ನವದೆಹಲಿ: ಭಾರತದಲ್ಲಿ ನಿಷೇಧಗೊಂಡ ನೋಟುಗಳನ್ನು ಪಾಕಿಸ್ತಾನ ಸಂಗ್ರಹಿಸುತ್ತಿದ್ದು, ಅವುಗಳನ್ನು ಪುನರ್ಬಳಕೆ ಮಾಡಿ ಹೊಸ ನಕಲಿ ನೋಟುಗಳನ್ನು ಮುದ್ರಿಸುತ್ತಿರುವ ವಿಚಾರ ಈಗ ಬೆಳಕಿಗೆ ಬಂದಿದೆ.
ಪಾಕಿಸ್ತಾನದ ಗೂಢಾಚಾರ ಸಂಸ್ಥೆ ಐಎಸ್‍ಐ ಭಾರತದಲ್ಲಿ ಅಮಾನ್ಯೀಕರಣಗೊಂಡ 500 ಹಾಗೂ 1000 ಮುಖಬೆಲೆಯ ನೋಟುಗಳನ್ನು ಭಾರೀ ಪ್ರಮಾಣದಲ್ಲಿ ಸಂಗ್ರಹಿಸುತ್ತಿದೆ. ತನ್ನ ಏಜೆಂಟರ್ ಮೂಲಕ ಭಾರತದ ವಿವಿಧ ರಾಜ್ಯಗಳಿಂದ ಲಕ್ಷಗಟ್ಟಲೆ ಹಳೆಯ ನೋಟುಗಳನ್ನು ಸಂಗ್ರಹ ಮಾಡುತ್ತಿದೆ ಎಂದು ಗುಪ್ತಚರ ಇಲಾಖೆಗ ಮೂಲಗಳನ್ನು ಆಧಾರಿಸಿ ವಾಹಿನಿಯೊಂದು ವರದಿ ಮಾಡಿದೆ.
Advertisement
ಹಳೆಯ ನೋಟುಗಳನ್ನು ನೇಪಾಳ ಮೂಲಕ ಪಾಕಿಸ್ತಾನಕ್ಕೆ ಕಳ್ಳಸಾಗಾಣೆ ಮಾಡುತ್ತಿದೆ. ಬಳಿಕ ಅಲ್ಲಿಂದ ಈ ನೋಟುಗಳನ್ನು ಕರಾಚಿ ಮತ್ತು ಪೇಶಾವರದಲ್ಲಿರುವ ಪ್ರಿಂಟಿಂಗ್ ಪ್ರೆಸ್‍ಗಳಿಗೆ ರವಾನಿಸಿ, ನೋಟುಗಳಲ್ಲಿರುವ ಆರ್‍ಬಿಐನ ನೋಟಿನಲ್ಲಿ ಹಾಕಿರುವ ಭದ್ರತಾ ವಿಶೇಷತೆಗಳ ಮಾಹಿತಿಗಳನ್ನು ಸಂಗ್ರಹಿಸುತ್ತಿದೆ ಎಂದು ಹೇಳಿದೆ.
Advertisement
Advertisement
ಹಳೆಯ ನೋಟುಗಳ ಬಳಸಿಕೊಂಡು 500, 2000 ಹಾಗೂ 50 ರೂಪಾಯಿ ಮುಖಬೆಲೆಯ ನಕಲಿ ನೋಟುಗಳನ್ನು ಮುದ್ರಿಸುತ್ತಿದೆ. ಭೂಗತಪಾತಕಿ ದಾವೂದ್ ಇಬ್ರಾಹಿಂನ ಸಹಾಯದಿಂದ ಈ ನಕಲಿ ನೋಟುಗಳನ್ನು ಬಾಂಗ್ಲಾ ಮತ್ತು ದುಬೈಗೆ ರಫ್ತು ಮಾಡುತ್ತಿವೆ ಎಂದು ಗುಪ್ತಚರ ಇಲಾಖೆ ತಿಳಿಸಿದೆ.
