ಹೈದರಾಬಾದ್: ಭಾನುವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಐಪಿಎಲ್ 2025ರ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ಶತಕ ಸಿಡಿಸಿ ಇಶಾನ್ ಕಿಶನ್ ಮಿಂಚಿದ್ದಾರೆ. 2025ರ ಐಪಿಎಲ್ ಟೂರ್ನಿಯಲ್ಲಿ ಇದು ಮೊದಲ ಶತಕ. ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನದ ಮೂಲಕ ಕಿಶನ್ ಎಲ್ಲರನ್ನೂ ನಿಬ್ಬೆರಗಾಗಿಸಿದ್ದಾರೆ.
ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ 47 ಎಸೆತಗಳಲ್ಲಿ 11 ಬೌಂಡರಿ ಮತ್ತು 6 ಸಿಕ್ಸರ್‌ಗಳೊಂದಿಗೆ ಅಜೇಯ 106 ರನ್ ಗಳಿಸಿದ್ದು ವಿಶೇಷವಾಗಿತ್ತು. ಮೆಗಾ ಹರಾಜಿನಲ್ಲಿ 11.25 ಕೋಟಿ ರೂ.ಗೆ ಖರೀದಿಸಿದ ನಂತರ ಎಸ್‌ಆರ್‌ಹೆಚ್ ಪರ ಕಿಶನ್ ಆಡಿದ ಮೊದಲ ಪಂದ್ಯ ಇದು. ತಮ್ಮ ಫಸ್ಟ್ ಮ್ಯಾಚ್‌ನಲ್ಲೇ ಅಬ್ಬರಿಸಿದ್ದಾರೆ.
ಸ್ವಲ್ಪ ಉದಾಸೀನ ಮನೋಭಾವದ ಕಿಶನ್‌ಗೆ ಬುದ್ದಿ ಕಲಿಸಲೆಂದು ಆಗಿನ ಟೀಂ ಇಂಡಿಯಾದ ಕೋಚ್ ಆಗಿದ್ದ ರಾಹುಲ್ ದ್ರಾವಿಡ್, ಒಂದಷ್ಟು ದೇಶೀಯ ಪಂದ್ಯಗಳನ್ನು ಆಡಿ ಬರುವಂತೆ ಹೇಳಿದ್ದರು. ಆದರೆ, ಕಿಶನ್ ಅದಕ್ಕೂ ತಲೆ ಕೆಡಿಸಿಕೊಳ್ಳಲಿಲ್ಲ. ಪರಿಣಾಮವಾಗಿ 2024ರಲ್ಲಿ ಬಿಸಿಸಿಐ ವಾರ್ಷಿಕ ಒಪ್ಪಂದದ ಪಟ್ಟಿಯಿಂದಲೂ ಕಿಶನ್ ಅವರನ್ನು ಹೊರಗಿಡಲಾಯಿತು.
ಇಂದು ಎಸ್‌ಆರ್‌ಹೆಚ್ ಪರ ಕೀಪರ್ ಬ್ಯಾಟರ್ ನೀಡಿದ ಪ್ರದರ್ಶನವು ಬಿಸಿಸಿಐ ಟಕ್ಕರ್ ಕೊಟ್ಟಂತಿದೆ. ಉತ್ತಮ ಫಾರ್ಮ್‌ನಲ್ಲಿದ್ದಾಗಲೇ ಆಟಗಾರರನ್ನು ಬಿಸಿಸಿಐ ಹೊರಗಿಟ್ಟಿತ್ತು. ಐಪಿಎಲ್ ಇತಿಹಾಸದಲ್ಲೇ ಇದು ಎರಡನೇ ಅತಿ ಹೆಚ್ಚು ರನ್ ಗಳಿಕೆಯಾಗಿದೆ. ಈ ಹಿಂದೆ ಆರ್‌ಸಿಬಿ ವಿರುದ್ಧ ಕೇವಲ 3 ವಿಕೆಟ್ ನಷ್ಟಕ್ಕೆ ಹೈದರಾಬಾದ್ 287 ರನ್ ಬಾರಿಸಿತ್ತು.