ಗುವಾಹಟಿ: ಕಳೆದೆರಡು ದಿನಗಳ ಹಿಂದೆ 3ನೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ (Australia), ಟೀಂ ಇಂಡಿಯಾ ವಿರುದ್ಧ ರೋಚಕ ಗೆಲುವು ಸಾಧಿಸಿತು. ಈ ಮೂಲಕ 5 ಪಂದ್ಯಗಳ ಟಿ20 ಸರಣಿಯನ್ನು 1-2 ಗೆದ್ದು ಸರಣಿ ಕನಸು ಜೀವಂತವಾಗಿಸಿಕೊಂಡಿತು.
ಪಂದ್ಯದ ವೇಳೆ ಇಶಾನ್ ಕಿಶನ್ (Ishan Kishan) ಮಾಡಿದ ಅದೊಂದು ಯಡವಟ್ಟು ಟೀಂ ಇಂಡಿಯಾ (Team India) ಸೋಲಿಗೆ ಕಾರಣವಾಯಿತು ಎಂಬ ವಾದಗಳು ಕೇಳಿಬರುತ್ತಿವೆ. 19ನೇ ಓವರ್‌ನ 4ನೇ ಎಸೆತದಲ್ಲಿ ಮ್ಯಾಥ್ಯೂವೇಡ್ ಸ್ಟಂಪ್ ಔಟ್‌ಗೆ ತುತ್ತಾದರೂ ಆ ಎಸೆತವನ್ನು ನೋಬಾಲ್ ಎಂದು ಘೋಷಿಸಲಾಯಿತು. ಇದಕ್ಕೆ ಕಾರಣವೇನು ಅಂಬುದರ ಬಗ್ಗೆ ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದರು. ಈ ಬಗ್ಗೆ ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ…
Advertisement
Itne main to Dhoni 3 baar stump kar deta #MSDhoni #INDvsAUS #IshanKishan pic.twitter.com/Faet0ofhZN
— INDIयन Critics ???? (@indi_critics) November 28, 2023
Advertisement
ಎಂಸಿಸಿ ಕಾನೂನು 27.3.1 & 27.3.2 ಏನು ಹೇಳುತ್ತೆ?
ಮೇರಿಲ್ಬೋನ್ ಕ್ರಿಕೆಟ್ ಕ್ಲಬ್ (MCC) ಕಾನೂನು 27.3.1 ಪ್ರಕಾರ, ಕ್ರೀಸ್‌ನಲ್ಲಿರುವ ಸ್ಟ್ರೈಕರ್ ಚೆಂಡನ್ನು ಎದುರಿಸಲು ಬಂದಾಗ ಆತ ಬಾಲನ್ನು ತಾಗಿಸುವವರೆಗೆ ಅಥವಾ ಚೆಂಡು ಆತನನ್ನು ಹಾದುಹೋಗುವವರೆಗೆ ಸಂಪೂರ್ಣವಾಗಿ ಕೀಪರ್ ವಿಕೆಟ್‌ಗಳಿಂದ ಹಿಂಭಾಗ ಇರಬೇಕು. ಇಂದು ವೇಳೆ ಚೆಂಡು ಬ್ಯಾಟ್ಸ್‌ಮ್ಯಾನ್‌ನನ್ನ ಹಾದುಹೋಗುವ ಮುನ್ನವೇ ಕೀಪರ್ ವಿಕೆಟ್ ಮುಂದೆ ಬಂದು ಬಾಲ್ ಹಿಡಿದರೆ ಅದು ಉಲ್ಲಂಘನೆಯಾಗುತ್ತದೆ. ಆಗ 27.3.2 ಕಾನೂನಿನ ಪ್ರಕಾರ ಟಿವಿ ಅಂಪೈರ್ (3ನೇ ಅಂಪೈರ್) ಅದನ್ನು ನೋಬಾಲ್ ಎಂದು ತೀರ್ಮಾನಿಸಬಹುದು. ಇದನ್ನೂ ಓದಿ: ಕೊನೆಯ ಓವರ್‌ನಲ್ಲಿ 23 ರನ್, ಮ್ಯಾಕ್ಸಿ ಸ್ಫೋಟಕ ಶತಕ – ರನ್ ಮಳೆಯಲ್ಲಿ ಗೆದ್ದ ಆಸ್ಟ್ರೇಲಿಯಾ
