ಜೆರುಸಲೇಂ: ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್‌ನ (Yahya Sinwar) ‘ಕೊನೆಯ ಕ್ಷಣಗಳು’ ಎಂದು ಹೇಳಿದ ಡ್ರೋನ್ ದೃಶ್ಯಗಳನ್ನು ಇಸ್ರೇಲ್ ರಕ್ಷಣಾ ಪಡೆಗಳು ಬಿಡುಗಡೆ ಮಾಡಿದೆ.
ಹಾನಿಗೊಳಗಾದ ಮತ್ತು ಶಿಥಿಲಗೊಂಡ ಮನೆಯೊಳಗೆ ಸಿನ್ವಾರ್ ಮಂಚದ ಮೇಲೆ ಕುಳಿತಿರುವುದನ್ನು ವೀಡಿಯೋ ತೋರಿಸಿದೆ. ಆತನ ಅಂತಿಮ ಕ್ಷಣಗಳಲ್ಲಿ, ಡ್ರೋನ್‌ಗೆ ವಸ್ತುವನ್ನು ಎಸೆಯುವುದನ್ನು ವೀಡಿಯೋದಲ್ಲಿ ಕಾಣಬಹುದು. ಇದನ್ನೂ ಓದಿ: ಇಸ್ರೇಲ್, ಜಗತ್ತಿಗೆ ಇದು ಒಳ್ಳೆಯ ದಿನ: ಹಮಾಸ್ ಮುಖ್ಯಸ್ಥನ ಹತ್ಯೆಗೆ ಅಮೆರಿಕ ಸಂತಸ
Raw footage of Yahya Sinwar’s last moments: pic.twitter.com/GJGDlu7bie
— LTC Nadav Shoshani (@LTC_Shoshani) October 17, 2024
ಇಸ್ರೇಲ್ (Israel) ಗುರುವಾರ ಗಾಜಾ ಕಾರ್ಯಾಚರಣೆಯಲ್ಲಿ 62 ವಯಸ್ಸಿನ ಸಿನ್ವಾರ್‌ನನ್ನು ಹತ್ಯೆ ಮಾಡಿತು. ‘ಎಲಿಮಿನೇಟೆಡ್: ಯಾಹ್ಯಾ ಸಿನ್ವಾರ್’ ಎಂದು ಐಡಿಎಫ್ (ಇಸ್ರೇಲಿ ಮಿಲಿಟರಿ) ಸೋಷಿಯಲ್ ಮೀಡಿಯಾ ಪೋಸ್ಟ್ ಹಾಕಿದೆ.
ಅಕ್ಟೋಬರ್ 7 ರ ಹತ್ಯಾಕಾಂಡ ಮತ್ತು ದುಷ್ಕೃತ್ಯಗಳಿಗೆ ಕಾರಣವಾದ ಕೊಲೆಗಾರ ಯಾಹ್ಯಾ ಸಿನ್ವಾರ್ ಅನ್ನು ಐಡಿಎಫ್ (ಇಸ್ರೇಲಿ ಮಿಲಿಟರಿ) ಸೈನಿಕರು ನಿರ್ಮೂಲನೆ ಮಾಡಿದರು ಎಂದು ವಿದೇಶಾಂಗ ಸಚಿವ ಇಸ್ರೇಲ್ ಕಾಟ್ಜ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಹಮಾಸ್ ಮುಖ್ಯಸ್ಥ ಹತ್ಯೆ – ನಮ್ಮ ಮಿಲಿಟರಿಗೆ ಸಿಕ್ಕಿದ ಜಯ ಎಂದ ಇಸ್ರೇಲ್
ಹತ್ಯೆಯಾದ ಸಿನ್ವಾರ್ ಅ.7 ರ ದಾಳಿಯ ಮಾಸ್ಟರ್ ಮೈಂಡ್ ಎಂದು ಹೇಳಲಾಗಿದೆ. ಇದು ಇಸ್ರೇಲಿ ಇತಿಹಾಸದಲ್ಲಿ ಅತ್ಯಂತ ಕರಾಳ ದಿನ ಎನ್ನಲಾಗಿದೆ. ದಾಳಿಯು 1,206 ಜನರ ಸಾವಿಗೆ ಕಾರಣವಾಯಿತು.