ಜೆರುಸಲೆಮ್: ಬಂದರ್ ಅಬ್ಬಾಸ್‌ನಲ್ಲಿ ಅಮೆರಿಕ-ಇಸ್ರೇಲಿ (USA-Isreal) ದಾಳಿಯಲ್ಲಿ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ನೌಕಾ ಕಮಾಂಡರ್ ಅಲಿರೆಜಾ ತಂಗ್‌ಸಿರಿ(Alireza Tangsiri) ಮೃತಪಟ್ಟಿದ್ದಾರೆ.
ಹಾರ್ಮುಜ್ ಜಲಸಂಧಿಯನ್ನು ಮುಚ್ಚಲು ಕಾರಣರಾದ ಪ್ರಮುಖ ವ್ಯಕ್ತಿ ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್ ಮೂಲಗಳನ್ನು ಆಧಾರಿಸಿ ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ. ದಾಳಿಯ ಬಗ್ಗೆ ಇರಾನ್ ಅಥವಾ ಇಸ್ರೇಲಿ ಮಿಲಿಟರಿಯಿಂದ ಇನ್ನೂ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ. ಇದನ್ನೂ ಓದಿ: ಗುಡ್ ನ್ಯೂಸ್ – ಭಾರತ ಸೇರಿ ಮಿತ್ರ ರಾಷ್ಟ್ರಗಳಿಗೆ ಹಾರ್ಮುಜ್ ಜಲಸಂಧಿ ಓಪನ್: ಇರಾನ್
ಅಮೆರಿಕ-ಇಸ್ರೇಲ್ ದಾಳಿಯಲ್ಲಿ ಹಲವು ಮಂದಿ ನಾಯಕರು ಹತ್ಯೆಯಾಗಿದ್ದರೂ ಅಲಿರೆಜಾ ತಂಗ್‌ಸಿರಿ ಬದುಕಿಳಿದಿದ್ದರು. 2018 ರಿಂದ ನೌಕಾ ಕಮಾಂಡರ್ ಸ್ಥಾನದಲ್ಲಿದ್ದ ಇವರು ಹಾರ್ಮುಜ್ ಜಲಸಂಧಿಯನ್ನು ಮುಚ್ಚುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.
ಈ ಜಲಸಂಧಿಯಲ್ಲಿ ಸಾಮಾನ್ಯವಾಗಿ ಪ್ರತಿದಿನ 120 ಕಾರ್ಗೋ ಶಿಪ್‌ಗಳು ಸಂಚರಿಸುತ್ತವೆ. ಆದರೆ ಮಾರ್ಚ್ 1 ರಿಂದ 25 ರವರೆಗೆ ಕೇವಲ 155 ಹಡಗುಗಳು ಸಂಚರಿಸಿವೆ.

