ಬರ್ಮಿಂಗ್‍ಹ್ಯಾಮ್: ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲಿನ ಕಹಿ ಉಂಡಿದೆ. ಇದರ ಬೆನ್ನಲ್ಲೇ ಪ್ರಮುಖ ವೇಗಿ ಇಶಾಂತ್ ಶರ್ಮಾಗೆ ಪಂದ್ಯದ 15 ರಷ್ಟು ದಂಡ ವಿಧಿಸಲಾಗಿದೆ.
ಇಂಗ್ಲೆಂಡ್ ತಂಡದ 2ನೇ ಇನ್ನಿಂಗ್ಸ್ ವೇಳೆ ಮಲಾನ್ ವಿಕೆಟ್ ಪಡೆದ ಇಶಾಂತ್ ಶರ್ಮಾರ ಸಂಭ್ರಮಾಚರಣೆ ಉದ್ರೇಕಕಾರಿಯಾಗಿತ್ತು ಎಂದು ಪಂದ್ಯದ ರೇಫರಿ ದಂಡ ವಿಧಿಸಿದ್ದಾರೆ. ಬಿಸಿಸಿಐ ಲೆವೆಲ್ 1 ನಿಯಮವನ್ನು ಇಶಾಂತ್ ಶರ್ಮಾ ಉಲ್ಲಂಘಿಸಿದ್ದಾರೆ ಎಂದು ಐಸಿಸಿ ತಿಳಿಸಿದೆ.
Advertisement
BREAKING: Ishant Sharma has been fined 15 per cent of his match fee and has received one demerit point after being found guilty of a Level 1 breach of the ICC Code of Conduct.#ENGvIND READ ????https://t.co/cdqrUd8Q79 pic.twitter.com/eJmJ0p9bDu
— ICC (@ICC) August 4, 2018
Advertisement
ಶುಕ್ರವಾರದ ಮೊದಲ ಸೆಷನ್ ವೇಳೆ ಇಶಾಂತ್ ಶರ್ಮಾ ಬೌಲಿಂಗ್‍ನಲ್ಲಿ ಮಲಾನ್ ಔಟಾಗಿ ಪೆವಿಲಿಯನತ್ತ ನಡೆಯುತ್ತಿದ್ದರು, ಈ ವೇಳೆ ಶರ್ಮಾ ಸಂಭ್ರಮಾಚರಣೆ ನಡೆಸಿದ್ದರು. ಶರ್ಮಾರ ಈ ನಡೆ ಎದುರಾಳಿ ಆಟಗಾರರನ್ನು ಉದ್ರೇಕಿಸುವಂತಿತ್ತು ಎಂದು ಐಸಿಸಿ ತನ್ನ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಕ್ರಿಕೆಟ್ ಮತ್ತಷ್ಟು ಕಠಿಣ ನಿಯಮಗಳನ್ನು ಜಾರಿಗೊಳಿಸಿದ ಐಸಿಸಿ
Advertisement
ದಿನದಾಟದ ಬಳಿಕ ಪಂದ್ಯದ ರೆಫರಿ ನಡೆಸಿದ ವಿಚಾರಣೆಯಲ್ಲಿ ಶರ್ಮಾ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಈ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ ಶರ್ಮಾ 5 ವಿಕೆಟ್ ಪಡೆದು ಮಿಂಚಿದ್ದರು. ಇಶಾಂತ್ ಶರ್ಮಾ ತಪ್ಪಿಗೆ ಫೀಲ್ಡ್ ಅಂಪೈರ್ ಅಲೀಮ್ ದಾರ್, ಕ್ರಿಸ್ ಗ್ಯಾಫನಿ, 3ನೇ ಅಂಪೈರ್ ಎರಸ್ಮಸ್ ಹಾಗೂ 4ನೇ ಅಂಪೈರ್ ಟಿಮ್ ರಾಬಿನ್ ಸನ್ ಅವರ ತಂಡ ಪಂದ್ಯದ 15% ರಷ್ಟು ದಂಡ ಹಾಗೂ 1 ಡಿಮೆರಿಟ್ ಅಂಕ ನೀಡಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews
England win the 1st Test by 31 runs.#ENGvIND pic.twitter.com/v6IVoAhbXE
— BCCI (@BCCI) August 4, 2018
Fast Bowler Ishant Sharma has been fined 15% of his matc&has also received one demerit point after being found guilty of a Level 1 breach of ICC Code of Conduct for Players & Player Support Personnel during third day’s play in the first Test against England at Edgbaston on Friday
— ANI (@ANI) August 4, 2018