Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಇಸ್ರೇಲ್‌, ಇರಾನ್‌ ಯುದ್ಧ | ಯಾರಿಗೆ ಲಾಭ, ಯಾರಿಗೆ ನಷ್ಟ? – ವಿಶ್ವಬ್ಯಾಂಕ್‌ ಎಚ್ಚರಿಕೆ ಏನು?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಇಸ್ರೇಲ್‌, ಇರಾನ್‌ ಯುದ್ಧ | ಯಾರಿಗೆ ಲಾಭ, ಯಾರಿಗೆ ನಷ್ಟ? – ವಿಶ್ವಬ್ಯಾಂಕ್‌ ಎಚ್ಚರಿಕೆ ಏನು?

Latest

ಇಸ್ರೇಲ್‌, ಇರಾನ್‌ ಯುದ್ಧ | ಯಾರಿಗೆ ಲಾಭ, ಯಾರಿಗೆ ನಷ್ಟ? – ವಿಶ್ವಬ್ಯಾಂಕ್‌ ಎಚ್ಚರಿಕೆ ಏನು?

Public TV
Last updated: April 8, 2026 7:23 am
Public TV
Share
3 Min Read
WAR 1
SHARE

ಒಂದು ಬೃಹತ್‌ ಮರದ ಯಾವುದಾದರೂ ಒಂದು ಭಾಗಕ್ಕೆ ಪೆಟ್ಟಾದರೆ ಅದರ ಇನ್ನೊಂದು ಭಾಗವೂ ಸಹ ಒಣಗಲು ಆರಂಭಿಸುತ್ತದೆ. ಅದೇ ರೀತಿಯ ಪರಿಸ್ಥಿತಿ ಇವತ್ತು ಜಗತ್ತಿಗೆ ಎದುರಾಗಿದೆ. ಇರಾನ್‌, ಇಸ್ರೇಲ್‌ ಹಾಗೂ ಅಮೆರಿಕ ಯುದ್ಧದಿಂದ ಆ ಮೂರು ರಾಷ್ಟ್ರಗಳಿಗೆ ಮಾತ್ರವಲ್ಲದೇ ವಿಶ್ವದ ಬಹುತೇಕ ಭಾಗಗಳಿಗೆ ಅದರ ಬಿಸಿ ತಟ್ಟುತ್ತಿದೆ. ಈಗಾಗಲೇ ಗ್ಯಾಸ್‌, ಪೆಟ್ರೋಲ್‌, ವಿವಿಧ ದೇಶಗಳ ರಫ್ತು, ಆಮದಿನ ಮೇಲೆ ತೀವ್ರ ಪರಿಣಾಮ ಬೀರಿದೆ. ಈ ಘೋರ ಪರಿಣಾಮ ಬಡರಾಷ್ಟ್ರಗಳನ್ನು ಮತ್ತಷ್ಟ ಹಿಂಡುತ್ತಿವೆ.

ಇನ್ನೂ ಈ ಯುದ್ಧದಿಂದ ಕೆಲವು ರಾಷ್ಟ್ರಗಳಿಗೆ ಲಾಭವೂ ಆಗುತ್ತಿದೆ ಎಂದು ವರದಿಯಾಗಿದೆ. ಯಾರಿಗೆ ಲಾಭ? ಯಾರಿಗೆ ನಷ್ಟ? ಈ ಬಗ್ಗೆ ವಿಶ್ವಬ್ಯಾಂಕ್‌ ಲೆಕ್ಕಾಚಾರವೇನು? ಈಗ ಎದುರಾಗಿರುವ ಸಮಸ್ಯೆಗಳೇನು ಎಂಬ ಬಗ್ಗೆ ಇಲ್ಲಿ ವಿವರಿಸಲಾಗಿದೆ.

