– ವಿಶ್ವದಲ್ಲಿ ಮೊದಲ ಕ್ರಿಕೆಟ್ ಆಟಗಾರ ಸೋಂಕಿಗೆ ಬಲಿ
ಇಸ್ಲಾಮಾಬಾದ್: ಕೊರೊನಾ ವೈರಸ್ ಸೋಂಕಿನಿಂದ ಪಾಕಿಸ್ತಾನ ಮಾಜಿ ಕ್ರಿಕೆಟಿಗ ಜಾಫರ್ ಸರ್ಫರಾಜ್ ಮೃತಪಟ್ಟಿದ್ದಾರೆ.
ಕೊರೊನಾ ಸೋಂಕಿಗೆ ತುತ್ತಾಗಿ ಗಂಭೀರ ಸ್ಥಿತಿ ತಲುಪಿದ್ದ ಜಾಫರ್ ಕಳೆದ ಮೂರು ದಿನಗಳಿಂದ ವೆಂಟಿಲೇಟರ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೇ 50 ವರ್ಷದ ಜಾಫರ್ ಸರ್ಫರಾಜ್ ಪೇಶಾವರದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
Advertisement
Advertisement
ಪಾಕಿಸ್ತಾನ ಪ್ರಥಮ ದರ್ಜೆ ಕ್ರಿಕೆಟರ್ ಆಗಿದ್ದ ಜಾಫರ್ ಸರ್ಫರಾಜ್, ಪಾಕಿಸ್ತಾನದ ಅಂಡರ್-19 ಮತ್ತು ಅಂತಾರಾಷ್ಟ್ರೀಯ ಎರಡು ತಂಡಕ್ಕೂ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ಆದರೆ ಕಳೆದ ಕೆಲ ದಿನಗಳಿಂದ ಕೊರೊನಾ ಸೋಂಕಿಗೆ ತುತ್ತಾಗಿ ಬಳಲುತ್ತಿದ್ದರು. ಅವರನ್ನು ಪೇಶಾವರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಅವರು ವೆಂಟಿಲೇಟರ್ ಮೇಲೆಯೇ ಮೃತಪಟ್ಟಿದ್ದಾರೆ. ಈ ಮೂಲಕ ಕೊರೊನಾ ಸೋಂಕಿಗೆ ಬಲಿಯಾದ ಮೊದಲ ಕ್ರಿಕೆಟರ್ ಆಗಿದ್ದಾರೆ.
Advertisement
Advertisement
ಜಾಫರ್ ಸರ್ಫರಾಜ್ ಅವರು ಪಾಕಿಸ್ತಾನದ ಮಾಜಿ ಅಂತರರಾಷ್ಟ್ರೀಯ ಆಟಗಾರ ಅಖ್ತರ್ ಸರ್ಫರಾಜ್ ಅವರ ಸಹೋದರನಾಗಿದ್ದಾರೆ. ಆದರೆ ಇವರು ಕೂಡ ದೊಡ್ಡ ಕರುಳಿನ ಕ್ಯಾನ್ಸರ್ ಸಮಸ್ಯೆಯಿಂದ 10 ತಿಂಗಳ ಹಿಂದೆ ಇದೇ ಪೇಶಾವರದಲ್ಲಿ ನಿಧನ ಹೊಂದಿದ್ದರು. ಪೇಶಾವರ ನಗರದಲ್ಲಿ ಒಟ್ಟು 744 ಕೊರೊನಾ ಪ್ರಕರಣಗಳಿವೆ. ಪಾಕಿಸ್ತಾನದಲ್ಲಿ ಒಟ್ಟು 5,500 ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ.