10ನೇ ದಿನಕ್ಕೆ ಕಾಲಿಟ್ಟ ವಾರ್- ಇಸ್ರೇಲ್‌ ಸರ್ಕಾರದ ಆದೇಶಕ್ಕೆ ಕಾದು ಕುಳಿತ ಸೇನಾ ಮುಖ್ಯಸ್ಥರು

Public TV
2 Min Read
Israel 15

ಟೆಲ್ ಅವಿವ್: ಇಸ್ರೇಲ್-ಪ್ಯಾಲೆಸ್ತೀನ್ (Israel-Palestine) ನಡುವಿನ ಘನಘೋರ ಯುದ್ಧ (War) 10ನೇ ದಿನಕ್ಕೆ ಕಾಲಿಟ್ಟಿದೆ. ನೆಲದ ದಾಳಿಗೆ ಇಸ್ರೇಲ್ ಭೂ ಸೇನೆ ಸಿದ್ಧವಾಗಿದ್ದು, ಸರ್ಕಾರದ ಆದೇಶಕ್ಕೆ ಇಸ್ರೇಲ್ ಸೈನಿಕರು ಕಾದುಕುಳಿತಿದ್ದಾರೆ. ಗಾಜಾ ಪಟ್ಟಿ (Gaza Strip) ಬಳಿ ನೂರಾರು ಟ್ಯಾಂಕರ್, ಲಕ್ಷಾಂತರ ಸೈನಿಕರು ಜಮಾವಣೆಗೊಂಡಿದ್ದಾರೆ. ಗಾಜಾದ ಉತ್ತರದಿಂದ ದಕ್ಷಿಣಕ್ಕೆ ತೆರಳಲು ಜನರಿಗೆ ಇಸ್ರೇಲ್ ಸೇನೆ ಸೂಚಿಸಿದೆ. ವಿದ್ಯುತ್, ನೀರು ಸೇರಿ ಎಲ್ಲ ಅಗತ್ಯ ವಸ್ತುಗಳ ಪೂರೈಕೆ ನಿಲ್ಲಿಸಲಾಗಿದ್ದು, ಅನ್ನ-ನೀರಿಲ್ಲದೆ ಹಮಾಸ್ ಸೇನೆ ಪರದಾಡುತ್ತಿದೆ.

ಇಸ್ರೇಲ್-ಪ್ಯಾಲೆಸ್ತೀನ್ ರಣಭೀಕರ ಯುದ್ಧಕ್ಕೆ 20ಕ್ಕೂ ಹೆಚ್ಚು ಅಮೆರಿಕದ ಪ್ರಜೆಗಳು ಬಲಿಯಾಗಿದ್ದಾರೆ. ತನ್ನ ಪ್ರಜೆಗಳನ್ನು ರಕ್ಷಿಸಿಕೊಳ್ಳಲು ಇಸ್ರೇಲ್‌ಗೆ ವಿಶೇಷ ಹಡಗನ್ನು ಅಮೆರಿಕ ಕಳುಹಿಸಿದೆ. ನೂರಾರು ಅಮೆರಿಕನ್ನರನ್ನು ಹೊತ್ತ ಮೊದಲ ವಿಶೇಷ ಹಡಗು ಅಮೆರಿಕದತ್ತ ಪಯಣ ಬೆಳೆಸಿದೆ. ಮತ್ತೊಂದೆಡೆ ಗಾಜಾಪಟ್ಟಿಯ ಮೇಲೆ ಇಸ್ರೇಲ್ ಏರ್‌ಸ್ಟ್ರೈಕ್ ಮುಂದುವರೆದಿದೆ. ಹೆಣಗಳ ಅಂತ್ಯಕ್ರಿಯೆಗೂ ಸಾಧ್ಯವಾಗದ ಸನ್ನಿವೇಶ ಸೃಷ್ಟಿಯಾಗಿದೆ. ಐಸ್‌ಕ್ರೀಮ್ ಟ್ರಕ್‌ಗಳಲ್ಲಿ ಮೃತ ದೇಹಗಳನ್ನು ಸಂಗ್ರಹಿಸಿಡುವ ಪರಿಸ್ಥಿತಿ ನಿರ್ಮಾಣವಾಗಿದೆ.