Iranian Crude Oil

ವಿಶ್ವಬ್ಯಾಂಕ್‌ ಕೊಟ್ಟ ಎಚ್ಚರಿಕೆ ಏನು?
ಇರಾನ್-ಇಸ್ರೇಲ್ ಸಂಘರ್ಷ ಜಾಗತಿಕ ಆರ್ಥಿಕತೆ, ವಿಶೇಷವಾಗಿ ಇಂಧನ ಪೂರೈಕೆ ಮತ್ತು ತೈಲ ಬೆಲೆಗಳ ಮೇಲೆ ತೀವ್ರ ಪರಿಣಾಮ ಬೀರಲಿದೆ ಎಂದು ವಿಶ್ವಬ್ಯಾಂಕ್ ಎಚ್ಚರಿಸಿತ್ತು. ತೈಲ ಪೂರೈಕೆಯಲ್ಲಿನ ಅಡಚಣೆಯಿಂದಾಗಿ ಜಾಗತಿಕ ಹಣದುಬ್ಬರ ಹೆಚ್ಚಳ, ಆಹಾರ ಭದ್ರತೆ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳ ಮೇಲೆ, ಅದರಲ್ಲೂ ಏಷ್ಯಾ ಮತ್ತು ಆಫ್ರಿಕಾದಲ್ಲಿ ಹೆಚ್ಚಿನ ಆರ್ಥಿಕ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ ಎಂದು ವಿಶ್ವಬ್ಯಾಂಕ್‌ ಮುನ್ಸೂಚನೆ ನೀಡಿತ್ತು.

ಯುದ್ಧದಿಂದ ಜಗತ್ತಿನ ಮೇಲಾಗುತ್ತಿರುವ ಪರಿಣಾಮ
ಜಾಗತಿಕ ಆಘಾತ: ಈ ಸಂಘರ್ಷವು ಕೊರೋನಾ ಸಾಂಕ್ರಾಮಿಕ ರೋಗ ಮತ್ತು ಹಣದುಬ್ಬರದ ನಂತರ ಚೇತರಿಸಿಕೊಳ್ಳುತ್ತಿರುವ ಜಾಗತಿಕ ಆರ್ಥಿಕತೆ ಮತ್ತೆ ಹದಗೆಡಬಹುದು.
ಇಂಧನ ಬೆಲೆ ಏರಿಕೆ: ಇರಾನ್-ಇಸ್ರೇಲ್ ಸಂಘರ್ಷದಿಂದ ತೈಲ ಪೂರೈಕೆಯಲ್ಲಿ ವ್ಯತ್ಯಯವಾಗಿ, ಪೆಟ್ರೋಲ್-ಡೀಸೆಲ್ ಬೆಲೆ ಗಗನಕ್ಕೇರುವ ಆತಂಕವಿದೆ. ಈಗಾಗಲೇ ಭಾರತ ಸೇರಿದಂತೆ ಹಲವು ರಾಷ್ಟ್ರಗಳಿಗೆ ಈ ಬಿಸಿ ತಟ್ಟಿದೆ. ಆಟೋಗಳಿಗೆ, ಅಡುಗೆಗೆ ಗ್ಯಾಸ್‌ ಸಿಗದೇ ಜನ ಪರದಾಡುತ್ತಿರುವ ವರದಿಗಳು ಸರ್ವೇ ಸಾಮಾನ್ಯವಾಗಿದೆ.

crude oil LPG

ಆಹಾರ ಮತ್ತು ರಸಗೊಬ್ಬರ ಬೆಲೆ ಏರಿಕೆ: ರಸಗೊಬ್ಬರ ಬೆಲೆ ಏರಿಕೆಯಿಂದ ಕಡಿಮೆ ಆದಾಯದ ದೇಶಗಳಲ್ಲಿ ಆಹಾರ ಭದ್ರತೆಗೆ ಧಕ್ಕೆಯಾಗುವ ಅಪಾಯವಿದೆ. ಇದು ಆರ್ಥಿಕ ಮಾತ್ರವಲ್ಲದೆ ಸಾಮಾಜಿಕ-ರಾಜಕೀಯ ಬಿಕ್ಕಟ್ಟಿಗೂ ಕಾರಣವಾಗಬಹುದು.
ಪೂರೈಕೆ ಸರಪಳಿ ಅಡಚಣೆ: ಮಧ್ಯಪ್ರಾಚ್ಯದ ಸಂಘರ್ಷವು ಜಾಗತಿಕ ವ್ಯಾಪಾರ ಮಾರ್ಗಗಳನ್ನು (Shipping Routes) ಅಡ್ಡಿಯಾಗುತ್ತಿದೆ. ಇದರಿಂದ ರಫ್ತು, ಆಮದು ಭಾರೀ ಕಷ್ಟವಾಗುತ್ತಿದೆ. ಇದರಿಂದ ಹಲವಾರು ರಾಷ್ಟ್ರಗಳಿಗೆ ಆಹಾರ, ಅಗತ್ಯ ವಸ್ತುಗಳಿಗೆ ಕೊರತೆ ಎದುರಾಗಲಿದೆ. ಈಗಾಗಲೇ ಹಾರ್ಮುಜ್‌ ಜಲಸಂಧಿ ಮುಚ್ಚಿರುವುದರಿಂದ ಭಾರತದ ಅಕ್ಕಿ, ಮೊಟ್ಟೆ, ತರಕಾರಿಗಳ ರಫ್ತಿಗೆ ಭಾರೀ ಸಮಸ್ಯೆ ಎದುರಾಗಿದೆ.

