ಎಲ್ಲೋ ಜೋಗಪ್ಪ ನಿನ್ನ ಅರಮನೆ ಹಾಡನ್ನು ಎಲ್ಲೋ ಗೋಜಪ್ಪ ನಿನ್ನ ಅರಮನೆ ಅಂತ ಬಿಗ್ ಬಾಸ್ (Bigg Boss) ಮನೆಯಲ್ಲಿ ಹಾಡಿ ಸಖತ್ ಆದವರು ಇಶಾನಿ (Ishani). ಬಿಗ್ ಬಾಸ್ ಮುಗಿಯುತ್ತಿದ್ದಂತೆಯೇ ಇದೀಗ ಇಶಾನಿ ಕಲರ್ಸ್ ವಾಹಿನಿಯ ಮತ್ತೊಂದು ಜನಪ್ರಿಯ ಶೋ ಗಿಚ್ಚಿ ಗಿಲಿಗಿಲಿಗೆ ಎಂಟ್ರಿ ಕೊಟ್ಟಿದ್ದಾರೆ. ಎಲ್ಲೋ ಜೋಗಪ್ಪ ನಿನ್ನ ಅರಮನೆ ಹಾಡಿಗೆ ನೃತ್ಯ ಮಾಡುತ್ತಲೇ ವೇದಿಕೆಗೆ ಆಗಮಿಸಿದ್ದಾರೆ ಇಶಾನಿ. ಈ ಹಾಡಿನ ನಂತರ ಕೇಳಲಾದ ಪ್ರಶ್ನೆಗೆ ಸಖತ್ತಾಗಿ ಉತ್ತರಿಸಿದ್ದಾರೆ.
ಹಾಡಿಗೆ ನೃತ್ಯ ಮುಗಿಯುತ್ತಿದ್ದಂತೆಯೇ ಕಾಮಿಡಿ ಎಂದರೆ ಏನು? ಎಂದು ನಿರೂಪಕ ನಿರಂಜನ್ ಕೇಳಿದಾಗ ತಡಬಡಿಸಿಯೇ ತಮ್ಮದೇ ಆದ ರೀತಿಯಲ್ಲಿ ಇಶಾನಿ ಉತ್ತರಿಸಿದ್ದಾರೆ. ಅದರಲ್ಲೂ ತಮ್ಮ ಇಂಗ್ಲಿಷ್ ಮಿಶ್ರಿತ ಕನ್ನಡದಲ್ಲಿ ತಮಗೆ ತೋಚಿದಷ್ಟು ಉತ್ತರ ನೀಡಿದ್ದಾರೆ. ಅದರಲ್ಲೂ ಗಿಚ್ಚಿಗಿಲಿಗಿಲಿ ಖ್ಯಾತಿಯ ಚಂದ್ರಪ್ರಭಾಗೆ ಇಂಗ್ಲಿಷಿನಲ್ಲಿ ಪ್ರಶ್ನೆಯನ್ನು ಕೇಳುವ ಮೂಲಕ ಗಾಬರಿ ಹುಟ್ಟಿಸಿದ್ದಾರೆ.
ಇಶಾನಿಗೆ ಉತ್ತಮವಾಗಿ ಇಂಗ್ಲಿಷ್ ಬರೋ ವಿಚಾರ ಎಲ್ಲರಿಗೂ ಗೊತ್ತಿದೆ. ಚಂದ್ರಪ್ರಭಾಗೆ ಗುಲಗಂಜಿಯನ್ನೂ ಇಂಗ್ಲಿಷ್ ಬರಲ್ಲ. ಈ ಕಾಂಬಿನೇಷನ್ ಇಟ್ಟುಕೊಂಡು ನಿರೂಪಕ ನಿರಂಜನ್ ಸಖತ್ತಾಗಿಯೇ ತಮಾಷೆ ಮಾಡಿದ್ದಾರೆ. ಇಶಾನಿ ಇಂಗ್ಲಿಷಿನಲ್ಲಿ ಕೇಳುವ ಪ್ರಶ್ನೆಗೆ ಚಂದ್ರಪ್ರಭಾ ಕನ್ನಡದಲ್ಲಿ ಉತ್ತರಿಸಲು ಬೆವರು ಸುರಿಸಿದ್ದಾರೆ. ಕನ್ನಡದಲ್ಲಿ ಉತ್ತರಿಸದಿದ್ದರೆ ಕಳೆದ ಬಾರಿ ಗಿಚ್ಚಿ ಗಿಲಿಗಿಲಿ ಶೋನಲ್ಲಿ ಗೆದ್ದ ಟ್ರೋಫಿ ಮತ್ತು ಹಣವನ್ನು ವಾಪಸ್ಸು ಮಾಡಬೇಕು ಎಂದು ನಿರಂಜನ್ ಹೇಳಿದಾಗ ಅಕ್ಷರಶಃ ಒದ್ದಾಡಿದ್ದಾರೆ ಚಂದ್ರಪ್ರಭಾ.
ಕೊನೆಗೂ ಇಶಾನಿಗೆ ಇಂಗ್ಲಿಷ್ ಅರ್ಥ ಮಾಡಿಕೊಳ್ಳದೇ ಚಂದ್ರಪ್ರಭಾ ಒದ್ದಾಡಿದ್ದಾರೆ. ವೇದಿಕೆಯಿಂದಲೇ ಹೊರ ನಡೆದವರು ಮತ್ತೆ ವಾಪಸ್ಸಾಗಿ ಇಶಾನಿ ಮಾತಿಗೆ ಕಿವಿಯಾಗಿದ್ದಾರೆ. ಗಿಚ್ಚಿ ಗಿಲಿಗಿಲಿ ಕಾಮಿಡಿ ಶೋ. ಇಲ್ಲಿ ನಗುವಿಗೆ ಮಾತ್ರ ಅವಕಾಶ. ಕಲಾವಿದರ ವಿಕ್ನೆಷ್ ಇಟ್ಟುಕೊಂಡು ಫನ್ ಮಾಡಲಾಗುತ್ತಿದೆ. ಅದಕ್ಕೆ ಇಶಾನಿ ಮತ್ತು ಚಂದ್ರಪ್ರಭಾ ಈ ಬಾರಿ ಸಾಕ್ಷಿಯಾಗಿದ್ದಾರೆ.