ಅಟ್ಮೆಹ್: ಅಮೆರಿಕ ಸೇನೆಯ ಭಾರೀ ಕಾರ್ಯಾಚರಣೆಗೆ ಹೆದರಿ ಐಸಿಸ್(ISIS) ಮುಖ್ಯಸ್ಥ ಅಬು ಇಬ್ರಾಹಿಂ ಅಲ್ ಹಾಶಿಮಿ ಅಲ್ ಖುರೈಶಿ (Abu Ibrahim al Hashimi al Qurayshi) ಆತ್ಮಾಹುತಿ ಮಾಡಿಕೊಂಡು ಸಾವನ್ನಪ್ಪಿದ್ದಾನೆ.
ಈ ಹಿಂದೆ 2011 ರಲ್ಲಿ ಪಾಕಿಸ್ತಾನದ ಅಬೋಟಾಬಾದ್ ನಗರಕ್ಕೆ ರಹಸ್ಯವಾಗಿ ನುಗ್ಗಿ ಅಲ್‌ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ಹತ್ಯೆಯನ್ನು ಹೇಗೆ ಮಾಡಲಾಗಿತ್ತೋ ಅದೇ ರೀತಿಯ ಕಾರ್ಯಾಚರಣೆಯನ್ನು ಅಮೆರಿಕ ಸೇನೆ ಮತ್ತೊಮ್ಮೆ ನಡೆಸಿದೆ. ಈ ಕಾರ್ಯಾಚರಣೆಗೆ ಹೆದರಿ ಅಲ್ ಖುರೈಶಿ ಆತ್ಮಹತ್ಯೆ ಮಾಡಿಕೊಂಡಿದ್ದು ಮಾತ್ರವಲ್ಲದೇ ತನ್ನ ಕುಟುಂಬ ಸದಸ್ಯರನ್ನೂ ಸಾಯಿಸಿದ್ದಾನೆ. ಇದನ್ನೂ ಓದಿ: ಚೀನಾ ಒಲಿಂಪಿಕ್ಸ್‌ಗೆ ಭಾರತ ಬಹಿಷ್ಕಾರ – ದಿಟ್ಟ ನಿರ್ಧಾರ ತೆಗೆದುಕೊಂಡ ಭಾರತೀಯ ವಿದೇಶಾಂಗ ಇಲಾಖೆ
Advertisement
Advertisement
ನಡೆದಿದ್ದು ಏನು?
ಸಿರಿಯಾದ(Syria) ಇದ್ಲಿಬ್ ಪ್ರಾಂತ್ಯದ ಅಟ್ಮೇಹ್ ನಗರದ ಮನೆಯೊಂದರಲ್ಲಿ ಇಬ್ರಾಹಿಂ ಅಡಗಿದ್ದಾನೆ ಎಂಬ ಖಚಿತ ಮಾಹಿತಿ ಅಮೆರಿಕ ಸೇನೆಗೆ ಸಿಕ್ಕಿತ್ತು. ಈ ಮಾಹಿತಿ ಆಧಾರಿಸಿ ವಿಶೇಷ ಪಡೆಗಳೊಂದಿಗೆ ಬುಧವಾರ ರಾತ್ರಿ ರಹಸ್ಯವಾಗಿ ಹೆಲಿಕಾಪ್ಟರ್‌ನಲ್ಲಿ ಆಗಮಿಸಿ ದಾಳಿ ನಡೆಸಿದೆ.
Advertisement
ಆಲಿವ್ ಮರಗಳಿಂದ ಸುತ್ತುವರೆದ 2 ಅಂತಸ್ತಿನ ಮನೆಯ ಮೇಲೆ ಹೆಲಿಕಾಪ್ಟರ್‌ನಲ್ಲಿ ಇಳಿದ ಅಮೆರಿಕ ಯೋಧರು ಶರಣಾಗುವಂತೆ ಸೂಚಿಸಿದ್ದಾರೆ. ಈ ಸಂದರ್ಭದಲ್ಲಿ ಆತನ ಅಂಗರಕ್ಷಕರು ಅಮೆರಿಕ ಯೋಧರ ಮೇಲೆ ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಅಮೆರಿಕ ಯೋಧರು ದಾಳಿ ನಡೆಸಿದ್ದು ಸುಮಾರು 2 ಗಂಟೆ ಗುಂಡಿನ ಚಕಮಕಿ ನಡೆದಿದೆ. ಇದನ್ನೂ ಓದಿ: Galwan Clash ಚೀನಾದ ಸುಳ್ಳು ಬಯಲು – 38 ಪಿಎಲ್‌ಎ ಯೋಧರು ಸಾವು
Advertisement
ತಾನು ಸಿಕ್ಕಿಬೀಳುವುದು ಖಚಿತ ಎನ್ನುವುದು ತಿಳಿಯುತ್ತಿದ್ದಂತೆ ಇಬ್ರಾಹಿಂ ತನ್ನ ಕುಟುಂಬ ಸದಸ್ಯರೊಂದಿಗೆ ಬಾಂಬ್ ಸ್ಫೋಟಿಸಿಕೊಂಡು ಸಾವನ್ನಪ್ಪಿದ್ದಾನೆ.