Rice Mill

ಸಾಲದ ಸುಳಿ: ಆರ್ಥಿಕವಾಗಿ ದುರ್ಬಲವಾಗಿರುವ ರಾಷ್ಟ್ರಗಳು ಇಂಧನ ಮತ್ತು ಆಹಾರಕ್ಕಾಗಿ ಹೆಚ್ಚಿನ ಹಣ ವ್ಯಯಿಸಬೇಕಾಗಿರುವುದರಿಂದ ಸಾಲದ ಹೊರೆ ಹೆಚ್ಚಾಗುತ್ತಿದೆ.
ಉದ್ಯೋಗ ಕಡಿತ: ಯುದ್ಧ ಪೀಡಿತ ಪ್ರದೇಶಗಳಲ್ಲಿ ಉದ್ಯೋಗಾವಕಾಶಗಳು ಕಡಿಮೆಯಾಗಿ, ಲಕ್ಷಾಂತರ ಜನರು ಬಡತನದ ರೇಖೆಗಿಂತ ಕೆಳಗೆ ಬೀಳುವ ಅಪಾಯವಿದೆ.

ಅಮೆರಿಕಕ್ಕೂ ತಟ್ಟಿದ ಯುದ್ಧದ ಬಿಸಿ
ಇರಾನ್ ವಿರುದ್ಧದ ಯುದ್ಧವು ಅಮೆರಿಕ ಪ್ರಜೆಗಳ ಮೇಲೆ ಪರಿಣಾಮ ಬೀರಲು ಆರಂಭಿಸಿದೆ. ಪೆಟ್ರೋಲ್ ಡೀಸೆಲ್ ದರ ಏರಿಕೆಯಾಗಿದೆ. ಇದರಿಂದ ಕೆಲವು ವಿಮಾನಯಾನ ಸಂಸ್ಥೆಗಳು ಹೆಚ್ಚಿನ ಇಂಧನ ವೆಚ್ಚವನ್ನು ಸರಿದೂಗಿಸಲು ಚೆಕ್ ಇನ್ ಬ್ಯಾಗೇಜ್‌ಗಳ ಶುಲ್ಕವನ್ನು ಹೆಚ್ಚಿಸಿವೆ.

ಅಮೆರಿಕನ್ ಆಟೋಮೊಬೈಲ್ ಅಸೋಸಿಯೇಷನ್ (ಎಎಎ) ನಿರ್ವಹಿಸಿದ ದತ್ತಾಂಶದ ಪ್ರಕಾರ, ಅಮೆರಿಕದಲ್ಲಿ ಪೆಟ್ರೋಲ್‌ನ ಸರಾಸರಿ ಬೆಲೆ 1 ಗ್ಯಾಲನ್‌ಗೆ 8 3 1 (3.78 ಲೀ) 379.30 ರೂ. ಡೀಸೆಲ್‌ ಬೆಲೆ ಗ್ಯಾಲನ್‌ಗೆ 512.85 ರೂ. ಏರಿಕೆಯಾಗಿದೆ. ಒಂದು ವರ್ಷದ ಹಿಂದೆ ಈ ದರ 3.64 ಡಾಲರ್‌ನಷ್ಟು (337.57 ರೂ.) ಇತ್ತು. ಅಮೆಜಾನ್ ಕಂಪನಿಯು ಏ.17 ರಿಂದ ಮೂರನೇ ವ್ಯಕ್ತಿಯ ಮಾರಾಟಗಾರರ ಮೇಲೆ ಶೇ.3.5ರಷ್ಟು ಇಂಧನ ಸರ್ಚಾರ್ಜ್ ಅನ್ನು ಸೇರಿಸಲು ಯೋಜಿಸಿದೆ.

