ದಾಸ ದರ್ಶನ್ (Darsha) ಹುಟ್ಟು ಹಬ್ಬಕ್ಕೆ ಬಿಗ್ ಬಾಸ್ ಖ್ಯಾತಿಯ ಇಶಾನಿ (Ishani)ಸ್ಪೆಷಲ್ ಗಿಫ್ಟ್ ನೀಡಲಿದ್ದಾರೆ. ದರ್ಶನ್ ಅವರ ಹುಟ್ಟುಹಬ್ಬದ ದಿನದಂದು ಅವರು ವಿಶೇಷ ಗೀತೆಯನ್ನು (Song) ರಿಲೀಸ್ ಮಾಡಲಿದ್ದಾರಂತೆ. ದರ್ಶನ್ ಕುರಿತಾದ ಗೀತೆ ಅದಾಗಿದೆಯಂತೆ. ಈಗಾಗಲೇ ಹಾಡಿಗಾಗಿ ಸರ್ವ ರೀತಿಯಲ್ಲಿ ಅವರೂ ಸಿದ್ಧತೆ ಮಾಡಿಕೊಂಡಿದ್ದಾರೆ.
ಫೆಬ್ರವರಿ 16ರಂದು ದರ್ಶನ್ ತಮ್ಮ ಹುಟ್ಟು ಹಬ್ಬವನ್ನು (Birthday) ಆಚರಿಸಿಕೊಳ್ಳುತ್ತಿದ್ದಾರೆ. ಈ ನಡುವೆ ಈಗಾಗಲೇ ಅಭಿಮಾನಿಗಳಿಗೆ ದರ್ಶನ್ ಸಂದೇಶವೊಂದನ್ನು ರವಾನಿಸಿದ್ದು, ಯಾರೂ ಕೇಕ್ ಮತ್ತು ಬ್ಯಾನರ್ ಕಟ್ಟದಂತೆ ಹೇಳಿದ್ದಾರೆ. ಜೊತೆಗೆ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲು ದವಸ ಧಾನ್ಯಗಳನ್ನು ಉಡುಗೊರೆಯಾಗಿ (Gift) ನೀಡಿ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.
ಈ ನಡುವೆ ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದ್ದು, ಡೆವಿಲ್ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಮಾಡುವ ಸಾಧ್ಯತೆ ಇದೆಯಂತೆ. ಈ ಹಿಂದೆ ಪ್ರಕಾಶ್ ವೀರ್ (Prakash Veer) ಅನಿರ್ದೇಶನದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಾಯಕರಾಗಿ ನಟಿಸುತ್ತಿರುವ ‘ಡೆವಿಲ್’ (Devil) ಚಿತ್ರದ ಸ್ಕ್ರಿಪ್ಟ್ ಪೂಜೆ ಸರಳವಾಗಿ ನೆರವೇರಿದೆ. ಪೂಜೆ ಮುಗಿದಿದ್ದೆ ತಡ ಡೆವಿಲ್ ಹೆಸರಿನಲ್ಲಿ ಪೋಸ್ಟರ್ ಹರಿದಾಡಿದವು. ಆದರೆ, ಈ ಕುರಿತು ನಿರ್ದೇಶಕರು ಪ್ರತಿಕ್ರಿಯೆ ನೀಡಿದ್ದರು.
ಶುಭದಿನವೆಂದು ಡೆವಿಲ್ ಚಿತ್ರದ ಸ್ಕ್ರಿಪ್ಟ್ ಪೂಜೆ ಮಾಡಿದ್ದೇವೆ. ಆದರೆ, ಚಿತ್ರದ ಫಸ್ಟ್ ಲುಕ್ (First Look) ಆಗಲಿ, ಪೋಸ್ಟರ್ ಆಗಲಿ ಯಾವುದು ನಾವು ಬಿಡುಗಡೆ ಮಾಡಿಲ್ಲ. ಕಾಟೇರ ಚಿತ್ರದ ನಂತರ ನಮ್ಮ ಚಿತ್ರದ ಪ್ರಚಾರ ಕಾರ್ಯ ಆರಂಭಿಸುತ್ತೇವೆ. ನಮ್ಮ ವೈಷ್ಣೊ ಸ್ಟುಡಿಯೋಸ್ ಸಂಸ್ಥೆಯ ಮೂಲಕವೇ ಅಧಿಕೃತವಾಗಿ ಡೆವಿಲ್ ಚಿತ್ರದ ಬಗ್ಗೆ ಮಾಹಿತಿ ನೀಡುತ್ತಾ ಹೋಗುತ್ತೇವೆ ಎಂದು ನಿರ್ದೇಶಕ ಪ್ರಕಾಶ್ ವೀರ್ ತಿಳಿಸಿದ್ದರು. ಇದೀಗ ಫಸ್ಟ್ ಲುಕ್ ರಿಲೀಸ್ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.