ಈ ವಿಚಾರದ ಬಗ್ಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಶ್ವೇತ ಭವನದಲ್ಲಿ ಪ್ರತಿಕ್ರಿಯಿಸಿ, ಕಾರ್ಯಾಚರಣೆ ನಡೆಸಿ ಐಸಿಸ್ ಮುಖ್ಯಸ್ಥ ಅಬು ಇಬ್ರಾಹಿಂನನ್ನು ಕೊಂದು ಹಾಕಿದ್ದೇವೆ. ಈ ದಾಳಿಯಲ್ಲಿ ನಾಲ್ವರು ಮಹಿಳೆಯರು ಮತ್ತು 6 ಮಕ್ಕಳು ಸೇರಿ 13 ಮಂದಿ ಬಲಿಯಾಗಿದ್ದಾರೆ. ನಮ್ಮ ಸೇನೆಯ ಒಬ್ಬ ಯೋಧ ಸಹ ಗಾಯಗೊಂಡಿಲ್ಲ. ಈ ಕಾರ್ಯಾಚರಣೆಯಲ್ಲಿ ತೊಡಗಿದ್ದ ಯೋಧರೆಲ್ಲರೂ ಸುರಕ್ಷಿತವಾಗಿ ಮರಳಿದ್ದಾರೆ ಎಂದು ತಿಳಿಸಿದ್ದಾರೆ.
ಸಿರಿಯಾ ಕಾರ್ಯಾಚರಣೆ ವಿಶ್ವಾದ್ಯಂತ ಇರುವ ಭಯೋತ್ಪಾದಕರಿಗೆ ಬಲವಾದ ಸಂದೇಶವನ್ನು ರವಾನಿಸಿದೆ. ನಿಮ್ಮ ಹಿಂದೆ ಬಂದು ನಿಮ್ಮನ್ನು ಹೊಸಕಿ ಹಾಕುತ್ತೇವೆ. ನಾನು ಅಮೇರಿಕದ ಪ್ರಜೆಗಳನ್ನು ಭಯೋತ್ಪಾದಕ ಬೆದರಿಕೆಗಳಿಂದ ರಕ್ಷಿಸಲು ಪ್ರಯತ್ನಿಸುತ್ತೇನೆ. ಅಮೆರಿಕ ಪಡೆಗಳು ಯಾವಾಗಲೂ ಸನ್ನದ್ಧವಾಗಿರುತ್ತದೆ ಎಂದು ಬೈಡನ್ ತಿಳಿಸಿದರು.
Last night at my direction, U.S. military forces successfully undertook a counterterrorism operation. Thanks to the bravery of our Armed Forces, we have removed from the battlefield Abu Ibrahim al-Hashimi al-Qurayshi — the leader of ISIS.
https://t.co/lsYQHE9lR9
— President Biden (@POTUS) February 3, 2022
ಯಾರು ಈ ಇಬ್ರಾಹಿಂ?: ಐಸಿಸ್ ಮುಖ್ಯಸ್ಥನಾಗಿದ್ದ ಅಬುಬಕರ್ ಅಲ್-ಬಗ್ದಾದಿಯನ್ನು 2019ರಲ್ಲಿ ಅಮೆರಿಕ ಸೇನೆ ಸಿರಿಯಾದಲ್ಲಿ ಹತ್ಯೆ ಮಾಡಿತ್ತು. ನಂತರ ಇಬ್ರಾಹಿಂ ಸಂಘಟನೆಯ ನೇತೃತ್ವ ವಹಿಸಿಕೊಂಡಿದ್ದ.