Advertisement
ಭಾರತದಲ್ಲಿ ಲಕ್ಷಗಟ್ಟಲೆ ಅಮಾನ್ಯೀಕರಣಗೊಂಡ ನೋಟುಗಳು ದಾಳಿಯಲ್ಲಿ ಸಿಕ್ಕಿದ್ದವು. ಈ ಕುರಿತು ತನಿಖೆ ನಡೆಸಿದಾಗ ಪಾಕಿಸ್ತಾನದ ಐಎಸ್‍ಐ ತನ್ನ ಏಜೆಂಟರುಗಳು ಮೂಲಕ ಅಮಾನ್ಯೀಕರಗೊಂಡ ನೋಟುಗಳನ್ನು ಸಂಗ್ರಹಿಸುತ್ತಿರುವ ಮಾಹಿತಿ ಬಯಲಾಗಿದೆ. ಈ ನೋಟುಗಳು ಭಾರತದ ಗಡಿ ದಾಟಿ, ನೇಪಾಳ ತಲುಪುತ್ತಿದಂತೆಯೇ ಏಜೆಂಟರ ಮೂಲಕ ಹಣ ಪಾವತಿ ಮಾಡುತ್ತಿರುವ ವಿಚಾರ ತನಿಖೆ ವೇಳೆ ತಿಳಿದುಬಂದಿದೆ. ಈಗಾಗಲೇ ಭಾರೀ ಪ್ರಮಾಣದಲ್ಲಿ ನೋಟುಗಳು ಕಳ್ಳಸಾಗಾಣಿಕೆಯ ಮೂಲಕ ಪಾಕಿಸ್ತಾನಕ್ಕೆ ಸರಬರಾಜಾಗಿರುವುದು ತಿಳಿದು ಬಂದಿದೆ ಎಂದು ಗೂಢಾಚಾರ ಸಂಸ್ಥೆ ವರದಿ ಮಾಡಿದೆ.
ಈ ನಕಲಿ ನೋಟುಗಳನ್ನು ಬಾಂಗ್ಲಾ ಮತ್ತು ದುಬೈ ದೇಶಗಳ ಮೂಲಕ ಭಾರತಕ್ಕೆ ಕಳ್ಳಸಾಗಣಿಕೆ ಮಾಡುತ್ತಿದೆ. ಈ ನೋಟುಗಳನ್ನು ಈಗಾಗಲೇ ಭಾರತದಲ್ಲಿ ಚಲಾವಣೆ ನಡೆಸುತ್ತಿರುವುದು ತಿಳಿದು ಬಂದಿದೆ. ಈ ನಕಲಿ ನೋಟಿನ ಜಾಲದ ಹಿಂದೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಕೈಜೋಡಿಸಿದ್ದಾನೆ ಎಂದು ಹೇಳಿದೆ.
ಕೆಲವು ನಕಲಿ ನೋಟುಗಳನ್ನು ವಶಪಡಿಸಿಕೊಂಡು, ಪರೀಕ್ಷೆ ನಡೆಸಿದಾಗ ಮೂಲ ನೋಟಿನಲ್ಲಿರುವ ಎಲ್ಲಾ ಭದ್ರತಾ ಅಂಶಗಳನ್ನು ಇವು ಒಳಗೊಂಡಿವೆ. ಅಲ್ಲದೆ ಯಾವುದು ನಕಲಿ, ಯಾವುದು ಅಸಲಿ ಎಂದು ತಿಳಿಯುವುದು ಕಷ್ಟವಾಗಿದೆ. ಈ ನೋಟುಗಳನ್ನು ಸಾಮಾನ್ಯ ವ್ಯಕ್ತಿ ಪತ್ತೆ ಹಚ್ಚುವುದು ತುಂಬಾ ಕಷ್ಟದ ವಿಷಯವಾಗಿದೆ ಎಂದು ತಿಳಿಸಿದೆ.