ಟೆಲ್ ಅವೀವ್: ಕೋವಿಡ್-19 ಇನ್ನೂ ಔಷಧಿ ಪತ್ತೆಯಾಗಿಲ್ಲ. ಹಲವು ದೇಶಗಳಲ್ಲಿ ಔಷಧಿ ಕಂಡು ಹಿಡಿಯುವ ಪ್ರಯೋಗ ನಡೆಯುತ್ತಿದೆ. ಈ ನಡುವೆ ಇಸ್ರೇಲ್ ಕೊರೊನಾ ವೈರಸ್‍ಗೆ ಪ್ರತಿಕಾಯಗಳನ್ನು ಅಭಿವೃದ್ಧಿಪಡಿಸಿದೆ.
ಹೌದು. ಇಸ್ರೇಲ್ ಇನ್‍ಸ್ಟಿಟ್ಯೂಟ್ ಫಾರ್ ಬಯೋಲಾಜಿಕಲ್ ರಿಸರ್ಚ್ (ಐಐಬಿಆರ್) ಸಂಸ್ಥೆ ಕೊರೊನಾ ವೈರಸ್‍ಗೆ ಪ್ರತಿಕಾಯಗಳನ್ನು(ಆಂಟಿಬಾಡಿ) ಅಭಿವೃದ್ಧಿಪಡಿಸಿದೆ ಎಂದು ಇಸ್ರೇಲ್ ರಕ್ಷಣಾ ಸಚಿವ ನಫ್ತಾಲಿ ಬೆನೆಟ್ ಅಧಿಕೃತವಾಗಿ ಪ್ರಕಟಿಸಿದ್ದಾರೆ.
Advertisement
Advertisement
ಹೇಗೆ ಕೆಲಸ ಮಾಡುತ್ತೆ?
ಈ ಮೊನೊ ಕ್ಲೋನಲ್ ಆಂಟಿಬಾಡೀಸ್ ಸೋಂಕು ಪೀಡಿತರ ದೇಹದೊಳಗಿರುವ ವೈರಸ್ ನಿರ್ಮೂಲನೆ ಮಾಡುತ್ತದೆ ಅಥವಾ ಕೆಲಸ ಮಾಡದಂತೆ ತಟಸ್ಥಗೊಳಿಸುತ್ತದೆ. ಇದರಿಂದಾಗಿ ಸೋಂಕು ಮತ್ತೊಬ್ಬ ವ್ಯಕ್ತಿಗೆ ಹರಡುವುದಿಲ್ಲ. ವಿಶ್ವಾದ್ಯಂತ ಇರುವ ವಿವಿಧ ಕಂಪನಿಗಳ ಜೊತೆ ಈ ಪ್ರತಿಕಾಯಗಳ ಉತ್ಪಾದನೆ ಕುರಿತು ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ನಡೆಸಲಾಗುತ್ತಿದೆ ಎಂದು ನಫ್ತಾಲಿ ಬೆನೆಟ್ ಹೇಳಿದ್ದಾರೆ.
Advertisement
Advertisement
ಸಿಂಗಲ್ ರಿಕವರಿ ಸೆಲ್ ನಿಂದ ತಯಾರಿಸಿದ ಒಂದು ಮದ್ದಿಗೆ ಇಸ್ರೇಲ್ ಈಗಾಗಲೇ ಪೇಟೆಂಟ್ ಮಾಡಿಸಿದ್ದು, ಭಾರೀ ಪ್ರಮಾಣದಲ್ಲಿ ಉತ್ಪಾದನೆ ಮಾಡಲು ಚಿಂತನೆ ನಡೆಸಿದೆ.
ಇಸ್ರೇಲ್‍ನಲ್ಲಿ ಒಟ್ಟು 16,314 ಮಂದಿಗೆ ಸೋಂಕು ಬಂದಿದ್ದು, 238 ಮಂದಿ ಮೃತಪಟ್ಟಿದ್ದಾರೆ. 10,527 ಮಂದಿ ಗುಣಮುಖರಾಗಿದ್ದು, 5,549 ಸಕ್ರಿಯ ಪ್ರಕರಣಗಳಿವೆ.