ಇಸ್ಲಾಮಿಕ್ ಶಿಕ್ಷಣ ಕೇಂದ್ರದಲ್ಲಿ ಸಂಸ್ಕೃತ, ಉಪನಿಷತ್ ಕಲಿಕೆ- ಕೇಂದ್ರದ ನಡೆಗೆ ನೆಟ್ಟಿಗರ ಮೆಚ್ಚುಗೆ

Public TV
2 Min Read
Kerala Islamic Institute

ತಿರುನಂತಪುರಂ: ರಾಜಕೀಯ ಪಕ್ಷಗಳಿಂದ (Political Parties) ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಕೇಸರೀಕರಣ, ಜಾತೀಯತೆಯ ಪ್ರಭಾವ ಹೆಚ್ಚಾಗುತ್ತಿದೆ ಎನ್ನುವ ಆರೋಪಗಳ ನಡುವೆಯೂ ಕೇರಳದ ಇಸ್ಲಾಮಿಕ್ ಶಿಕ್ಷಣ ಸಂಸ್ಥೆಯೊಂದು (Islamic Education Institute) ಸಾಮರಸ್ಯ ಬೆಸೆಯಲು ಮುಂದಾಗಿದೆ. ಧರ್ಮಗಳ ಬಗ್ಗೆ ಜಾಗೃತಿ ಮೂಡಿಸಲು ಇಸ್ಲಾಮಿಕ್ ಶಿಕ್ಷಣ ಸಂಸ್ಥೆಯಲ್ಲಿ ತನ್ನ ವಿದ್ಯಾರ್ಥಿಗಳಿಗೆ ಅರೇಬಿಕ್, ಕುರಾನ್ ಜೊತೆಗೆ ಸಂಸ್ಕೃತ ಶ್ಲೋಕ (Teaching Sanskrit) ಹಾಗೂ ಭಗವದ್ಗೀತೆಗಳನ್ನೂ (BhagavadGita) ಕಲಿಸಿಕೊಡುತ್ತಿದೆ.

Sanskrit

ಹೌದು. ಬಿಳಿ ನಿಲುವಂಗಿ, ಶಿರವಸ್ತ್ರ ವಿದ್ಯಾರ್ಥಿಗಳು (Students) ಹಿಂದೂ ಗುರುಗಳಿಂದ ಕಲಿತ ಸಂಸ್ಕೃತ ಶ್ಲೋಕ ಹಾಗೂ ಮಂತ್ರ ಪಠಣ ಮಾಡುವುತ್ತಿರುವ ದೃಶ್ಯ ಕೇರಳದ ತ್ರಿಶೂರ್ ಜಿಲ್ಲೆಯ ಇಸ್ಲಾಮಿಕ ಶಿಕ್ಷಣ ಸಂಸ್ಥೆಯಲ್ಲಿ ಕಂಡುಬಂದಿದೆ. ಗುರುಗಳು ಹೇಳುತ್ತಿದ್ದಂತೆ ವಿದ್ಯಾರ್ಥಿಯೊಬ್ಬರು `ಗುರು ಬ್ರಹ್ಮ, ಗುರು ವಿಷ್ಣು, ಗುರುದೇವೋ ಮಹೇಶ್ವರಃ, ಗುರು ಸಾಕ್ಷಾತ್ ಪರಬ್ರಹ್ಮ, ತಸ್ಮೈಶ್ರೀ ಗುರವೇ ನಮಃ’ ಶ್ಲೋಕವನ್ನು ಪಠಿಸಿದ್ದಾರೆ. ಮತ್ತೊಬ್ಬ ವಿದ್ಯಾರ್ಥಿ ವಿಭಿನ್ನ ಶ್ಲೋಕವನ್ನು (Slokas) ಪಠಿಸಿದ್ದಾರೆ, ಗುರುಗಳು ಇದನ್ನು ಪ್ರಸಂಶಿಸಿದ್ದಾರೆ. ಶಿಕ್ಷಣ ಕೇಂದ್ರದ ಈ ನಡೆಗೆ ಈಗ ಸಾರ್ವಜನಿಕರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.

