– 99% ಕ್ಷಿಪಣಿಗಳನ್ನು ತಡೆದ ಇಸ್ರೇಲ್
ಟೆಲ್ ಅವೀವ್: ಇರಾನ್ (Iran) ಹಾರಿಸಿದ್ದ 300 ಕ್ಷಿಪಣಿಗಳ ಪೈಕಿ 99% ರಷ್ಟು ಕ್ಷಿಪಣಿ (Missile), ಯುಎವಿಗಳನ್ನು (UAV) ಹೊಡೆದು ಉರುಳಿಸಿದೆ ಎಂದು ಇಸ್ರೇಲ್ (Isreal) ಹೇಳಿದೆ.
Advertisement
ತನ್ನ ಕಮಾಂಡರ್ ಹತ್ಯೆಯ ಪ್ರತೀಕಾರವಾಗಿ ಇಸ್ರೇಲ್ ಮೇಲೆ ಇರಾನ್ 300 ಕ್ಷಿಪಣಿಗಳನ್ನು ಹಾರಿಸಿತ್ತು. ಇವುಗಳನ್ನು ಇಸ್ರೇಲ್ ತಡೆದಿದೆ. 170 ಯುಎವಿಗಳನ್ನು ಇರಾನ್ ಹಾರಿಸಿತ್ತು. ಇವುಗಳನ್ನು ಇಸ್ರೇಲ್ ತಡೆದಿದೆ. ಇವು ಯಾವುದು ತನ್ನ ವಾಯುನೆಲೆಯನ್ನು ಪ್ರವೇಶ ಮಾಡಿಲ್ಲ ಎಂದು ಇಸ್ರೇನ್ ಸೇನೆಯ ವಕ್ತಾರ ಡೇನಿಯಲ್ ಹಗೆರಿ ತಿಳಿಸಿದ್ದಾರೆ.
Advertisement
“Even while under attack from Iran, we have not lost sight—not for one moment—of our critical mission in Gaza to rescue our hostages from the hands of Iran’s-proxy Hamas.”
Listen to IDF Spokesperson RAdm. Daniel Hagari’s full statement: pic.twitter.com/DfZamaBwU5
— Israel Defense Forces (@IDF) April 14, 2024
Advertisement
ಇರಾನ್ 30 ಕ್ರೂಸ್ ಕ್ಷಿಪಣಿ ಹಾರಿಸಿತ್ತು. ಈ ಪೈಕಿ 25 ಕ್ಷಿಪಣಿಗಳನ್ನು ಇಸ್ರೇಲ್ ಫೈಟರ್ ವಿಮಾನಗಳು ತಡೆದಿದೆ. 120 ಬ್ಯಾಲಿಸ್ಟಿಕ್ ಕ್ಷಿಪಣಿಗಳ ಪೈಕಿ ಕೆಲ ಮಾತ್ರ ಇಸ್ರೇಲ್ ಭೂ ಪ್ರದೇಶದ ಒಳಗಡೆ ಬಿದ್ದಿದೆ ಎಂದು ಹೇಳಿದರು. ಇದನ್ನೂ ಓದಿ: ಇಸ್ರೇಲ್‌ನಲ್ಲಿರುವ ಭಾರತೀಯರಿಗೆ ರಾಯಭಾರಿ ಕಚೇರಿ ಮಾರ್ಗಸೂಚಿ ಬಿಡುಗಡೆ
Advertisement
This is what a 99% interception rate looks like. Operational footage from the Aerial Defense System protecting the Israeli airspace: pic.twitter.com/eAwcUPUDw2
— Israel Defense Forces (@IDF) April 14, 2024
ನಮ್ಮ ಬಲವಾದ ಮಿತ್ರ ಪಕ್ಷಗಳು ಇರಾನ್‌ನಿಂದ ಬಂದ ಕ್ಷಿಪಣಿಗಳನ್ನು ತಡೆಯುವಲ್ಲಿ ಸಫಲರಾಗಿದ್ದರಿಂದ ಅವುಗಳು ಇಸ್ರೇಲ್ ಗಡಿ ದಾಟಿಲ್ಲ ಎಂದು ತಿಳಿಸಿದರು. ಮಿತ್ರ ಪಕ್ಷಗಳ ಹೆಸರನ್ನು ಉಲ್ಲೇಖಿಸದೇ ಇದ್ದರೂ ಅಮೆರಿಕ, ಯುಕೆ,ಫ್ರಾನ್ಸ್ ಸೇರಿದಂತೆ ಹಲವು ದೇಶಗಳು ಇಸ್ರೇಲ್ ಬೆಂಬಲಕ್ಕೆ ನಿಂತಿವೆ.
ಜೋರ್ಡಾನ್‌ನಲ್ಲಿ ಹಲವಾರು ಕ್ಷಿಪಣಿಗಳನ್ನು ತಡೆಹಿಡಿಯಲಾಗಿದೆ. ಜೋರ್ಡಾನ್‌ನಲ್ಲಿರುವ ಅಮೆರಿಕ ಹಲವು ಕ್ಷಿಪಣಿಗಳನ್ನು ಹೊಡೆದು ಹಾಕಿದೆ.
Watch the F-35I Adir fighter jets return to Nevatim Airbase after successfully protecting Israel’s airspace: pic.twitter.com/ap5gPLphPD
— Israel Defense Forces (@IDF) April 14, 2024
ಕೆಲ ಮಾಧ್ಯಮಗಳು ತನ್ನ ವಾಯು ಸೇಮೆಯನ್ನು ಬಳಸಿದ್ದಕ್ಕೆ ಅರಬ್ ರಾಷ್ಟ್ರಗಳೇ ಇರಾನ್ ಸಿಡಿಸಿದ ಕ್ಷಿಪಣಿ ಮತ್ತು ಯುಎವಿಯನ್ನು ಹೊಡೆದು ಹಾಕಿವೆ ಎಂದು ವರದಿ ಮಾಡಿವೆ. ಆದರೆ ಯಾವ ದೇಶಗಳು ಎಷ್ಟು ಕ್ಷಿಪಣಿ, ಯುಎವಿ ಹೊಡೆದು ಹಾಕಿವೆ ಎಂಬುದನ್ನು ತಿಳಿಸಿಲ್ಲ. ಕ್ಷಿಪಣಿಯನ್ನು ತಡೆದಿದ್ದ ಸಿಟ್ಟಾಗಿ ತನ್ನ ಮೇಲೂ ಇರಾನ್ ದಾಳಿ ಮಾಡಬಹುದು ಎಂಬ ಕಾರಣಕ್ಕೆ ಅರಬ್ ದೇಶಗಳು ಈ ವಿಷಯನ್ನು ಬಹಿರಂಗ ಮಾಡಿಲ್ಲ ಎಂದು ವರದಿಯಾಗಿದೆ.