ಬೆಂಗಳೂರು: ಕುಕ್ಕರ್ ಬಾಂಬ್ ಸ್ಫೋಟ(Cooker Bomb Blast) ನಡೆದ ಬೆನ್ನಲ್ಲೇ ಮತ್ತೊಂದು ಉಗ್ರ ಸಂಘಟನೆಯ ಸ್ಥಾಪನೆಗೆ ಕರ್ನಾಟಕ(Karnataka) ವೇದಿಕೆಯಾಯ್ತಾ ಎಂಬ ಗಂಭೀರ ಪ್ರಶ್ನೆ ಎದ್ದಿದೆ.
ಮಂಗಳೂರು ಕೃತ್ಯದ ಹೊಣೆಯನ್ನು ಹೊತ್ತುಕೊಂಡ ಬಳಿಕ Islamic Resistance Council(IRC) ಹೊಸ ಉಗ್ರ ಸಂಘಟನೆಯೇ ಎಂಬ ಪ್ರಶ್ನೆಗೆ ತನಿಖಾ ಸಂಸ್ಥೆಗಳ ಉನ್ನತ ಮೂಲಗಳು ಹೌದು ಎನ್ನುತ್ತಿವೆ.
ಈ ಹಿಂದೆ ಭಟ್ಕಳದ ಯಾಸಿನ್(Yasin Bhatkal) ಹಾಗೂ ರಿಯಾಜ್ ಭಟ್ಕಳ (Riyaz Bhatkal) ಇಂಡಿಯನ್ ಮುಜಾಹಿದ್ದೀನ್(Indian Mujahideen) ಸಹ ಸಂಸ್ಥಾಪಕರಾಗಿದ್ದರು. ಅಂತರಾಷ್ಟ್ರೀಯ ಮಟ್ಟದಲ್ಲಿ ಈ ಸಂಘಟನೆ ಭೀತಿ ಹುಟ್ಟಿಸಿತ್ತು. ಈಗ ಅದೇ ಸಾಲಿಗೆ ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ ಸೇರ್ಪಡೆಯಾಗುವತ್ತಾ ಸಾಗಿದೆ.
ಇದೇ ಮೊದಲ ಬಾರಿಗೆ ಬಹಿರಂಗವಾಗಿ ಈ ಸಂಘಟನೆಯ ಹೆಸರು ಪ್ರಕಟವಾಗಿದ್ದುಇದಕ್ಕಾಗಿ ಪೊಲೀಸರು ಹಾಗೂ ತನಿಖಾ ಸಂಸ್ಥೆಗಳು ಇದರ ಮೂಲ ಹುಡುಕಲು ಆರಂಭಿಸಿದ್ದಾರೆ.
ತೀರ್ಥಹಳ್ಳಿ ಮೂಲದವರಿಂದ ಈ ಸಂಘಟನೆ ಶುರುವಾಗಿದೆ ಎಂಬ ಅನುಮಾನ ಬಂದಿದ್ದು ಅರಾಫತ್ ಅಲಿ, ಮತೀನ್ ಶಾರೀಕ್, ಎಲ್ಲರೂ ಇದರಲ್ಲಿ ಸಕ್ರಿಯರಾಗಿದ್ದಾರೆ. ಇವರಲ್ಲದೇ ಈಗಾಗಲೇ ಇನ್ನು ಹಲವರನ್ನು ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ನೇಮಿಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಇದರ ಜಾಡು ರಾಷ್ಟ್ರೀಯ ತನಿಖಾದಳ ತನಿಖೆ ಆರಂಭಿಸಿದೆ. ಇದನ್ನೂ ಓದಿ: ರೂಮಿನ ಹತ್ರ ಬಂದಾಗ ಸಡನ್ ಲಾಕ್ – ಕನ್ನಡಕ ಧರಿಸಿ ಓಡಾಟ
ಐಆರ್‌ಸಿ ಹೇಳಿದ್ದು ಏನು?
ಸಾಮಾಜಿಕ ಜಾಲತಾಣದಲ್ಲಿ ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ ಸಂಘಟನೆ ಅರೆಬಿಕ್ ಭಾಷೆಯಲ್ಲಿ ಪೋಸ್ಟ್ ಹಂಚಿಕೊಂಡಿದೆ. ನಮ್ಮ ದಾಳಿ ಕದ್ರಿ ದೇವಸ್ಥಾನ(Kadri Temple) ಆಗಿತ್ತು. ಆದರೆ ಉದ್ದೇಶಿತ ಗುರಿಯನ್ನು ತಲುಪುವ ಮೊದಲೇ ಬಾಂಬ್ ಸ್ಫೋಟಗೊಂಡಿದೆ. ರಾಜ್ಯದಲ್ಲಿ ಗುಂಪು ಹತ್ಯೆ, ದಬ್ಬಾಳಿಕೆಯ ಕಾನೂನುಗಳು ಮತ್ತು ಶಾಸನಗಳು ಮತ್ತು ಧರ್ಮದಲ್ಲಿ ಹಸ್ತಕ್ಷೇಪದ ನಡೆಯುವ ಮೂಲಕ ನಮ್ಮ ಮೇಲೆ ಯುದ್ಧ ಸಾರಲಾಗಿದೆ. ಈ ಯುದ್ಧಕ್ಕೆ ಪ್ರತಿಯಾಗಿ ದಾಳಿ ನಡೆಸಲಾಗುತ್ತಿದೆ ಎಂದು ಹೇಳಿಕೊಂಡಿತ್ತು.
ನಿಮ್ಮ ಸಂತೋಷವು ಅಲ್ಪಕಾಲಿಕವಾಗಿರುತ್ತದೆ ಮತ್ತು ನಿಮ್ಮ ದಬ್ಬಾಳಿಕೆಯ ಫಲವನ್ನು ನೀವು ಅನುಭವಿಸುತ್ತೀರಿ ಎಂದು ಎಡಿಜಿಪಿ ಅಲೋಕ್ ಕುಮಾರ್ ಅವರಿಗೆ ಬೆದರಿಕೆ ಹಾಕಲಾಗುತ್ತಿದೆ.