ನವದೆಹಲಿ: ಇರಾನ್ (Iran) ನಡೆಸಿದ ಕ್ಷಿಪಣಿ ದಾಳಿಗೆ ಇಸ್ರೇಲ್ (Israel) ಖಾರವಾಗಿ ಪ್ರತಿಕ್ರಿಯೆ ನೀಡಿದೆ. ಶುಕ್ರವಾರ ಮಧ್ಯರಾತ್ರಿ 100 ಕ್ಕೂ ಹೆಚ್ಚು ಯುದ್ಧ ವಿಮಾನಗಳ (Air Strike) ಮೂಲಕ ಇರಾನ್‌ನ 20 ಕ್ಕೂ ಹೆಚ್ಚು ಮಿಲಿಟರಿ ಸ್ಥಳಗಳಲ್ಲಿ ಇಸ್ರೇಲ್ ಏರ್‌ಸ್ಟ್ರೈಕ್ ನಡೆಸಿದೆ. ಇಸ್ರೇಲ್ ದಾಳಿಯಿಂದ ಇರಾನ್‌ನಲ್ಲಿ ಭಾರಿ ನಷ್ಟವಾಗಿದೆ ಎಂದು ವರದಿಯಾಗಿದೆ.
ಅ.1 ರಂದು ಇರಾನ್ ಕ್ಷಿಪಣಿ ದಾಳಿ ನಡೆಸಿದಾಗ ಪ್ರತಿಕ್ರಿಯೆ ನೀಡುವುದಾಗಿ ಇಸ್ರೇಲ್ ಹೇಳಿತ್ತು. ಅದಕ್ಕೆ ಪೂರಕವಾಗಿ ಈ ಕಾರ್ಯಚರಣೆ ನಡೆದಿದೆ ಎಂದು ಇಸ್ರೇಲ್ ಸೇನೆ ಹೇಳಿಕೊಂಡಿದೆ. ಇರಾನ್ ವಿರುದ್ಧ ಇಸ್ರೇಲ್ ದಾಳಿ ಪ್ರಾರಂಭಿಸಿದಾಗ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಅವರು ಟೆಲ್ ಅವಿವ್‌ನಲ್ಲಿರುವ ಮಿಲಿಟರಿ ಪ್ರಧಾನ ಕಚೇರಿಯಲ್ಲಿದ್ದರು ಎಂದು ನೆತನ್ಯಾಹು ಅವರ ಕಚೇರಿ ತಿಳಿಸಿದೆ. ಇದನ್ನೂ ಓದಿ: ಭಾರತ-ಚೀನಾ ಗಡಿ ಉದ್ವಿಗ್ನತೆ ಶಮನಕ್ಕೆ ಮೊದಲ ಹೆಜ್ಜೆ; ಸೇನಾಪಡೆಗಳ ವಾಪಸ್ ಪ್ರಕ್ರಿಯೆ ಶುರು
ಟೆಹ್ರಾನ್‌ನಲ್ಲಿ ಮತ್ತು ಕರಾಜ್ ನಗರ ಸೇರಿದಂತೆ ಹತ್ತಿರದ ಮಿಲಿಟರಿ ನೆಲೆಗಳಲ್ಲಿ ಹಲವಾರು ಸ್ಫೋಟಗಳು ಸಂಭವಿಸಿವೆ. ರಾತ್ರಿ 2 ಗಂಟೆಯ ನಂತರ ದಾಳಿಗಳು ಪ್ರಾರಂಭವಾದವು. ಮೂರು ಅಲೆಗಳ ದಾಳಿಯನ್ನು ನಡೆಸಲಾಯಿತು ಎಂದಾದರೂ ಸ್ಥಳೀಯ ನಿವಾಸಿಗಳ ಪ್ರಕಾರ ಮೊದಲ ಸುತ್ತಿನಲ್ಲಿ ಕನಿಷ್ಠ ಏಳು ಸ್ಫೋಟಗಳು ಕೇಳಿಬಂದವು ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ.
