ಟೆಲ್ ಅವಿವ್: ಪ್ಯಾಲೆಸ್ತೀನ್ (Palestine) ಮತ್ತು ಇಸ್ರೇಲ್ (Israel) ನಡುವೆ ಯುದ್ಧ ಮುಂದುವರೆದಿದ್ದು, 9ನೇ ದಿನಕ್ಕೆ ಕಾಲಿಟ್ಟಿದೆ. ಈ ನಡುವೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu) ಸ್ವತಃ ಯುದ್ಧಭೂಮಿಗಿಳಿದಿದ್ದು, ಹಮಾಸ್ ಬಂಡುಕೋರರಿಗೆ (Hamas Militants) ನೇರ ಎಚ್ಚರಿಕೆಯನ್ನು ನೀಡಿದ್ದಾರೆ.
ಗಾಜಾ ಪಟ್ಟಿಯಲ್ಲಿರುವ (Gaza Stripe) ಇಸ್ರೇಲ್ ರಕ್ಷಣಾ ಪಡೆಗಳನ್ನು ಖುದ್ದು ಭೇಟಿ ಮಾಡಿದ ನೆತನ್ಯಾಹು ಸೈನಿಕರ ಸ್ಥೈರ್ಯವನ್ನು ಹೆಚ್ಚಿಸಿದ್ದಾರೆ. ಐಡಿಎಫ್ (IDF) ಸಿಬ್ಬಂದಿಯೊಂದಿಗಿನ ಸಂವಾದದ ದೃಶ್ಯಗಳನ್ನು ಇಸ್ರೇಲ್ ಪ್ರಧಾನಿ ಸಾಮಾಜಿಕ ಜಾಲತಾಣವಾದ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಯುದ್ಧ ಪೀಡಿತ ಇಸ್ರೇಲ್‍ನಿಂದ 197 ಜನರನ್ನು ಹೊತ್ತು ದೆಹಲಿಯೆಡೆಗೆ ಹಾರಿದ 3ನೇ ವಿಮಾನ
ಆಟ ಇನ್ನು ಮುಗಿದಿಲ್ಲ, ಅಸಲಿ ಆಟ ಇನ್ನು ಶುರು ಎನ್ನುವ ಮೂಲಕ ಸೈನಿಕರ ಜೊತೆಗಿನ ಸಂವಾದದಲ್ಲಿ ಹಮಾಸ್ ಬಂಡುಕೋರರಿಗೆ ನೆತನ್ಯಾಹು ಬಿಸಿ ಮುಟ್ಟಿಸಿದ್ದಾರೆ. ನಾವೆಲ್ಲರೂ ಸಿದ್ಧ ಎಂದು ತೀವ್ರ ಪ್ರತಿದಾಳಿಯ ಸಂದೇಶ ನೀಡಿದ್ದಾರೆ.