Advertisement
Advertisement
ಇಶಾಕ್ ಕಿಶನ್ ನಿಯಮ ಉಲ್ಲಂಘನೆ ಮಾಡಿದ್ದರಿಂದ ಆಸೀಸ್‌ಗೆ ಗೆಲುವಿನ ಹಾದಿಯೂ ಸುಲಭವಾಯಿತು. ಕೊನೆಯ 12 ಎಸೆತಗಳಲ್ಲಿ ಆಸ್ಟ್ರೇಲಿಯಾ ಗೆಲುವಿಗೆ 43 ರನ್ ಬೇಕಿತ್ತು. 19ನೇ ಓವರ್‌ನಲ್ಲಿ ಅಕ್ಷರ್ ಪಟೇಲ್ ಎಸೆದ ಮೊದಲ ಮೂರು ಎಸೆತಗಳಲ್ಲಿ 4,2,4 ರನ್ ಬಂದಿತ್ತು. ಆದ್ರೆ 4ನೇ ಎಸೆತದಲ್ಲಿ ಮ್ಯಾಥ್ಯೂವೇಡ್ (Matthew Wade) ಸ್ಟಂಪ್ ಔಟ್ ಆದರು. ವಿಕೆಟ್ ಕೀಪರ್ ಇಶಾನ್ ಕಿಶನ್ ಸ್ಟಂಪ್ ಔಟ್ ಮಾಡಿದ್ದರು. ಆದ್ರೆ ಕಿಶನ್ ಅವರ ಕೈಗವಸುಗಳು ಸ್ಟಂಪ್ಸ್ (ವಿಕೆಟ್) ಮುಂದೆ ಬಂದಿದ್ದರಿಂದ 4ನೇ ಎಸೆತವನ್ನು ನೋಬಾಲ್ ಎಂದು ಘೋಷಿಸಲಾಯಿತು. ನಂತರ ಫ್ರಿ ಹಿಟ್ ಎಸೆತವನ್ನು ವೇಡ್ ಸಿಕ್ಸರ್‌ಗೆ ಅಟ್ಟಿದ್ದರು. ನಂತರ ವೇಡ್ ಸಿಂಗಲ್ ರನ್ ತೆಗೆದರೆ ಕೊನೆಯ ಎಸೆತವನ್ನು ಇಶನ್ ಕಿಶನ್ ಹಿಡಿಯದ ಕಾರಣ ಬೈ ಮೂಲಕ 4 ರನ್ ಆಸೀಸ್ ಖಾತೆಗೆ ಸೇರಿತು. ಕೊನೆಯ ಓವರ್‌ನಲ್ಲಿ ಪ್ರಸಿದ್ಧ್ ಕೃಷ್ಣ ಎಸೆದ ಕೊನೆಯ ಓವರ್‌ನಲ್ಲಿ 21 ರನ್ ಚಚ್ಚಿಸಿಕೊಂಡಿದ್ದರಿಂದ ಟೀಂ ಇಂಡಿಯಾ ಸೋಲನ್ನು ಎದುರಿಸಬೇಕಾಯಿತು.
2019ರಲ್ಲಿ ಭಾರತ ಮತ್ತು ಬಾಂಗ್ಲಾದೇಶದ ನಡುವೆ ರಾಜ್‌ಕೋಟ್‌ನಲ್ಲಿ ನಡೆದ ಟಿ20 ಪಂದ್ಯದಲ್ಲಿ ರಿಷಬ್ ಪಂತ್ ಸಹ ಇದೇ ಯಡವಟ್ಟು ಮಾಡಿದ್ದರು. ಲಿಟ್ಟನ್ ದಾಸ್ ಸಂಪೂರ್ಣ ಕ್ರೀಸ್‌ನಿಂದ ಹೊರಗಿದ್ದರು. ಆದ್ರೆ ರಿಷಬ್ ಪಂತ್ ಔಟ್ ಮಾಡುವ ಬರದಲ್ಲಿ ತಮ್ಮ ಕೈಯನ್ನು ವಿಕೆಟ್ ಮುಂದೆ ತಂದಿದ್ದರು. ಆದ್ದರಿಂದ ಅದನ್ನು ನೋಬಾಲ್ ಎಂದು ಘೋಷಿಸಲಾಗಿತ್ತು. ಇದನ್ನೂ ಓದಿ: ಆಸೀಸ್ ವಿರುದ್ಧ ಶತಕ ಸಿಡಿಸಿ ದಾಖಲೆ ಬರೆದ ಗಾಯಕ್‌ವಾಡ್