ಟೆಲ್ ಆವೀವ್: ಗಾಜಾ ಆಸ್ಪತ್ರೆ (Gaza Hospital) ಮೇಲೆ ರಾಕೆಟ್ ದಾಳಿ ನಡೆದಿದ್ದು 500 ಮಂದಿ ಬಲಿಯಾಗಿದ್ದಾರೆ. ಈ ದಾಳಿಯನ್ನು ನಡೆಸಿದವರು ಯಾರು ಎನ್ನುವುದರ ಬಗ್ಗೆ ಈಗ ಆರೋಪ, ಪ್ರತ್ಯಾರೋಪ ನಡೆಯುತ್ತಿದೆ.
ಈ ರಾಕೆಟ್ ದಾಳಿಯನ್ನು ನಡೆಸಿದವರು ಯಾರು ಎನ್ನುವುದೇ ಈಗ ದೊಡ್ಡ ಪ್ರಶ್ನೆಯಾಗಿದೆ. ಹಮಾಸ್ (Hamas) ಇಸ್ರೇಲ್ ನಡೆಸಿದ ದಾಳಿ ಎಂದು ಹೇಳಿದರೆ ಇಸ್ರೇಲ್ ಇದು ಹಮಾಸ್ ನಡೆಸಿದ ದಾಳಿ ಎಂದು ವಿಡಿಯೋ ರಿಲೀಸ್ ಮಾಡಿ ತಿರುಗೇಟು ನೀಡಿದೆ.
Advertisement
This is the tragic result of firing rockets from densely populated neighborhoods. pic.twitter.com/7iAxwLUQzV
— Israel Defense Forces (@IDF) October 18, 2023
Advertisement
ನಾವು ಆಸ್ಪತ್ರೆಯ ಮೇಲೆ ದಾಳಿ ನಡೆಸಿಲ್ಲ. ಪ್ಯಾಲೆಸ್ತೀನ್ ಹಮಾಸ್ ಉಗ್ರರು ನಡೆಸಿದ ರಾಕೆಟ್ ಗುರಿ ತಪ್ಪಿ ಆಸ್ಪತ್ರೆಯ ಮೇಲೆ ಬಿದ್ದಿದೆ ಎಂದ ಇಸ್ರೇಲ್ (Israel) ಹೇಳಿದೆ. ಇದನ್ನೂ ಓದಿ: ಐರನ್ ಡೋಮ್ ಆಯ್ತು ಈಗ ಐರನ್ ಬೀಮ್ – ಏನಿದು ಇಸ್ರೇಲ್ ಪವರ್‌ಫುಲ್ ವೆಪನ್?
Advertisement
ಇಸ್ರೇಲ್ ಸೇನೆಯ ವಕ್ತಾರ ಪ್ರತಿಕ್ರಿಯಿಸಿ, ಆಸ್ಪತ್ರೆಯ ಸಮೀಪ ಯಾವುದೇ ವೈಮಾನಿಕ ಕಾರ್ಯಾಚರಣೆ ಮಾಡಿಲ್ಲ. ಆಸ್ಪತ್ರೆಯ ಮೇಲೆ ಬಿದ್ದ ರಾಕೆಟ್‌ಗೂ ನಾವು ಬಳಕೆ ಮಾಡುತ್ತಿರುವ ರಾಕೆಟ್ ಉಪಕರಣಗಳಿಗೂ ಹೊಂದಿಕೆಯಾಗುವುದಿಲ್ಲ ಎಂದು ಎಂದು ತಿಳಿಸಿದ್ದಾರೆ.
Advertisement
RAW FOOTAGE: A rocket aimed at Israel misfired and exploded at 18:59—the same moment a hospital was hit in Gaza. pic.twitter.com/Kf5xJazSap
— Israel Defense Forces (@IDF) October 17, 2023
ಇಸ್ರೇಲ್ ಆರೋಪಕ್ಕೆ ಹಮಾಸ್ ಪ್ರತಿಕ್ರಿಯಿಸಿ, ಇಸ್ರೇಲ್ ಸುಳ್ಳು ಆರೋಪ ಮಾಡುತ್ತಿದೆ. ಭಯಾನಕ ಅಪರಾಧ ಮತ್ತು ಹತ್ಯಾಕಾಂಡವನ್ನು ಮುಚ್ಚಲು ಕಟ್ಟು ಕಥೆಯನ್ನು ಸೃಷ್ಟಿಸುತ್ತಿದೆ ಎಂದು ಹೇಳಿದೆ.
ಇಸ್ರೇಲ್ ಏರ್‌ಸ್ಟ್ರೈಕ್ ದಾಳಿಯ ಎಚ್ಚರಿಕೆ ಬೆನ್ನಲ್ಲೇ ಉತ್ತರ ಗಾಜಾದಿಂದ 10 ಲಕ್ಷಕ್ಕೂ ಹೆಚ್ಚು ಜನರು ದಕ್ಷಿಣ ಗಾಜಾಕ್ಕೆ ತೆರಳಿದ್ದಾರೆ.
Web Stories