ನವದೆಹಲಿ: ಇಸ್ರೇಲ್ ಮತ್ತು ಹಮಾಸ್ (Israel – Hamas) ಯುದ್ಧದ (War) ಪರಿಣಾಮ ಚಿನ್ನ (Gold) ಮತ್ತು ಬೆಳ್ಳಿ ದರದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.
ನವರಾತ್ರಿ ಸಮಯದಲ್ಲಿ ಚಿನ್ನದ ದರದಲ್ಲಿ ಕೊಂಚ ಏರಿಕೆಯಾಗುತ್ತಿದ್ದು, ಕಚ್ಚಾತೈಲದ ದರವೂ ಏರಿಕೆಯಾಗುವ ಸಾಧ್ಯತೆಯಿದೆ. ಭಾನುವಾರ ಚಿನ್ನ ಪ್ರತಿ ಗ್ರಾಂಗೆ 50 ರೂ. ಹೆಚ್ಚಳವಾಗಿದೆ.
Advertisement
Advertisement
ಕಳೆದ 2 ವಾರದಿಂದ ಬಹುತೇಕ ಇಳಿಮುಖವಾಗುತ್ತಿದ್ದ ಚಿನ್ನದ ಬೆಲೆ ಯುದ್ಧದ ಕರಿಛಾಯೆ ಬೆನ್ನಲ್ಲೇ ಹೆಚ್ಚಳವಾಗುತ್ತಿದೆ. ಯುದ್ಧದ ಪರಿಣಾಮ ಮುಂದಿನ ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಗಣನೀಯ ಏರಿಕೆಯಾಗುವ ಸಾಧ್ಯತೆ ಇದೆ. ಇದನ್ನೂ ಓದಿ: ಯಾವುದಕ್ಕೂ ಡಿಸ್ಟರ್ಬ್ ಆಗಲ್ಲ, ಮ್ಯಾನಿಪುಲೇಟ್ ಮಾಡಲ್ಲ- ಪಬ್ಲಿಕ್ ಟಿವಿಗೆ ಸಿಎಂ EXCLUSIVE ಸಂದರ್ಶನ
Advertisement
Advertisement
ನಿನ್ನೆ ಚಿನ್ನದ ದರ 22 ಕ್ಯಾರೆಟ್ – 5,329 ರೂ. ಹಾಗೂ 24 ಕ್ಯಾರೆಟ್ – 5,759 ರೂ. ಆಗಿದೆ. ಮಾತ್ರವಲ್ಲದೆ ಇಸ್ರೇಲ್-ಹಮಾಸ್ ಯುದ್ಧದ ಎಫೆಕ್ಟ್ ಕಚ್ಚಾತೈಲದ ದರದ ಮೇಲೆಯೂ ಬೀಳುವ ಸಾಧ್ಯತೆಯಿದೆ. ಇದನ್ನೂ ಓದಿ: ಇಸ್ರೇಲ್‍ನಲ್ಲಿ ಸಿಲುಕಿದ್ದ 18,000 ಭಾರತೀಯರು ಸೇಫ್
Web Stories