Israel vs Iran War: ಹೊತ್ತಿ ಉರಿದ ಟೆಹ್ರಾನ್‌- ತೈಲ ಡಿಪೋ ಮೇಲೆ ಇಸ್ರೇಲ್‌ ದಾಳಿ

Public TV
1 Min Read
Israeli strikes hit irans oil Depot

ಟೆಲ್‌ ಅವೀವ್‌: ಇಸ್ರೇಲ್‌ ಮತ್ತು ಇರಾನ್‌ (Israel Iran War) ನಡುವಿನ ಸಂಘರ್ಷ ತೀವ್ರಗೊಳ್ಳುತ್ತಿದೆ. ತೈಲ ಡಿಪೋ ಮೇಲೆ ಇಸ್ರೇಲ್‌ ದಾಳಿ ನಡೆಸಿದೆ. ದಾಳಿಗೆ ಟೆಹ್ರಾನ್‌ (Tehran) ಹೊತ್ತಿ ಉರಿಯುತ್ತಿದೆ.

ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಅವರು ಶನಿವಾರ ಎಕ್ಸ್‌ನಲ್ಲಿ ಪೋಸ್ಟ್‌ನಲ್ಲಿ ‘ಟೆಹ್ರಾನ್ ಉರಿಯುತ್ತಿದೆ’ ಎಂದು ತಿಳಿಸಿದ್ದಾರೆ. ಇರಾನ್ ರಾಜಧಾನಿಯಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿರುವುದನ್ನು ತೋರಿಸುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ.‌ ಇದನ್ನೂ ಓದಿ: ಇರಾನ್‌ ಮೇಲೆ ಯಾವುದೇ ಕ್ಷಣದಲ್ಲೂ ದಾಳಿ – ದೊಡ್ಡ ಎಚ್ಚರಿಕೆ ಕೊಟ್ಟ ಇಸ್ರೇಲ್‌

Iran Israel

ಇರಾನಿನ ರಾಜ್ಯ ಮಾಧ್ಯಮವು, ಇಸ್ರೇಲಿ ವೈಮಾನಿಕ ದಾಳಿಯು ಟೆಹ್ರಾನ್‌ನ ವಾಯುವ್ಯದಲ್ಲಿರುವ ತೈಲ ಡಿಪೋವನ್ನು ಅಪ್ಪಳಿಸಿದೆ ಎಂದು ದೃಢಪಡಿಸಿದ ನಂತರ ಈ ಹೇಳಿಕೆ ಬಂದಿದೆ. ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುವ ದೃಶ್ಯಗಳು, ನಗರದ ಮೇಲೆ ದಟ್ಟವಾದ ಹೊಗೆ ಜೊತೆ ದೊಡ್ಡ ಮಟ್ಟದಲ್ಲಿ ಬೆಂಕಿ ಕಾಣಿಸಿಕೊಂಡಿರುವುದನ್ನು ತೋರಿಸಿದೆ.

ಟೆಹ್ರಾನ್‌ನಲ್ಲಿ ಸ್ಥಳೀಯ ಸಮಯ ನಸುಕಿನ ಜಾವ 2:30 ರ ಸುಮಾರಿಗೆ ಸ್ಫೋಟಗಳ ಶಬ್ದ ಕೇಳಿಬಂದವು. ಆದರೆ, ಇರಾನ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಡ್ರೋನ್ ಮತ್ತು ಕ್ಷಿಪಣಿ ಸಂಘರ್ಷದ ನಡುವೆ ಅವುಗಳ ಮೂಲ ತಕ್ಷಣಕ್ಕೆ ಸ್ಪಷ್ಟವಾಗಿಲ್ಲ. ಇದನ್ನೂ ಓದಿ: ದುಬೈನ 67 ಅಂತಸ್ತಿನ ಕಟ್ಟಡದಲ್ಲಿ ಭಾರೀ ಅಗ್ನಿ ಅವಘಡ – 4,000 ಜನರ ಸ್ಥಳಾಂತರ

Benjamin Netanyahu

ಶುಕ್ರವಾರ ಪ್ರಾರಂಭವಾದ ಇಸ್ರೇಲಿ ದಾಳಿಗಳಿಗೆ ಪ್ರತಿಕ್ರಿಯೆಯಾಗಿ, ಇಸ್ರೇಲಿ ಫೈಟರ್ ಜೆಟ್‌ಗಳಿಗೆ ಇಂಧನ ತುಂಬಲು ಬಳಸುವ ಸ್ಥಳಗಳನ್ನು ಗುರಿಯಾಗಿಸಿಕೊಂಡಿರುವುದಾಗಿ ಭಾನುವಾರ ಮುಂಜಾನೆ ಇರಾನ್‌ ಘೋಷಿಸಿದೆ.

ಇಸ್ರೇಲ್‌ನ ಹೈಫಾ ಮತ್ತು ಟೆಲ್‌ ಅವೀವ್‌ ನಗರಗಳು ಸೇರಿದಂತೆ ಹಲವು ಭಾಗಗಳ ಮೇಲೆ ಇರಾನ್‌ ಕ್ಷಿಪಣಿಗಳನ್ನು ಹಾರಿಸಿದೆ. ಈ ದಾಳಿಯಲ್ಲಿ ಕನಿಷ್ಠ 7 ಮಂದಿ ಮೃತಪಟ್ಟಿದ್ದಾರೆಂದು ವರದಿಯಾಗಿದೆ. ಇಸ್ರೇಲಿ ಪಡೆಗಳು ಇರಾನ್‌ನಾದ್ಯಂತ ನಾಗರಿಕ ಮತ್ತು ಇಂಧನ ಮೂಲಸೌಕರ್ಯಗಳ ಮೇಲೆ ಬಾಂಬ್ ದಾಳಿ ನಡೆಸಿ, ಟೆಹ್ರಾನ್‌ನಲ್ಲಿರುವ ಶಹ್ರಾನ್ ತೈಲ ಸ್ಥಾವರದಲ್ಲಿ ಬೆಂಕಿ ಹಚ್ಚಿತ್ತು. ಇದಕ್ಕೆ ಪ್ರತಿಯಾಗಿ ಇರಾನ್‌ ದಾಳಿ ಮುಂದುವರಿಸಿದೆ.

Share This Article