ಈ ಯುದ್ದದ ಲಾಭ ಯಾರಿಗೆ ಗೊತ್ತಾ?
ಯುದ್ಧದಿಂದ ನೇರ ಹಾಗೂ ಪರೋಕ್ಷ ಲಾಭ ಅಮೆರಿಕ ಮತ್ತು ರಷ್ಯಾಗೆ ಸಿಗಲಿದೆ. ಉಕ್ರೇನ್ ವಿರುದ್ಧ ಸಾರಿದ ಯುದ್ಧಕ್ಕೆ ಇರಾನ್ ಡ್ರೋನ್‌ಗಳನ್ನು ನೀಡಿತ್ತು. ಅದರಿಂದ ರಷ್ಯಾಕ್ಕೆ ಲಾಭವಾಗಿತ್ತು. ಅದನ್ನೇ ರಷ್ಯಾ ಮುಂದುವರೆಸಿ ಡ್ರೋನ್ ಅಭಿವೃದ್ಧಿಪಡಿಸುತ್ತಿದೆ.

Iran Israel America War Iran cheap drones High Impact

ಯುದ್ಧದಿಂದ ಹಾರ್ಮುಜ್ ಮುಚ್ಚಿರುವುದರಿಂದ ರಷ್ಯಾ ಮೇಲಿನ ತೈಲ ರಫ್ತು ನಿಷೇಧವನ್ನು ಸಡಿಲಗೊಳಿಸಲಾಗಿದೆ. ಇದು ಆ ದೇಶದ ಆರ್ಥಿಕತೆ ಅಭಿವೃದ್ಧಿಗೆ ಕಾರಣವಾಗಿದೆ.

ಅಮೆರಿಕ ಯುದ್ಧ ಮುಂದುವರಿದರೆ ಅದನ್ನೇ ನಂಬಿಕೊಂಡಿರುವ ಉಕ್ರೇನ್ ಬತ್ತಳಿಕೆ ಬರಿದಾಗಲಿದೆ. ಇದರಿಂದ ಉಕ್ರೇನ್‌ಗೆ ಹೊಡೆತ ಬೀಳಬಹುದು. ಇತ್ತ ರಷ್ಯಾ ಮಹಾತ್ವಾಕಾಂಕ್ಷೆ ಸಾಕಾರಗೊಳ್ಳಬಹುದು ಎಂದು ಅಂದಾಜಿಸಲಾಗಿದೆ.

ಈ ಯುದ್ಧವು ಚೀನಾದ ಬೆಳವಣಿಗೆಗೂ ಅನುಖೂಲವಾಗಿದೆ ಎಂದು ಊಹಿಸಲಾಗಿದೆ. ಅಮೆರಿಕ ಸದಾ ಯುದ್ಧದಲ್ಲಿ ಮುಳುಗುವುದರಿಂದ, ಆರ್ಥಿಕವಾಗಿ ಭಾರೀ ಪೆಟ್ಟು ಬೀಳಲಿದೆ. ಇದೇ ಲಾಭ ಪಡೆದು ತೈಲ ಅಭಾವದ ಸಮಯದಲ್ಲಿ ಉತ್ಪಾದನೆ ಹೆಚ್ಚಿಸಿಕೊಂಡು ಮಿತ್ರ ರಾಷ್ಟ್ರಗಳಿಗೂ ರಫ್ತು ಹೆಚ್ಚಿಸಿ ಲಾಭ ಹೆಚ್ಚಿಸಿಕೊಳ್ಳುವ ಸಾಧ್ಯತೆಯಿದೆ.

