Wednesday, 18th July 2018

Recent News

ನ್ಯೂಯಾರ್ಕ್‍ನಲ್ಲಿ ಐಸಿಸ್ ಕೃತ್ಯಕ್ಕೆ 8 ಬಲಿ: ರಸ್ತೆಯಲ್ಲಿ ಉಗ್ರನ ಆಟಾಟೋಪ ನೋಡಿ

ನ್ಯೂಯಾರ್ಕ್: ಪಾದಚಾರಿ ಮಾರ್ಗದಲ್ಲಿ ಏಕಾಏಕಿ ಉಗ್ರನೊಬ್ಬ ಪಿಕಪ್ ಹರಿಸಿದ ಪರಿಣಾಮ 8 ಮಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಸುಮಾರು 12 ಕ್ಕೂ ಹೆಚ್ಚು ಜನರಿಗೆ ಗಂಭೀರವಾಗಿರುವ ಘಟನೆ ನ್ಯೂಯಾರ್ಕ್‍ನ ವಿಶ್ವ ವ್ಯಾಪಾರ ಕೇಂದ್ರದ ಬಳಿ ನಡೆದಿದೆ.

ಅಧಿಕಾರಿಗಳಿಗೆ ದಾಳಿ ನಡೆದ ಸ್ಥಳದಲ್ಲಿ ಇಂಗ್ಲೀಷ್‍ನಲ್ಲಿ ಬರೆದಿರುವ ಒಂದು ನೋಟ್ ಸಿಕ್ಕಿದ್ದು, ಅದರ ಆಧಾರದ ಮೇಲೆ ಐಸಿಸ್ ಉಗ್ರ ಸಂಘಟನೆಗೆ ಸೇರಿದ ವ್ಯಕ್ತಿಯೊಬ್ಬ ಈ ದಾಳಿಯನ್ನು ನಡೆಸಿದ್ದಾನೆ ಎನ್ನುವ ಶಂಕೆ ವ್ಯಕ್ತವಾಗಿದೆ.

ಇದು ಭಯೋತ್ಪಾದಕರ ಹೇಡಿತನದ ಕೃತ್ಯವಾಗಿದೆ. ಉಗ್ರರು ಮುಗ್ಧ ನಾಗರಿಕರನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಿದ್ದಾರೆ ಎಂದು ನ್ಯೂಯಾರ್ಕ್ ಮೇಯರ್ ಬಿಲ್ ಡಿ ಬ್ಲೇಸಿಯೋ ಹೇಳಿದ್ದಾರೆ.

ಮೂಲಗಳ ಪ್ರಕಾರ, ದಾಳಿಕೋರನನ್ನು 29 ವರ್ಷದ ಸೈಫಲೋಲೋ ಹಬಿಬುಲ್ಲೇವಿಕ್ ಸೈಪೋವ್ ಎಂದು ಗುರುತಿಸಲಾಗಿದೆ. ಈತ ಏಷ್ಯಾದ ಕೇಂದ್ರ ರಾಷ್ಟ್ರವಾದ ಉಜ್ಬೇಕಿಸ್ತಾನ್‍ನ ಪ್ರಜೆಯಾಗಿದ್ದು, 2010ರಲ್ಲಿ ಅಮೆರಿಕಕ್ಕೆ ಬಂದಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ.

ಪಿಕಪ್ ಬಾಡಿಗೆ ಪಡೆದುಕೊಂಡು ಮನಸೋ ಇಚ್ಛೆ ವಾಹನವನ್ನು ಅತೀವೇಗದಿಂದ ಚಲಾಯಿಸಿಕೊಂಡು ಬಂದಿದ್ದಾನೆ. ಮೊದಲು ನಿಂತಿದ್ದ ಒಂದು ಶಾಲಾ ಬಸ್‍ಗೆ ಡಿಕ್ಕಿ ಹೊಡೆದು ನಂತರ ಬೈಕ್ ಮತ್ತು ಸೈಕಲ್ ಪಾದಚಾರಿ ಸವಾರರ ಮೇಲೆ ಏಕಾಏಕಿ ಹರಿಸಿದ್ದಾನೆ. ಪರಿಣಾಮ ಸ್ಥಳದಲ್ಲಿಯೇ 6 ಮಂದಿಯನ್ನು ಸಾವನ್ನಪ್ಪಿದ್ದಾರೆ. ಇಬ್ಬರು ಗಾಯಾಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಈ ದಾಳಿಯಲ್ಲಿ ಸುಮಾರು 12 ಕ್ಕೂ ಮಂದಿಗೆ ಗಂಭೀರವಾಗಿ ಗಾಯಗೊಂಡಿದ್ದು, ಸದ್ಯಕ್ಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಟ್ರಕ್ ಚಾಲಕ ‘ಅಲ್ಲಾಹು ಅಕ್ಬರ್’ ಎಂಬುದಾಗಿ ಚೀರುತ್ತಿದ್ದ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಪಿಸ್ತೂಲ್ ಹಿಡಿದುಕೊಂಡು ಮತ್ತಷ್ಟು ಜನರನ್ನು ಹತ್ಯೆ ಮಾಡಲು ಮುಂದಾಗುತ್ತಿದ್ದ ವೇಳೆ ಭದ್ರತಾ ಸಿಬ್ಬಂದಿ ಆತನನ್ನು ಸುತ್ತುವರೆದು ಗುಂಡಿಟ್ಟು ಹತ್ಯೆ ಮಾಡಿದ್ದಾರೆ.

ಈ ಘಟನೆಯ ಬಗ್ಗೆ ಅಮೆರಿಕದ ಅಧ್ಯಕ್ಷ ಟ್ರಂಪ್ ಟ್ವಿಟ್ಟರ್‍ನಲ್ಲಿ ಪ್ರತಿಕ್ರಿಯೆ ನೀಡಿದ್ದು, ಅಮಾಯಕರ ಮೇಲಿನ ಉಗ್ರರ ದಾಳಿ ಹೇಡಿತನದ್ದು. ಉಗ್ರ ದಾಳಿಯಿಂದ ಸಾವನ್ನಪ್ಪಿದ ಸಂತ್ರಸ್ತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇವೆ. ಅಂತೆಯೇ ದಾಳಿ ನಡೆಸಿದ ಉಗ್ರರನ್ನು ಪತ್ತೆ ಮಾಡುತ್ತೇವೆ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ.

Leave a Reply

Your email address will not be published. Required fields are marked *