‘ಕವಿತೆ ಹುಟ್ಟಲು ಐಶಾರಾಮಿ ಜಾಗವೇ ಬೇಕಿಲ್ಲ, ಒಂದು ಪೆನ್ನು, ಒಂದು ಚೂರು ಖಾಲಿ ಕಾಗದ ಸಾಕು’ ಎಂಬ ಮಾತಿದೆ. ಇದು ಹೊರಜಗತ್ತಿನಲ್ಲಿ ಎಷ್ಟರಮಟ್ಟಿಗೆ ಸತ್ಯವೋ ಗೊತ್ತಿಲ್ಲ. ಆದರೆ ಬಿಗ್‌ಬಾಸ್ (Bigg Boss Kannada) ಮನೆಯಲ್ಲಿ ಮಾತ್ರ ಅಕ್ಷರಶಃ ಸತ್ಯವಾಗಿದೆ. ಏನಿದು ಕವಿಸಮಯ? JioCinemaದಲ್ಲಿ ನೇರಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡದ ‘ಅನ್‌ಸೀನ್ ಕಥೆಗಳು’ ಸೆಗ್ಮೆಂಟ್‌ನಲ್ಲಿ ಈ ಪ್ರಶ್ನೆಗೆ ಉತ್ತರವಿದೆ.
Advertisement
ಬಿಗ್‌ಬಾಸ್ ಸ್ಪರ್ಧಿಗಳಲ್ಲಿ ಪದ್ಯ ಬರೆಯುವ ಕೌಶಲ ಇರುವವರು ಇಶಾನಿ (Ishani) ಮಾತ್ರ. ರ್‍ಯಾಪ್ (Rap) ಹಾಡುಗಳನ್ನು ಕಟ್ಟಿ ಹಾಡುತ್ತಲೇ ಮುನ್ನಲೆಗೆ ಬಂದ ಇಶಾನಿ ಬಿಗ್ ಬಾಸ್ ಮನೆಯೊಳಗೆ ಸದ್ದುಮಡಿದ್ದು ಜೋರು ಧನಿಯ ಜಗಳ ಮತ್ತು ನಗುವಿನಿಂದಲೇ ಹೊರತು ರ್‍ಯಾಪ್ ಹಾಡುಗಳ ಮೂಲಕ ಅಲ್ಲ. ಹಿಂದೊಮ್ಮೆ ಅವರೊಂದು ಕನ್ನಡ ರ್‍ಯಾಪ್ ಸಾಂಗ್ ಕಟ್ಟಿದ್ದರಾದರೂ ಅದು ಅಷ್ಟೇನೂ ಸದ್ದು ಮಾಡಲಿಲ್ಲ. ಕಿಚನ್ ರೀಡಿಂಗ್‌ಗೇ ಮುಗಿದುಹೋಯಿತು. ಆದರೆ ಇಶಾನಿ ಪ್ರಯತ್ನವನ್ನು ಮಾತ್ರ ನಿಲ್ಲಿಸಿಲ್ಲ.
Advertisement
Advertisement
ಮತ್ತೆ ಮತ್ತೆ ಕನ್ನಡದಲ್ಲಿ ರ್‍ಯಾಪ್ ಸಾಂಗ್ ಕಟ್ಟುವ ಪ್ರಯತ್ನ ನಡೆಸಿಯೇ ಇದ್ದಾರೆ. ಈ ಬಾರಿ ಅವರಿಗೆ ಸಿಕ್ಕಿದ್ದು ಟಿಶ್ಯೂ. ಟಿಶ್ಯೂ ಪೇಪರ್ ಮೇಲೆಯೇ ಇಂಗ್ಲಿಷ್ ಲಿಪಿಯಲ್ಲಿ ಕನ್ನಡದ ಸಾಲುಗಳನ್ನು ಬರೆಯುತ್ತ ಪದ್ಯ ಕಟ್ಟುತ್ತಿದ್ದಾರೆ ಇಶಾನಿ. ಪದ್ಯದ ಒಂದೊಂದು ಸಾಲೂ ಉಳಿದ ಸ್ಪರ್ಧಿಗಳನ್ನು ರೋಸ್ಟ್ ಮಾಡುವಂತಿದೆ. ಇಶಾನಿ ರ್‍ಯಾಪ್ ಸಾಂಗ್ ಲಿರಿಕ್ಸ್ ಹೇಗಿದೆ ಗೊತ್ತಾ?
Advertisement
ನಾನ್ ಯಾರು ಅಂತ ನಿಮಗೆ ಗೊತ್ತಿಲ್ವಾ?
ಗೊತ್ತಿಲ್ಲ ಅಂತ ತಿಳಿಸೋಕೆ ಬಂದ್ನಲ್ವಾ?
ಉಪ್ಪಿನಕಾಯಿ ಟೇಸ್ಟು ನಿಮಗೆ ಸಾಲ್ತಿಲ್ವಾ?
ತಿಳ್ಕೊಳ್ರೋ ಇನ್ನು ನೀವಲ್ಲ
ಇನ್ಮುಂದೆ ನಿಮ್ದು ಏನು ನಡೆಯಲ್ಲ
ಈ ರಾಜ್ಯಕ್ಕೆ ರಾಣಿನೇ ನಾನಲ್ವಾ
ತಲೆಬಗ್ಸೀನೇ ನಡೀಬೇಕು ಈಗೆಲ್ಲ
ಸುಮ್ನಿದ್ರೆ ಮಾಡ್ತೀರಾ ಸೈಕು
ಹಿಡ್ದಿದ್ದೀನಿ ನಾನೀಗ ಮೈಕು
ಹೋಗ್ತೀನಿ ಒಂದೇ ಟೇಕು
ಮಾಡ್ತೀನಿ ನಿಮ್ ಈಗೊ ಬ್ರೇಕು
ತೋರಿಸ್ತೀನಿ ಯಾರೆಲ್ಲ ಫೇಕು
ತುಕಾಲಿಗೇ ಫಸ್ಟು ಸ್ಟ್ರೈಕು
ಮಾಡಿದ್ರೆ ತುಕಾಲಿ ಜೋಕು
ಪ್ರತಾಪ್ ನೀನಿರಲೇ ಬೇಕು
ಕ್ಯಾಮೆರಾ ಮುಂದೆ ನೀ ಬರೀ ಫೇಕು
ಇಲ್ದಿದ್ರೆ ನೀ ಸುಟ್ಟ ಕೇಕು
ಹೀಗೆ ಇಶಾನಿ ಹಾಡು ಬೆಳೆಯುತ್ತಲೇ ಇದೆ. ಅದು ಎಲ್ಲಿಗೆ ಹೋಗಿ ಮುಟ್ಟುತ್ತದೆ? ಯಾವಾಗ ಪ್ರೆಸೆಂಟ್ ಆಗುತ್ತದೆ? ಗೊತ್ತಿಲ್ಲ. ಆದರೆ ಮನೆಯೊಳಗಂತೂ ಹೊಸ ಸಂಚಲನ ಹುಟ್ಟು ಹಾಕುವುದು ಗ್ಯಾರಂಟಿ. ಎಲ್ಲ ಸ್ಪರ್ಧಿಗಳಿಗೂ ಹಾಡಿನ ಮೂಲಕವೇ ಟಾಂಗ್ ಕೊಡಲು ಸಜ್ಜಾಗುತ್ತಿರುವ ಇಶಾನಿ ತಮ್ಮ ಯತ್ನದಲ್ಲಿ ಯಶಸ್ವಿಯಾಗ್ತಾರಾ? ಕಾದು ನೋಡಬೇಕು.
Web Stories