– ಹಮಾಸ್ ಉಗ್ರರ ಸುರಂಗದಲ್ಲಿ ಐವರು ಒತ್ತೆಯಾಳುಗಳ ಶವ ಪತ್ತೆ
ಟೆಲ್ ಅವೀವ್: ಒಂದೆಡೆ ಗಾಜಾದ ಮೇಲೆ ಇಸ್ರೇಲ್ (Israel) ವೈಮಾನಿಕ ದಾಳಿ (Airstrike) ನಡೆಸಿದ್ದರೆ, ಇನ್ನೊಂದೆಡೆ ಹಮಾಸ್ (Hamas) ಬಂಡುಕೋರರ ಸುರಂಗದಲ್ಲಿ ಐವರು ಒತ್ತೆಯಾಳುಗಳ ಶವ ಪತ್ತೆಯಾಗಿರುವುದಾಗಿ ವರದಿಯಾಗಿದೆ.
ಗಾಜಾದ ಮಾಘಜಿ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ 78 ಮಂದಿ ಸಾವನ್ನಪ್ಪಿದ್ದಾರೆ ಎಂದು ಪ್ಯಾಲೆಸ್ತೇನಿ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೊಂದೆಡೆ ಉತ್ತರ ಗಾಜಾದಲ್ಲಿ ಹಮಾಸ್ ಉಗ್ರರ ಭೂಗತ ಸುರಂಗ ಜಾಲದಲ್ಲಿ ಸೆರೆಯಲ್ಲಿದ್ದ ಐವರು ಇಸ್ರೇಲಿ ಒತ್ತೆಯಾಳುಗಳ ಶವಗಳನ್ನು ವಶಪಡಿಸಿಕೊಂಡಿರುವುದಾಗಿ ಇಸ್ರೇಲ್ ಸೇನೆ ತಿಳಿಸಿದೆ. ಇದನ್ನೂ ಓದಿ: ಭಾರತದ ಧ್ವಜವುಳ್ಳ ಕಚ್ಚಾತೈಲ ಟ್ಯಾಂಕರ್ ಮೇಲೆ ಹೌತಿ ಉಗ್ರರಿಂದ ಡ್ರೋನ್ ದಾಳಿ
- Advertisement
- Advertisement
ಗಾಜಾದ ಮೇಲೆ ಭಾನುವಾರ ರಾತ್ರಿ ಆರಂಭವಾದ ಇಸ್ರೇಲ್ ದಾಳಿ ಕ್ರಿಸ್‍ಮಸ್ ದಿನವಾದ ಸೋಮವಾರ ಬೆಳಗ್ಗೆವರೆಗೂ ಮುಂದುವರಿಯಿತು. ಈ ವೇಳೆ ಗಾಜಾದ ಅಲ್-ಬುರೇಜ್‍ನ ಮೇಲೆ ಇಸ್ರೇಲ್ ತೀವ್ರ ವೈಮಾನಿಕ ದಾಳಿ ನಡೆಸಿದೆ. ಪರಿಣಾಮ ಮಾಘಜಿ ನಿರಾಶ್ರಿತರ ಶಿಬಿರದಲ್ಲಿ 70 ಮಂದಿ ಸಾವಿಗೀಡಾಗಿದ್ದಾರೆ. ಇದರಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ ಎಂದು ವರದಿಯಾಗಿದೆ.
ಇದರ ನಡುವೆಯೇ ಬೆಥ್ ಲೆಹೆಮ್‍ನಲ್ಲಿ (Bethlehem) ಪ್ಯಾಲೇಸ್ತೇನಿ ಜನರು ಶಾಂತಿಗಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಅ.7ರಂದು ಹಮಾಸ್, ಇಸ್ರೇಲ್ ಮೇಲೆ ದಾಳಿ ಮಾಡಿದ ನಂತರ 200ಕ್ಕೂ ಹೆಚ್ಚು ಒತ್ತೆಯಾಳುಗಳನ್ನು ಸೆರೆ ಹಿಡಿದಿತ್ತು. ಹಿಂದಿನ ಕದನ ವಿರಾಮ ಒಪ್ಪಂದದ ಅಡಿಯಲ್ಲಿ ಹಮಾಸ್ 105 ಒತ್ತೆಯಾಳುಗಳನ್ನು ಬಿಡುಗಡೆ ಮಾಡಿತ್ತು. ಇಸ್ರೇಲ್ 200 ಪ್ಯಾಲೇಸ್ತೇನಿ ಕೈದಿಗಳನ್ನು ಬಿಡುಗಡೆ ಮಾಡಿತ್ತು. ಇದನ್ನೂ ಓದಿ: ಆಕ್ಸಿಡೆಂಟ್ ಆಗಿ ಕಟ್ ಆದ ತಲೆ ಮೂರೂವರೆ ಗಂಟೆ ಶೋಧದ ಬಳಿಕ ಸಿಕ್ತು..!