ಮುಂಬೈ: ಶಂಕಿತ ಐಸಿಸ್ ಉಗ್ರನೊಬ್ಬನನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಭಯತ್ಪೋದನಾ ನಿಗ್ರಹ ದಳ (ಎಟಿಎಸ್)ದ ಅಧಿಕಾರಿಗಳು ಶನಿವಾರ ಬಂಧಿಸಿದ್ದು, ಇಂದು ಅಧಿಕಾರಿಗಳು ಈ ವಿಷಯವನ್ನು ತಿಳಿಸಿದ್ದಾರೆ.
ಅಬು ಜಯೀದ್ ಬಂಧಿತ ಶಂಕಿಯ ಐಸಿಸ್ ಉಗ್ರ. ಜಯೀಸ್ ಮೂಲತಃ ಉತ್ತರ ಪ್ರದೇಶ ರಾಜ್ಯದ ಅಜಮ್‍ಘಡ್ ನಿವಾಸಿಯಾಗಿದ್ದಾನೆ. ಸೌದಿ ಅರೇಬಿಯಾದಿಂದ ಶನಿವಾರ ಮುಂಬೈಗೆ ಬಂದಿಳಿದ ಜಯೀದ್ ನನ್ನು ಮುಂಬೈನ ಎಟಿಎಸ್ ಅಧಿಕಾರಿಗಳು ಬಂಧಿಸಲಾಗಿದೆ ಎಂದು ಉತ್ತರ ಪ್ರದೇಶದ ಹಿರಿಯ ಪೊಲೀಸ್ ಅಧಿಕಾರಿ ಆನಂದ್ ಕುಮಾರ್ ಇಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
Advertisement
Advertisement
ಸೋಶಿಯಲ್ ನೆಟ್‍ವರ್ಕ್: ಅಬು ಜಯೀದ್ ರಿಯಾದ್ ನಲ್ಲಿ ವಾಸವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಗ್ರೂಪ್ ಕ್ರಿಯೇಟ್ ಮಾಡಿ, ಅದರ ಮೂಲಕ ಭಾರತದಲ್ಲಿರುವ ಯುವಕರನ್ನು ಉಗ್ರ ಚಟುವಟಿಕೆಗಳಲ್ಲಿ ಭಾಗಿಯುವಂತೆ ಪ್ರಚೋದನೆ ನೀಡುತ್ತಿದ್ದನು. ಈ ಸಂಬಂಧ ಅಬು ಜಯೀದ್ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿತ್ತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
Advertisement
ಕೆಲವು ಶಂಕಿತರಾದ ಉಮರ್ ಅಲಿಯಾಸ್ ನಜೀಮ್, ಘಾಜೀ ಬಾಬಾ ಅಲಿಯಾಸ್ ಮುಜುಮ್ಮಿ, ಮುಫ್ತಿ ಅಲಿಯಾಸ್ ಫಯಾಜ್ ಮತ್ತು ಜ್ಯಾಕ್‍ವಾನ್ ಅಲಿಯಾಸ್ ಈಥಿಶೆಮ್ ಎಂಬವರು ಮೊಬೈಲ್ ರೆಕಾರ್ಡ್ ಗಳಿಂದ ಅಬು ಜಯೀದ್ ಕುರಿತು ಮಾಹಿತಿಗಳು ಲಭ್ಯವಾಗಿದ್ದವು. ಇವರೆಲ್ಲರೂ ಒಂದು ಆನ್‍ಲೈನ್ ನೆಟ್‍ವರ್ಕ್ ಒಂದು ಒಂದು ನಿರ್ಧಿಷ್ಟ ಗ್ರೂಪ್ ಒಂದರ ಮೂಲಕ ಮಾತುಕತೆಯನ್ನು ನಡೆಸುತ್ತಿದ್ದರು. ಈ ಎಲ್ಲರು ದೇಶದ ಕೆಲವು ನಗರಗಳ ಮೇಲೆ ಭಯತ್ಪೋದಾಯಕ ದಾಳಿ ನಡೆಸಲು ಸಂಚು ರೂಪಿಸಿದ್ದರು ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.
Advertisement
ಸದ್ಯ ಅಬು ಜಯೀದ್ ನನ್ನು ಮುಂಬೈನಿಂದ ಲಕ್ನೋ ನಗರಕ್ಕೆ ಕರೆತಂದು ನ್ಯಾಯಾಲಯದ ಮುಂದೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗೆ ಸಂಬಂಧಿಸಿದಂತೆ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗುತ್ತದೆ ಎಂದು ಆನಂದ್ ಕುಮಾರ್ ತಿಳಿಸಿದ್ದಾರೆ.
Uttar Pradesh ATS arrested an ISIS suspect Abu Zaid from Mumbai. pic.twitter.com/9BZttTl34b
— ANI UP/Uttarakhand (@ANINewsUP) November 5, 2017
We have arrested a terror suspect Abu Zaid from Mumbai airport: ADG (LO) Anand Kumar pic.twitter.com/8o00VZk9VM
— ANI UP/Uttarakhand (@ANINewsUP) November 5, 2017
We have brought the terror suspect on transit remand to Lucknow from Mumbai. He was the ideologue of his group: ADG (LO) Anand Kumar pic.twitter.com/JGA9XUYBG5
— ANI UP/Uttarakhand (@ANINewsUP) November 5, 2017