Kerala University

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಅಕಾಡೆಮಿ ಆಫ್ ಷರಿಯಾ ಮತ್ತು ಅಡ್ವಾನ್ಸ್ಡ್‌ ಸ್ಟಡೀಸ್ (ASAS) ಪ್ರಾಂಶುಪಾಲ ಓಂಪಿಲ್ಲಿ ಮುಹಮ್ಮದ್ ಫೈಝಿ, ವಿದ್ಯಾರ್ಥಿಗಳಲ್ಲಿ ಇತರ ಧರ್ಮಗಳ ಬಗ್ಗೆ ಜ್ಞಾನ ಮತ್ತು ಜಾಗೃತಿ ಮೂಡಿಸುವ ಉದ್ದೇಶದಿಂದ ಸಂಸ್ಕೃತ, ಉಪನಿಷತ್ತುಗಳು, ಪುರಾಣ ಇತ್ಯಾದಿಗಳನ್ನು ಕಲಿಸಲಾಗುತ್ತಿದೆ. ಅವರು ಇತರ ಧರ್ಮಗಳ ಬಗ್ಗೆಯೂ ತಿಳಿದುಕೊಳ್ಳಬೇಕು ಎಂದು ನಾವು ಭಾವಿಸಿದ್ದೇವೆ. ಅದಕ್ಕಾಗಿ ಸಂಸ್ಕೃತದ ಜೊತೆಗೆ ಉಪನಿಷತ್ತುಗಳು, ಶಾಸ್ತ್ರ, ವೇದಾಂತಗಳ ಅಧ್ಯಯನಗಳನ್ನು ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪೊಲೀಸರಿಗೆ ಚಾಲೆಂಜ್ ಹಾಕಿ ಠಾಣೆ ಪಕ್ಕದಲ್ಲೇ ಸರಗಳ್ಳತನ- ಇಬ್ಬರು ಅರೆಸ್ಟ್

Kerala University 1

10ನೇ ತರಗತಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮುಂದಿನ 8 ವರ್ಷಗಳ ಅವಧಿಯಲ್ಲಿ ಭಗವದ್ಗೀತೆ, ಉಪನಿಷತ್ತುಗಳು, ಮಹಾಭಾರತ, ರಾಮಾಯಣದ ಪ್ರಮುಖ ಆಯ್ದ ಭಾಗಗಳನ್ನು ಸಂಸ್ಕೃತದಲ್ಲಿ ಕಲಿಸಲಾಗುತ್ತದೆ. ಇದು ಕ್ಯಾಲಿಕಟ್ ವಿಶ್ವವಿದ್ಯಾನಿಲಯದೊಂದಿಗೆ ಸಂಯೋಜಿತವಾಗಿರುವುದರಿಂದ ಪದವಿ ಕೋರ್ಸ್‌ಗಳ ಜೊತೆಗೆ ಉರ್ದು, ಇಂಗ್ಲಿಷ್, ಇತರ ಭಾಷೆಗಳನ್ನು ಕಲಿಸಿಕೊಡಲಾಗುತ್ತದೆ ಎಂದು ಹೇಳಿದ್ದಾರೆ.

ಶೈಕ್ಷಣಿಕ ಕೆಲಸಗಳ ಜವಾಬ್ದಾರಿ ದೊಡ್ಡ ಹೊರೆ. ಹಾಗಾಗಿ ನಾವು ಅದನ್ನು ಕಟ್ಟುನಿಟ್ಟಾಗಿ ನಿಭಾಯಿಸುವ ವಿದ್ಯಾರ್ಥಿಗಳನ್ನೇ ಆಯ್ಕೆ ಮಾಡಿಕೊಳ್ಳುತ್ತೇವೆ. ಇಲ್ಲಿಗೆ ಬರೋದಕ್ಕೂ ಮುನ್ನವೇ ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆ ಎದುರಿಸಬೇಕಾಗುತ್ತದೆ ಎಂದಿದ್ದಾರೆ. ಇದನ್ನೂ ಓದಿ: ಟೀಂ ಇಂಡಿಯಾ ಹೀನಾಯ ಸೋಲಿಗೆ ಇದೇ ಕಾರಣ – ಪಾಕ್ ತಜ್ಞರ ವಿಶ್ಲೇಷಣೆ

ಆರಂಭದಲ್ಲಿ ಅರೇಬಿಕ್‌ನಂತೆಯೇ ಸಂಸ್ಕೃತ ಕಲಿಯುವುದು ಕಷ್ಟಕರವಾಗಿತ್ತು. ಆದರೆ ನಿರಂತರವಾಗಿ ಅಧ್ಯಯನ ಮತ್ತು ಅಭ್ಯಾಸದಿಂದ ಸುಲಭವಾಗುತ್ತದೆ. ಇದೀಗ ವಿದ್ಯಾರ್ಥಿಗಳೇ ಹೆಚ್ಚು ಉತ್ಸುಕರಾಗಿದ್ದಾರೆ. ನಿಯಮಿತ ತರಗತಿಗಳು ಮತ್ತು ಪರೀಕ್ಷೆಗಳೂ ಕಲಿಕೆಗೆ ಸಹಾಯಕವಾಗಿದೆ ಎಂದು ವಿದ್ಯಾರ್ಥಿಗಳು ಹೇಳಿಕೊಂಡಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *