ಜೆರುಸಲೇಂ: ಇಸ್ರೇಲ್‌ನ ಸಚಿವ ಸಂಪುಟ ಶನಿವಾರ ಗಾಜಾ ಕದನ ವಿರಾಮ ಮತ್ತು ಒತ್ತೆಯಾಳು ಬಿಡುಗಡೆ ಒಪ್ಪಂದವನ್ನು ಅನುಮೋದಿಸಲು ಮತ ಚಲಾಯಿಸಿದೆ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿ ತಿಳಿಸಿದೆ.
ಈ ವಾರಾಂತ್ಯದಲ್ಲಿ ಕದನ ವಿರಾಮ ಜಾರಿಗೆ ಬರುತ್ತದೆಯೇ ಎಂಬ ಬಗ್ಗೆ ಇದ್ದ ಕುತೂಹಲಕ್ಕೆ ಕೊನೆಗೂ ತೆರೆಬಿದ್ದಿದೆ. ಕದನ ವಿರಾಮ ಭಾನುವಾರದಿಂದ ಪ್ರಾರಂಭವಾಗಲಿದೆ. ಗಾಜಾದ ಅತ್ಯಂತ ಮಾರಕ ಯುದ್ಧ ಮತ್ತು ಬಾಂಬ್ ದಾಳಿ ನಿಲ್ಲಲಿದೆ.
Advertisement
Advertisement
ಇಸ್ರೇಲ್ ಜೈಲುಗಳಲ್ಲಿರುವ ನೂರಾರು ಪ್ಯಾಲೆಸ್ಟೀನಿಯನ್ ಕೈದಿಗಳನ್ನು ಬಿಡುಗಡೆಯಾಗಲಿದ್ದಾರೆ. 2023 ರ ಅ.7 ರಂದು ಹಮಾಸ್ ಬಂಡುಕೋರರ ಗುಂಪು ಇಸ್ರೇಲ್ ಮೇಲೆ ದಾಳಿ ಮಾಡಿ ಪ್ರದೇಶದಲ್ಲಿ ಬಂಧಿಸಲ್ಪಟ್ಟ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಸಹ ಅನುವು ಮಾಡಿಕೊಡುತ್ತದೆ.
Advertisement
ಸರ್ಕಾರ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವ ಯೋಜನೆಯನ್ನು ಅನುಮೋದಿಸಿದೆ ಎಂದು ಕ್ಯಾಬಿನೆಟ್ ಮತದಾನದ ನಂತರ ಶನಿವಾರ ಬೆಳಿಗ್ಗೆ ನೆತನ್ಯಾಹು ಅವರ ಕಚೇರಿ ತಿಳಿಸಿದೆ.
Advertisement
ಸರ್ಕಾರದ ಅನುಮೋದನೆಗೆ ಒಳಪಟ್ಟು ಭಾನುವಾರದಿಂದ ಬಿಡುಗಡೆಯಾಗಲಿರುವ 95 ಪ್ಯಾಲೆಸ್ಟೀನಿಯನ್ನರ ಪಟ್ಟಿಯನ್ನು ನ್ಯಾಯ ಸಚಿವಾಲಯ ಪ್ರಕಟಿಸಿದೆ. ಅವರಲ್ಲಿ 69 ಮಹಿಳೆಯರು, 16 ಪುರುಷರು ಮತ್ತು 10 ಅಪ್ರಾಪ್ತರು ಸೇರಿದ್ದಾರೆ.