TAGGED:americaFood SupplyIMFIsrael Iran Warlpgoil
Share This Article
Facebook Whatsapp Whatsapp Telegram

Cinema news

trisha krishnan
ಶ್ರೀಮಂತ ಉದ್ಯಮಿಯನ್ನ ಮದ್ವೆಯಾಗಿ, 4 ಮಕ್ಕಳನ್ನು ಬೆಳೆಸುತ್ತಿದ್ದೇನೆ – ಸಿನಿಮಾ ನಿವೃತ್ತಿ ವದಂತಿಗೆ ನಟಿ ತ್ರಿಶಾ ಕೌಂಟರ್
Cinema Latest South cinema Top Stories
Rashmika Mandanna
ಕೊಡಗಿನಲ್ಲಿ ರಶ್ಮಿಕಾ – ವಿಜಯ್‌ ಡಿನ್ನರ್‌ ಪಾರ್ಟಿ; ಕೊಡವ ಶೈಲಿಯ ಭರ್ಜರಿ ಆತಿಥ್ಯ!
Cinema Kodagu Latest Main Post Sandalwood South cinema
Rashmika Mandanna Father
ರಶ್ಮಿಕಾಗೆ ಮದುವೆಯ ಉಡುಗೊರೆಯಾಗಿ ತಮ್ಮ ಮನೆಯನ್ನೇ ನೀಡಿದ ತಂದೆ ಮದನ್‌ ಮಂದಣ್ಣ
Cinema Districts Karnataka Kodagu Latest South cinema Top Stories
DARSHAN RENUKASWAMY
ರೇಣುಕಾಸ್ವಾಮಿ ಕೊಲೆ ಕೇಸ್‌ ಆಧರಿತ ಸಿನಿಮಾ ‘ಬಾಸ್’‌ ರಿಲೀಸ್‌ಗೆ ಕೋರ್ಟ್‌ ತಡೆಯಾಜ್ಞೆ
Bengaluru City Cinema Court Latest Sandalwood Top Stories

You Might Also Like

Bab al Mandab Strait India
Latest

ಹಾರ್ಮುಜ್ ಬಳಿಕ ಬಾಬ್ ಅಲ್-ಮಂಡೇಬ್ ಜಲಸಂಧಿ ಬಂದ್‌ ಭೀತಿ – ಭಾರತಕ್ಕೇನು ಪರಿಣಾಮ?

Public TV
By Public TV
21 minutes ago
Donald Trump 2
Latest

ಅಮೆರಿಕ-ಇರಾನ್‌ ಮಧ್ಯೆ 2 ವಾರಗಳ ಕದನ ವಿರಾಮ ಘೋಷಣೆ

Public TV
By Public TV
33 minutes ago
IPL match Rain
Cricket

IPL 2026 | ರಾಜಸ್ಥಾನ ರಾಯಲ್ಸ್‌ Vs ಮುಂಬೈ ಇಂಡಿಯನ್ಸ್‌ ಪಂದ್ಯಕ್ಕೆ ಮಳೆ ಅಡ್ಡಿ

Public TV
By Public TV
56 minutes ago
Congress BJP
Bagalkot

ದಾವಣಗೆರೆ, ಬಾಗಲಕೋಟೆ ಉಪಚುನಾವಣೆಯ ಬಹಿರಂಗ ಪ್ರಚಾರ ಅಂತ್ಯ

Public TV
By Public TV
8 hours ago
ipl 2026 Vaibhav Sooryavanshi stuns Jasprit Bumrah with first ball six Mumbai Indiansace can only smile
Cricket

ಬುಮ್ರಾಗೆ 2 ಸಿಕ್ಸ್‌ – ಮತ್ತೆ 5 ಸಿಕ್ಸ್‌ ಸಿಡಿಸಿದ ಸೂರ್ಯವಂಶಿ

Public TV
By Public TV
9 hours ago
JD Vance
Latest

ಇರಾನ್‌ ಮೇಲೆ ಪರಮಾಣು ದಾಳಿಯಾಗುತ್ತಾ?- ವ್ಯಾನ್ಸ್‌ ಹೇಳಿಕೆಯಿಂದ ಬಿಸಿ ಬಿಸಿ ಚರ್ಚೆ

Public TV
By Public TV
9 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?