ಗಾಜಾಪಟ್ಟಿಯಲ್ಲಿ ಇಸ್ರೇಲ್ ಏರ್‌ಸ್ಟ್ರೈಕ್ (Air Strike) ಮುಂದುವರೆದಿದ್ದು, ಬಾಂಬ್ ದಾಳಿಗೆ ಹಲವು ಸ್ಥಳಗಳು ಧ್ವಂಸವಾಗಿದೆ. ಜಬಾಲಿಯಾ, ಬೀಚ್ ಕ್ಯಾಂಪ್‌ನಲ್ಲಿ ಶನಿವಾರ ಇಸ್ರೇಲ್ ದಾಳಿ ನಡೆಸಿದ್ದು, ಹತ್ತಾರು ಜನರು ಸಾವನ್ನಪ್ಪಿದ್ದಾರೆ. ಅಲ್ಲದೇ ನೂರಾರು ಜನರು ಗಾಯಗೊಂಡಿದ್ದಾರೆ. ಇದನ್ನೂ ಓದಿ: ಹಮಾಸ್‌ನ ವೈಮಾನಿಕ ಶ್ರೇಣಿಯ ಮುಖ್ಯಸ್ಥ ಅಬು ಮುರಾದ್ ಹತ್ಯೆ ಮಾಡಿದ ಇಸ್ರೇಲ್ ಭದ್ರತಾ ಪಡೆ
ಇಸ್ರೇಲ್ ಹಮಾಸ್ ಉಗ್ರರ ವಿರುದ್ಧ ಪ್ರತಿಕಾರದ ಶಪಥ ಮಾಡಿದೆ. ಉತ್ತರ ಗಾಜಾದಲ್ಲಿ ವಾಯುಸೇನೆಯಿಂದ ಏರ್‌ಸ್ಟ್ರೈಕ್ ನಡೆದ ಪರಿಣಾಮ ಅಮಾಯಕ ಜೀವಗಳು ಬಲಿಯಾಗಿವೆ. ದಾಳಿಗೂ ಮುನ್ನ ಜನರು ಸ್ಥಳಾಂತರವಾಗುವಂತೆ ಸೂಚಿಸಿದ್ದು, ಸೇನೆ ಸ್ಥಳಾಂತರದ ಅವಧಿ ಮಧ್ಯೆ ಹಲವು ದಾಳಿ ನಡೆಸಿದೆ. ಮಕ್ಕಳ ಮೇಲೆ ಹಮಾಸ್ ವಿಕೃತಿ ಮೆರೆಯುತ್ತಿರುವ ವಿಡಿಯೋವನ್ನು ಇಸ್ರೇಲ್ ಭದ್ರತಾಪಡೆ ಹಂಚಿಕೊಂಡಿದ್ದು, ಇವರೇ ನಾವು ಸೋಲಿಸಲು ಹೊರಟಿರುವ ಭಯೋತ್ಪಾದಕರು ಎಂದು ಇಸ್ರೇಲ್ ಸೇನೆ ಹೇಳಿದೆ. ಗಾಯಗೊಂಡ ಮಕ್ಕಳನ್ನು ಒತ್ತೆಯಾಳಾಗಿಟ್ಟುಕೊಂಡ ಹಮಾಸ್ ವಿರುದ್ಧ ಪ್ರತಿಕಾರವನ್ನು ತೀರಿಸಿಕೊಳ್ಳಲು ಇಸ್ರೇಲ್ ಶಪಥ ಮಾಡಿದೆ.
ಭೂ ಆಯ್ತು, ವಾಯುವಾಯ್ತು. ಇದೀಗ ಸಮುದ್ರ ಮಾರ್ಗದಲ್ಲೂ ಹಮಾಸ್ ಮತ್ತು ಇಸ್ರೇಲ್ ಮುಖಾಮುಖಿಯಾಗಿದ್ದು, ಇಸ್ರೇಲ್ ಗಡಿ ಪ್ರವೇಶಕ್ಕೆ ಪ್ರಯತ್ನಿಸಿದ ಹಮಾಸ್ ಮೇಲೆ ಇಸ್ರೇಲ್ ಗುಂಡಿನ ದಾಳಿ ನಡೆಸಿದೆ. ಸಮುದ್ರದಲ್ಲಿ ಹಮಾಸ್ ಮತ್ತು ಇಸ್ರೇಲ್ ನೇರಾನೇರಾ ಕಾದಾಡಿದ್ದು, ಭೀಕರ ಕಾಳಗದ ವಿಡಿಯೋ ಮೈ ಜುಮ್ ಎನ್ನಿಸುತ್ತದೆ. ಸಮುದ್ರ ಮಾರ್ಗದ ಮೂಲಕ ದಾಳಿಗೆ ಹಮಾಸ್ ಯತ್ನಿಸಿದ್ದು, ಹಮಾಸ್ ದೋಣಿಯನ್ನೇ ಇಸ್ರೇಲ್ ನಾಶ ಮಾಡಿದೆ. ಇದನ್ನೂ ಓದಿ: ಹಮಾಸ್ ಬಂಡುಕೋರರು ಶುದ್ಧ ದುಷ್ಠರು: ಬೈಡನ್ ಕೆಂಡ
Web Stories