ಲಂಡನ್: ಇಂಗ್ಲೆಂಡ್ ವಿರುದ್ಧ 4ನೇ ಟೆಸ್ಟ್ ಪಂದ್ಯದಲ್ಲಿ ಭಾರತೀಯ ಬೌಲರ್ ಗಳು ಮಿಂಚಿನ ದಾಳಿಗೆ ಇಂಗ್ಲೆಂಡ್ ಬಾಟ್ಸ್ ಮನ್ ಪೆವಿಲಿಯನ್ ಪರೇಡ್ ನಡೆಸಿದ್ದು, ಲಂಚ್ ಬ್ರೇಕ್ ಬಳಿಕ ಇಂಗ್ಲೆಂಡ್ 8 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.
ಸೌಥಾಂಪ್ಟನ್ ರೋಸ್ ಬಾಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ವೇಗಿ ಇಶಾಂತ್ ಶರ್ಮಾ, ಜೋ ರೂಟ್ ವಿಕೆಟ್ ಪಡೆಯುವ ಮೂಲಕ 250 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಭಾರತದ ಪರ ಈ ಸಾಧನೆ ಮಾಡಿದ 7ನೇ ಬೌಲರ್ ಎಂಬ ಹೆಗ್ಗಳಿಕೆ ಶರ್ಮಾ ಪಡೆದಿದ್ದಾರೆ. ಅಲ್ಲದೇ ವೇಗದ ಬೌಲರ್ ಗಳಲ್ಲಿ ಈ ಸಾಧನೆ ಮಾಡಿದ 3ನೇ ಬೌಲರ್ ಆಗಿದ್ದು, ಈ ಹಿಂದೆ ಕಪಿಲ್ ದೇವ್, ಜಹೀರ್ ಖಾನ್ ಕ್ರಮವಾಗಿ 434, 311 ವಿಕೆಟ್ ಗಳಿಸಿದ್ದರು. ಈ ಪಂದ್ಯದಲ್ಲಿ ಇಶಾಂತ್ ಶರ್ಮಾ ಮತ್ತೊಂದು ಹೆಗ್ಗಳಿಕೆಯನ್ನು ಪಡೆದಿದ್ದು ಇಂಗ್ಲೆಂಡ್ ವಿರುದ್ಧ 50 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.
Advertisement
Congratulations to @ImIshant on reaching 250 Test wickets! ???? #ENGvIND pic.twitter.com/xaxsNhbq7W
— ICC (@ICC) August 30, 2018
Advertisement
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ ತಂಡಕ್ಕೆ ಜಸ್‍ಪ್ರೀತ್ ಬುಮ್ರಾ ಆರಂಭಿಕ ಕೇಟನ್ ವಿಕೆಟ್ ಪಡೆದು ಅಘಾತ ನೀಡಿದರು. ಇದರ ಬೆನ್ನಲ್ಲೇ ದಾಳಿಗಿಳಿದ ಇಶಾಂತ್ ಶರ್ಮಾ 4 ರನ್ ಗಳಿಸಿದ್ದ ರೂಟ್ ರನ್ನು ಎಲ್‍ಬಿ ಬಲೆಗೆ ಕೆಡವಿದರು. ಬಳಿಕ ಬಂದ ಜಾನಿ ಬೈರ್ ಸ್ಟೋವ್ (6) ಕೂಡ ಹೆಚ್ಚು ಸಮಯ ಕ್ರಿಸ್ ನಲ್ಲಿ ನಿಲ್ಲಲಿಲ್ಲ. ಈ ಮಧ್ಯೆ ಕುಕ್, ಸ್ಟೋಕ್ಸ್ ಜೋಡಿ 4ನೇ ವಿಕೆಟ್ ಗೆ 33 ರನ್ ಜೊತೆಯಾಟ ನೀಡಿದ್ದ ವೇಳೆ ಕುಕ್ ವಿಕೆಟ್ ಪಡೆದ ಬುಮ್ರಾ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಯಶಸ್ವಿಯಾದರು. 4ನೇ ಟೆಸ್ಟ್‍ಗೆ ಆಯ್ಕೆಯಾಗಿದ್ದ ಸ್ಯಾಮ್ ಕರ್ರನ್ ಹಾಗೂ ಮೊಯಿನ್ ಆಲಿ ತಂಡಕ್ಕೆ ಕೆಲ ಕಾಲ ಆಸರೆಯಾದರು. ಆದರೆ 40 ರನ್ ಗಳಿಸಿದ್ದ ಆಲಿ, ಅಶ್ವಿನ್ ಬೌಲಿಂಗ್ ನಲ್ಲಿ ಬುಮ್ರಾಗೆ ಕ್ಯಾಚ್ ನೀಡಿ ಔಟಾದರು.
Advertisement
ಇಂಗ್ಲೆಂಡ್ 65 ಓವರ್ ಗಳಲ್ಲಿ 178/8 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಇಂಗ್ಲೆಂಡ್ ವಿರುದ್ಧ 4ನೇ ಟೆಸ್ಟ್ ಪಂದ್ಯದಲ್ಲಿ ಗೆಲುವು ಸಾಧಿಸಿ ಟೀಂ ಇಂಡಿಯಾ ಸರಣಿಯಲ್ಲಿ ಸಮಬಲ ಸಾಧಿಸುವ ಒತ್ತಡಲ್ಲಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
Another delightful bowling performance by our pacers! They have continuously hit the right lengths and extracted the most out of this pitch. #ENGvIND pic.twitter.com/HdC4BPU5qi
— Sachin Tendulkar (@sachin_rt) August 30, 2018