ಟೆಲ್ ಅವೀವ್: ಕೇವಲ ಗಾಜಾ ಪಟ್ಟಿಯಲ್ಲಿ (Gaza Strip) ಅಲ್ಲ ವಿಶ್ವದೆಲ್ಲೆಡೆ ಇರುವ ಹಮಾಸ್ (Hamas) ನಾಯಕರನ್ನು ಹತ್ಯೆ ಮಾಡಲು ಇಸ್ರೇಲ್ (Israel) ಈಗ ಮುಂದಾಗಿದೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Israeli Prime Minister Benjamin Netanyahu) ಇಸ್ರೇಲಿನ ವಿದೇಶಿ ಗುಪ್ತಚರ ಸೇವೆ ನೀಡುವ ಮೊಸಾದ್‌ಗೆ (Mossad) ವಿಶ್ವದೆಲ್ಲೆಡೆ ಇರುವ ಹಮಾಸ್ ನಾಯಕರನ್ನು ಹುಡುಕಿ ಹುಡುಕಿ ಹತ್ಯೆ ಮಾಡುವಂತೆ ಆದೇಶ ನೀಡಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
Advertisement
Advertisement
ಟರ್ಕಿ, ಲೆಬನಾನ್ ಮತ್ತು ಕತಾರ್‌ನಲ್ಲಿ ನೆಲೆಸಿರುವ ಹಮಾಸ್ ನಾಯಕರನ್ನು ಪತ್ತೆ ಹಚ್ಚುವ ಕೆಲಸವನ್ನು ಗುಪ್ತಚರ ಇಲಾಖೆ ಆರಂಭಿಸಿದೆ. ಕತಾರ್ ತನ್ನ ರಾಜಧಾನಿ ದೋಹಾದಲ್ಲಿ ಕಳೆದ ಒಂದು ದಶಕದಿಂದ ರಾಜಕೀಯ ಕಚೇರಿಯನ್ನು ನಡೆಸಲು ಹಮಾಸ್‌ಗೆ ಅವಕಾಶ ಮಾಡಿಕೊಟ್ಟಿದೆ ಎಂದು ವರದಿ ತಿಳಿಸಿದೆ. ಇದನ್ನೂ ಓದಿ: ಕದನ ವಿರಾಮದ ನಡುವೆಯೂ ಗಾಜಾದಲ್ಲಿ ಐವರು ಒತ್ತೆಯಾಳುಗಳ ಸಾವು
Advertisement
ಸಾಮಾನ್ಯವಾಗಿ ಈ ರೀತಿಯ ಯೋಜನೆಗಳು ರಹಸ್ಯವಾಗಿರುತ್ತದೆ. ಆದರೆ ನೆತನ್ಯಾಹು ನ.22 ರಂದು ಹಿರಿಯ ಅಧಿಕಾರಿಗಳ ಜೊತೆಗೆ ನಡೆಸಿದ ಸಭೆಯಲ್ಲಿ ವಿದೇಶದಲ್ಲಿ ನೆಲೆಸಿರುವ ಹಮಾಸ್ ನಾಯಕರ ವಿರುದ್ಧ ಕಾರ್ಯನಿರ್ವಹಿಸಲು ಸೂಚನೆ ನೀಡಿದ್ದೇನೆ ಎಂದು ಬಹಿರಂಗವಾಗಿ ತಿಳಿಸಿದ್ದಾರೆ.
Advertisement
ವಿದೇಶದಲ್ಲಿ ಹಮಾಸ್ ನಾಯಕರನ್ನು ಇಸ್ರೇಲ್ ಹತ್ಯೆ ಮಾಡುವುದು ಹೊಸದೆನಲ್ಲ. ಈ ಹಿಂದೆ ಹಲವು ರಹಸ್ಯ ಕಾರ್ಯಾಚರಣೆ ನಡೆಸಿ ನಾಯಕರನ್ನು ಹತ್ಯೆ ಮಾಡಿತ್ತು. ಲೆಬನಾನ್ ಮತ್ತು ಬೈರುತ್‌ನಲ್ಲಿದ್ದ ಪ್ಯಾಲೆಸ್ತೇನಿಯನ್ ಉಗ್ರಗಾಮಿಗಳ ಮೇಲೆ ಮಹಿಳೆಯರ ಮೂಲಕ ಇಸ್ರೇಲ್ ದಾಳಿ ನಡೆಸಿ ಕೊಂದು ಹಾಕಿತ್ತು. ಪ್ರವಾಸಿಯ ಸೋಗಿನಲ್ಲಿ ದುಬೈನಲ್ಲಿದ್ದ ಹಮಾಸ್ ನಾಯಕನನ್ನು ಹತ್ಯೆ ಮಾಡಿತ್ತು. ಸಿರಿಯಾದಲ್ಲಿ ಹಿಜ್ಬುಲ್ಲಾ ನಾಯಕನನ್ನು ಕೊಲ್ಲಲು ಇಸ್ರೇಲ್ ಕಾರ್ ಬಾಂಬ್ ಬಳಸಿತ್ತು. ಇರಾನ್‌ನಲ್ಲಿ ಪರಮಾಣು ವಿಜ್ಞಾನಿಯನ್ನು ಕೊಲ್ಲಲು ರಿಮೋಟ್-ನಿಯಂತ್ರಿತ ರೈಫಲ್ ಬಳಸಿತ್ತು.