ಮುಂಬೈ: ವಿಶ್ವ ಕ್ರಿಕೆಟಿನಲ್ಲಿ ತನ್ನ ವಿಕೆಟ್ ಕೀಪಿಂಗ್ ಶೈಲಿ ಮೂಲಕವೇ ಎಲ್ಲರ ಗಮನ ಸೆಳೆದಿದ್ದ ಧೋನಿ ಸಾಕಷ್ಟು ಅಭಿಮಾನಿಗಳನ್ನು ಗಳಿಸಿದ್ದಾರೆ. ಆದರೆ ಸದ್ಯ 20 ವರ್ಷದ ಯುವ ಆಟಗಾರ ಇಶಾನ್ ಕಿಶನ್ ಧೋನಿ ಕೀಪಿಂಗ್ ಶೈಲಿಯನ್ನು ಅನುಕರಣೆ ಮಾಡಿ ಮೆಚ್ಚುಗೆ ಪಡೆದಿದ್ದಾರೆ.
ಟೀಂ ಇಂಡಿಯಾ `ಎ’ ತಂಡದಲ್ಲಿ ಸ್ಥಾನ ಪಡೆದಿರುವ ಇಶಾನ್ ಧೋನಿಯಂತೆಯೇ ಎದುರಾಳಿ ಆಟಗಾರನನ್ನು ರನೌಟ್ ಮಾಡಲು ಯತ್ನಿಸಿದ್ದು, ಸದ್ಯ ಈ ವೀಡಿಯೋವನ್ನು ಬಿಸಿಸಿಐ ತನ್ನ ವೆಬ್ ಸೈಟ್ ನಲ್ಲಿ ಪೋಸ್ಟ್ ಮಾಡಿದೆ.
Advertisement
Advertisement
ದುಲೀಪ್ ಟ್ರೋಫಿಯ ಇಂಡಿಯಾ ರೆಡ್ ಹಾಗು ಇಂಡಿಯಾ ಬ್ಲೂ ತಂಡ ನಡುವಿನ ಪಂದ್ಯದಲ್ಲಿ ಇಶಾನ್ ತನ್ನ ಕೀಪಿಂಗ್ ಕೈಚಳಕ ತೋರಿದ್ದಾರೆ. ಬ್ಲೂ ತಂಡದ ಬ್ಯಾಟ್ಸ್‍ಮನ್ ರಿಕಿ ಭುಯಿ ರನ್ ಕದಿಯಲು ಯತ್ನಿಸಿದ ವೇಳೆ ಫೀಲ್ಡರ್ ಬಾಲ್ ಎಸೆಯುತ್ತಿದ್ದಂತೆ ರನೌಟ್ ಮಾಡಲು ಮುಂದಾದ ಕಿಶಾನ್ ಬಲಗೈಲಿದ್ದ ಗ್ಲೌಸ್ ಕಿತ್ತೆಸೆದು ಚೆಂಡನ್ನು ತನ್ನ ಎರಡು ಕಾಲುಗಳ ನಡುವಿಂದ ವಿಕೆಟ್‍ಗೆ ಎಸೆದಿದ್ದಾರೆ. ಆದರೆ ಬಾಲ್ ವಿಕೆಟ್‍ಗೆ ಬಡಿಯುವ ವೇಳೆಗೆ ಬ್ಯಾಟ್ಸ್ ಮನ್ ಕ್ರೀಸ್ ತಲುಪಿದ್ದು, ರನೌಟ್ ಮಾಡಲು ಇಶಾನ್ ವಿಫಲವಾದರೂ ಧೋನಿಯಂತೆ ಸಮಯ ಪ್ರಜ್ಞೆ ಮೆರೆದಿದ್ದನ್ನು ಕ್ರಿಕೆಟ್ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.
Advertisement
ಅಂದ ಹಾಗೇ ಇಶಾನ್ ಕಿಶನ್ ಹಾಗೂ ಧೋನಿ ಇಬ್ಬರು ಜಾರ್ಖಂಡ್ ರಾಜ್ಯದವರೇ ಆಗಿರುವುದು ವಿಶೇಷವಾಗಿದೆ. ಈ ಹಿಂದೆ ಹಲವು ಬಾರಿ ಧೋನಿಯನ್ನು ಭೇಟಿ ಮಾಡಿದ್ದ ಇಶಾನ್ ಬ್ಯಾಟಿಂಗ್ ಹಾಗೂ ಕೀಪಿಂಗ್‍ನಲ್ಲಿ ಹಲವು ಸಲಹೆಗಳನ್ನು ಪಡೆದಿದ್ದಾರಂತೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
Duleep Trophy Final: That Moment when @ishankishan51 tried to pull off an @msdhoni ???????? pic.twitter.com/cMDgY7q4sA
— BCCI Domestic (@BCCIdomestic) September 4, 2018
Those hands. Those @SpartanSportsAU wicketkeeping gloves … @msdhoni #dhoni #indvnz #incredibleindia #spartan pic.twitter.com/aS2TNXit0t
— Paul Cochrane (@paulcochrane) October 26, 2016