ಇರಾನ್‌ನ ಪರಮಾಣು ಕೇಂದ್ರಗಳು ಮತ್ತು ತೈಲ ಘಟಕಗಳನ್ನು ಇಸ್ರೇಲ್ ಗುರಿಯಾಗಿಸಬಹುದು ಎಂದು ಹೇಳಲಾಗಿತ್ತು. ಆದರೆ ಈ ಪ್ರದೇಶಗಳನ್ನು ಇಸ್ರೇಲ್ ಗುರಿಯಾಗಿಸಿಲ್ಲ. ಇರಾನ್‌ನ ವಾಯು ರಕ್ಷಣಾ ವ್ಯವಸ್ಥೆಯು ಇಸ್ರೇಲ್‌ನ ಆಕ್ರಮಣವನ್ನು ಯಶಸ್ವಿಯಾಗಿ ಪತ್ತೆ ಹಚ್ಚಿದೆ. ಜೊತೆಗೆ ಕೆಲವು ಸ್ಥಳಗಳ ಮೇಲಿನ ದಾಳಿಯನ್ನು ಪ್ರತಿಬಂಧಿಸಿದೆ. ಇಸ್ರೇಲ್ ತೆಗೆದುಕೊಳ್ಳುವ ಯಾವುದೇ ಕ್ರಮಕ್ಕೆ ಅದರ ಅನುಪಾತದ ಪ್ರತಿಕ್ರಿಯೆಯನ್ನು ಎದುರಿಸಬೇಕಾಗುತ್ತದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಇರಾನ್ ಹೇಳಿದೆ. ಇದನ್ನೂ ಓದಿ: ಖಲಿಸ್ತಾನಿಗಳಿಗೆ ಟ್ರೂಡೋ ಸರ್ಕಾರದ್ದೇ ಬೆಂಬಲ – ಭಾರತೀಯ ಹೈಕಮೀಷನರ್ ಸಂಜಯ್ ವರ್ಮಾ
ಮುಂದಿನ ಸೂಚನೆ ಬರುವವರೆಗೂ ಇರಾನ್ ಎಲ್ಲಾ ಮಾರ್ಗಗಳಲ್ಲಿನ ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಇಸ್ರೇಲ್ ತನ್ನ ವಾಯುಪ್ರದೇಶವನ್ನು ನಾಗರಿಕ ವಿಮಾನಯಾನಕ್ಕೆ ಸಂಪೂರ್ಣವಾಗಿ ಮುಚ್ಚುವುದಾಗಿ ಘೋಷಿಸಿದೆ. ಪ್ರಾದೇಶಿಕ ಉದ್ವಿಗ್ನತೆಯಿಂದಾಗಿ ಮುಂದಿನ ಸೂಚನೆ ಬರುವವರೆಗೆ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ವಿಮಾನಗಳನ್ನು ಸ್ಥಗಿತಗೊಳಿಸುತ್ತಿದ್ದೇವೆ ಎಂದು ಇರಾಕ್‌ನ ಸಾರಿಗೆ ಸಚಿವಾಲಯ ತಿಳಿಸಿದೆ.
ಇರಾನ್ ವಿರುದ್ಧ ಇಸ್ರೇಲ್ ಸೇನಾ ಕಾರ್ಯಚರಣೆ ಬಗ್ಗೆ ಇಸ್ರೇಲ್ ಸೇನಾ ಮುಖ್ಯಸ್ಥ ಹರ್ಜಿ ಹಲೇವಿ ಮಾಹಿತಿ ನೀಡಿದ್ದಾರೆ. ಇಸ್ರೇಲ್ ಮೂರು ಹಂತದ ದಾಳಿ ನಡೆಸಿದೆ. ಈ ದಾಳಿಯ ಬಳಿಕ ಇಸ್ರೇಲ್ ಮಿಲಿಟರಿ ಕಾರ್ಯಾಚರಣೆ ಅಂತ್ಯವಾಗಿದೆ. ನಾವು ಇರಾನ್‌ನಲ್ಲಿನ ಮಿಲಿಟರಿ ಗುರಿಗಳ ಮೇಲೆ ನಿಖರವಾದ ದಾಳಿಗಳನ್ನು ನಡೆಸಿದ್ದೇವೆ. ಇಸ್ರೇಲ್ ಮೇಲಿನ ತಕ್ಷಣದ ಬೆದರಿಕೆಗಳನ್ನು ತಡೆಯುವುದು ನಮ್ಮ ಉದ್ದೇಶವಾಗಿತ್ತು. ಇದನ್ನೂ ಓದಿ: ಕೆನಡಾ | ಡಿವೈಡರ್‌ಗೆ ಡಿಕ್ಕಿ ಹೊಡೆದು ಹೊತ್ತಿ ಉರಿದ ಕಾರು – ನಾಲ್ವರು ಭಾರತೀಯರು ಸಾವು
ಇರಾನ್ ಕ್ಷಿಪಣಿ ದಾಳಿಗೆ ನಾವು ಪ್ರತಿಕ್ರಿಯೆ ನೀಡಿದ್ದೇವೆ. ಇರಾನ್‌ನಲ್ಲಿನ ಆಡಳಿತವು ಹೊಸ ದಾಳಿ ಪ್ರಾರಂಭಿಸುವ ತಪ್ಪನ್ನು ಮಾಡಿದರೆ, ನಮ್ಮ ಸಂದೇಶವು ಸ್ಪಷ್ಟವಾಗಿದೆ. ಇಸ್ರೇಲ್ ಅನ್ನು ಬೆದರಿಸಲು ಪ್ರಯತ್ನಿಸುವವರೆಲ್ಲರೂ ಭಾರೀ ದಂಡ ಪಾವತಿಸಬೇಕಾಗುತ್ತದೆ. ಇಸ್ರೇಲ್ ತನ್ನ ಜನರನ್ನು ರಕ್ಷಿಸಲು ನಾವು ಅಪರಾಧ ಮತ್ತು ರಕ್ಷಣೆಗೆ ಸಿದ್ಧರಾಗಿದ್ದೇವೆ. ದಾಳಿ ಅಂತ್ಯಗೊಳಿಸುವುದರ ಜೊತೆಗೆ ಪ್ರತಿ ದಾಳಿ ಮಾಡದಂತೆ ಎಚ್ಚರಿಕೆ ನೀಡಿದ ಇಸ್ರೇಲ್ ಸೇನಾ ಮುಖ್ಯಸ್ಥ ಇರಾನ್‌ಗೆ ಎಚ್ಚರಿಕೆ ನೀಡಿದ್ದಾರೆ.