್ಯ ಕೇಂದ್ರಗಳನ್ನು ಗುರಿಯಾಗಿಸಿ ದಾಳಿ ನಡೆಸಿವೆ. ಸದ್ಯಕ್ಕೆ ಕದನ ವಿರಾಮ ಘೋಷಣೆಯಾಗುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಇದರಿಂದ ಭಯಭೀತರಾಗಿರುವ 2.20 ಲಕ್ಷ ಮಂದಿ ಸಿರಿಯಾಕ್ಕೆ ಪಲಾಯನ ಮಾಡಿದ್ದಾರೆ ಎಂದು ವರದಿಗಳು ತಿಳಿಸಿವೆ.