ಹುಬ್ಬಳ್ಳಿ: ರಷ್ಯಾದ (Russia) 8 ವರ್ಷದ ಬಾಲಕ ಕಾಶಿ ಪೀಠದ ಶ್ರೀಗಳಿಂದ ಇಷ್ಟಲಿಂಗ ದೀಕ್ಷೆ ಪಡೆದಿದ್ದಾನೆ. ಈ ಮೂಲಕ ಮಾಸ್ಕೋ ನಿವಾಸಿ ಪಾರ್ವತಿ ಎನ್ನುವವರ ಪುತ್ರ ಆ್ಯಂಡ್ರೆ ಎಂಬ 8 ವರ್ಷದ ಬಾಲಕ ಈಗ ಗಣೇಶನಾಗಿ ಬದಲಾಗಿದ್ದಾನೆ.
ಈ ಹಿಂದೆ ಉತ್ತರ ಕನ್ನಡ ಗೋಕರ್ಣದಲ್ಲಿ ಸಾವಿರಾರು ಜನರು ಕಾಶಿ ಶ್ರೀಗಳಿಂದ ಇಷ್ಟಲಿಂಗ ದೀಕ್ಷೆ ಪಡೆದಿದ್ದರು. ಈ ವೇಳೆ ರಷ್ಯಾದ ಮಹಿಳೆಯಾದ ಬಾಲಕನ ತಾಯಿ ಸಹ ವೀರಶೈವ ಧರ್ಮ ಸ್ವೀಕರಿಸಿದ್ದರು. ಬಳಿಕ ಪಾರ್ವತಿ ಎಂದು ಹೆಸರು ಬದಲಾಯಿಸಿಕೊಂಡಿದ್ದರು. ಅವರು ಚಾಚು ತಪ್ಪದೆ ವೀರಶೈವ ಧರ್ಮವನ್ನು (Veerashaiva) ಪಾಲಿಸುತ್ತಿದ್ದರು. ಅಲ್ಲದೇ ಇಷ್ಟಲಿಂಗ ಪೂಜೆಯನ್ನು ಸಹ ನಿತ್ಯವೂ ನಡೆಸುತ್ತಿದ್ದರು. ಇದರಿಂದ ಮಗ ಕೂಡ ಪ್ರಭಾವಿತನಾಗಿದ್ದು, ಅವರಂತೆ ಇಷ್ಟಲಿಂಗ ಧರಿಸಲು ಬಯಸಿದ್ದ. ಇದನ್ನೂ ಓದಿ: ನಡ್ಡಾ ಪ್ರಾರ್ಥನೆ ವೇಳೆ ಗಣೇಶ ಪೆಂಡಾಲ್‍ನಲ್ಲಿ ಅಗ್ನಿ ದುರಂತ – ಪವಾಡದಂತೆ ಸುರಿದ ಮಳೆಯಿಂದ ತಪ್ಪಿದ ಅನಾಹುತ
ಅವನ ಇಷ್ಟದಂತೆ ಪಾಲಕರು ಆತನಿಗೆ ಕಾಶಿ ಪೀಠದ ಡಾ.ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳಿಂದ ಇಷ್ಟಲಿಂಗ ದೀಕ್ಷೆ ಕೊಡಿಸಿದ್ದಾರೆ. ಬಳಿಕ ಆತನಿಗೆ ಮರು ನಾಮಕರಣಮಾಡಿ ಶುಭ ಹಾರೈಸಿದ್ದಾರೆ. ಇದನ್ನೂ ಓದಿ: ಝಡ್ ಪ್ಲಸ್ ಭದ್ರತೆ ಇದ್ರೂ ಚಂದ್ರಬಾಬು ನಾಯ್ಡುಗೆ ಜೈಲಲ್ಲಿ ಸೊಳ್ಳೆ ಕಾಟ- ಡೆಂಗ್ಯೂ ಭೀತಿ
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]