ಬೆಂಗಳೂರು: ಮಗಳನ್ನ ಜೀವಂತವಾಗಿ ನೋಡ್ತೀನಿ ಅಂತ ನಾನು ಅಂದುಕೊಂಡಿರಲಿಲ್ಲ. ಮಗಳು ಪ್ರತಿಬಾರಿಯೂ ಕರೆ ಮಾಡಿದಾಗ ‘ಲವ್ ಯೂ ಪಪ್ಪಾ’ ಅಂದಾಗ ಆಗ್ತಿದ್ದ ನೋವು ಯಾರಿಗೂ ಹೇಳೋದಕ್ಕೆ ಆಗಲ್ಲ ಎಂದು ಹೇಳುತ್ತಾ ವೈಟ್ ಫೀಲ್ಡ್ ಮೂಲದ ವಿದ್ಯಾರ್ಥಿನಿ ಇಶಾ ತಂದೆ ಭಾವುಕರಾದರು.
Advertisement
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನನ್ನ ಮಗಳು ತುಂಬಾ ಕಷ್ಟದಿಂದ ಖಾರ್ಕಿವ್ ನಿಂದ ಬಂದಿದ್ದಾಳೆ. ಅಲ್ಲಿ ಅವಳಿಗೆ ತುಂಬಾ ಕಷ್ಟವಾಗಿದೆ. ಮಗಳು ನೆಟ್‍ವರ್ಕ್ ಸಿಕ್ಕಿದ ಕೂಡಲೇ ಕರೆ ಮಾಡುತ್ತಿದ್ದಳು. 7 ದಿನ ನಿದ್ದೆಯಿಲ್ಲದೇ ಮಗಳಿಗಾಗಿ ಕಾಯುತ್ತಿದ್ದೆವು ಎಂದು ಕಣ್ಣೀರಾಕಿದರು. ಇದನ್ನೂ ಓದಿ: ಉಕ್ರೇನ್‍ನಿಂದ ಬಂದ ವೈದ್ಯಕೀಯ ವಿದ್ಯಾರ್ಥಿಗಳು ಇಂಟರ್ನ್‌ಶಿಪ್ ಮಾಡಬಹುದು: ಎನ್‍ಎಂಸಿ
Advertisement
Advertisement
ನಮ್ಮ ದೇಶದಲ್ಲೇ ಕಡಿಮೆ ಫೀಸ್ ಇದಿದ್ದರೆ ಮಗಳನ್ನ ಉಕ್ರೇನ್‍ಗೆ ಕಳುಹಿಸಿ ಓದಿಸೋ ಅಗತ್ಯ ಬರುತ್ತಿರಲಿಲ್ಲ ಅಂತಾ ತಂದೆ ಹೇಳಿದರು. ಇತ್ತ ಮಗಳು ಅಲ್ಲಿದ್ದಾಗ ಆದ ಅನುಭವವನ್ನು ಹಂಚಿಕೊಂಡಿದ್ದಾಳೆ. ಅಲ್ಲಿ ತುಂಬಾ ಕಷ್ಟದ ಪರಿಸ್ಥಿತಿ ಇತ್ತು. ಖಾರ್ಕಿವ್ ನಿಂದ 8 ಕಿಲೋ ನಡೆದುಕೊಂಡು ಬಂದು ರೈಲು ಹತ್ತಿ ಹೇಗೋ ಬಾರ್ಡರ್ ಗೆ ರಿಚ್ ಆಗಿ ಸೇಫ್ ಆಗಿ ಭಾರತಕ್ಕೆ ಬಂದಿದ್ದೇನೆ. ನಮ್ಮ ಖಾರ್ಕಿವ್ ನಿಂದ ಬಾರ್ಡರ್ ಗೆ ಬರೋ ಜರ್ನಿ ಬಹಳ ಕಷ್ಟದಿಂದ ಕೂಡಿತ್ತು. ನಮಗೆ ಟ್ರೈನ್ ಹತ್ತಲು ಸಹ ಬಿಡಲಿಲ್ಲ, ಹೇಗೋ ಸಾಧನೆ ಮಾಡಿ ಬಂದಿದ್ದೇನೆ. ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರಕ್ಕೆ ಧನ್ಯವಾದ ಅಂತಾ ಈಶಾ ಹೇಳಿದ್ದಾರೆ. ಇದನ್ನೂ ಓದಿ: ಯುದ್ಧ ಯಾರಿಗೂ ಬೇಡ ಎಂಬುದನ್ನು ಪುಟಿನ್‍ಗೆ ಅರ್ಥ ಮಾಡಿಸಿ: ಕುಲೆಬಾ
Advertisement
ಖಾರ್ಕಿವ್‍ನಲ್ಲಿ ಬಾಂಬ್ ದಾಳಿ ಶೆಲ್ ದಾಳಿ ಇತ್ತು. ಕ್ಷಣ ಕ್ಷಣಕ್ಕೂ ಬಾಂಬ್‍ಗಳು ಬೀಳುತ್ತಿದ್ದವು. ನಾವು ಬಂಕರ್‍ಗಳಲ್ಲಿ ಊಟ, ನೀರು ಇಲ್ಲದೆ ಇದ್ದೆವು. ಬಾಂಬ್ ದಾಳಿಗೆ ನಮ್ಮ ಯುನಿವರ್ಸಿಟಿ ನಾಶವಾಯ್ತು, ನಮ್ಮ ಸೀನಿಯರ್ ನವೀನ್ ಮೃತರಾದ್ರು. ರೈಲುಗಳಲ್ಲಿ ತುಂಬಾ ಭಯದ ವಾತವರಣವಿತ್ತು. ಉಕ್ರೇನ್ ಸೈನಿಕರು ಬಿಡ್ತಿರಲಿಲ್ಲ, ಇಂಡಿಯನ್ಸ್‍ನ ಕಪ್ಪು ಜನರನ್ನ ಟ್ರೈನ್ ಹತ್ತಲು ಬಿಡಲಿಲ್ಲ. ಆದರೂ ನಾನು ಬಂದ ಟ್ರೈನ್ ನಲ್ಲಿ 20 ಜನ ಇಂಡಿಯನ್ಸ್ ಕಷ್ಟಪಟ್ಟು ಹತ್ತಿಕೊಂಡು ಬಂದೆವು. ಬಾರ್ಡರ್ ಗೆ ರೀಚ್ ಆಗಲು ತುಂಬಾ ಕಷ್ಟವಾಗಿತ್ತು. 5 ರಿಂದ 10 ನಿಮಿಷಕ್ಕೆ ಬಾಂಬ್ ದಾಳಿಯಾಗ್ತಿದ್ದ ಕಾರಣ ತುಂಬಾ ಭಯವಾಗ್ತಿತ್ತು. ಬಾರ್ಡರ್‍ಗೆ ಬಂದ ಮೇಲೆ 5 ನಿಮಿಷದಲ್ಲಿ ಇಮಿಗ್ರೇಷನ್ ಎಲ್ಲ ಆಯ್ತು. ತುಂಬಾ ಚೆನ್ನಾಗಿ ಎಂಬ್ಬೆಸ್ಸಿ ಅಧಿಕಾರಿಗಳು ನೋಡಿಕೊಂಡ್ರು ಎಂದು ಹೇಳಿದಳು. ಇದನ್ನೂ ಓದಿ: ನೇರವಾಗಿ ರಷ್ಯಾವನ್ನು ಎದುರಿಸಲು ಮತ್ತೆ ಹಿಂದೇಟು ಹಾಕಿದ ನ್ಯಾಟೋ