Israel 1 3

ಹಮಾಸ್ ವಿರುದ್ಧ ಇಸ್ರೇಲ್ ಮಿಲಿಟರಿ ಕಾರ್ಯಚರಣೆ ಮುಂದುವರೆದಿದೆ. ಗಡಿಯಲ್ಲಿ ಮಾರಣಹೋಮ ನಡೆಸುತ್ತಿದ್ದ 330ಕ್ಕೂ ಹೆಚ್ಚು ಬಂಡುಕೋರರನ್ನು ಇಸ್ರೇಲ್ ಸೈನಿಕರು ಬಂಧಿಸಿದ್ದಾರೆ. ಬಂಧಿತ ಬಂಡುಕೋರರಿಂದ ಭಾರೀ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ. ರೈಫಲ್, ಜೀವಂತ ಗುಂಡುಗಳು ವಶಕ್ಕೆ ಪಡೆದ ಫೋಟೋಗಳನ್ನು ಇಸ್ರೇಲ್ ಸೇನೆ ಬಿಡುಗಡೆ ಮಾಡಿದೆ. ಇತ್ತ ಲೆಬನಾನಿನ ಗಡಿಯಿಂದ ಇಸ್ಲಾಮಿಕ್ ಗುಂಪುಗಳು ರಾಕೆಟ್ ಉಡಾಯಿಸಿದ್ದು, ವಾಯುವ್ಯ ಇಸ್ರೇಲ್‌ನಲ್ಲಿ ಹಲವರಿಗೆ ಗಂಭೀರ ಗಾಯವಾಗಿದೆ. ಇದನ್ನೂ ಓದಿ: ಇಸ್ರೇಲ್-ಹಮಾಸ್ ಯುದ್ಧದಲ್ಲಿ ಭಾರತೀಯ ಮೂಲದ ಇಬ್ಬರು ಮಹಿಳಾ ಭದ್ರತಾ ಸಿಬ್ಬಂದಿ ಸಾವು

ಪ್ಯಾಲೆಸ್ತೀನ್ ನಿರ್ನಾಮಕ್ಕೆ ಇಸ್ರೇಲ್ ಪಣತೊಟ್ಟಿದೆ. ಇಸ್ರೇಲ್ ಸೈನಿಕರು ಗಾಜಾಪಟ್ಟಿ ಗಡಿಯಲ್ಲಿ ಹಮಾಸ್ ಉಗ್ರರ ಹೆಡೆಮುರಿ ಕಟ್ಟುತ್ತಿದ್ದಾರೆ. ಮತ್ತೊಂದುಕಡೆ ದಕ್ಷಿಣ ಗಾಜಾಕ್ಕೆ ಕುಡಿಯುವ ನೀರನ್ನು ನಿಲ್ಲಿಸಿದ್ದ ಇಸ್ರೇಲ್ ಸರ್ಕಾರ ಅಮೆರಿಕ ಅಧ್ಯಕ್ಷ ಜೋ ಬೈಡನ್ ಸೂಚನೆ ಮೇರೆಗೆ ಮರಳಿ ನೀರು ಪೂರೈಕೆ ಮಾಡುತ್ತಿದೆ. ಉತ್ತರ ಗಾಜಾ ಖಾಲಿ ಮಾಡುವಂತೆ ಇಸ್ರೇಲ್ ಸೂಚಿಸಿದ್ದು, ಈ ಹಿನ್ನೆಲೆ ದಕ್ಷಿಣ ಇಸ್ರೇಲ್‌ಗೆ ಹಂತ ಹಂತವಾಗಿ ಅಗತ್ಯ ವಸ್ತುಗಳ ಪೂರೈಕೆ ಮಾಡಲಾಗುತ್ತಿದೆ. ಅಗತ್ಯ ವಸ್ತುಗಳನ್ನು ಹುಡುಕಿಕೊಂಡು ಜನರು ಹೋಗುವಂತೆ ಪ್ಲ್ಯಾನ್ ಮಾಡುತ್ತಿದೆ. ಇದನ್ನೂ ಓದಿ: ಪಾಕ್ ಕ್ರಿಕೆಟಿಗರಿಗೆ ಜೈ ಶ್ರೀರಾಮ್‌ ಘೋಷಣೆ: ಉದಯನಿಧಿ ಆಕ್ಷೇಪ

Web Stories

Share This Article