LatestMain PostNational

ಅಮೆರಿಕದ ಪ್ರಸಿದ್ಧ ವಸ್ತುಸಂಗ್ರಹಾಲಯ ಮಂಡಳಿಯ ಟ್ರಸ್ಟಿಯಾಗಿ ಇಶಾ ಅಂಬಾನಿ ನೇಮಕ

ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥರಾದ ಮುಖೇಶ್ ಅಂಬಾನಿ ಅವರ ಪುತ್ರಿ, ರಿಲಯನ್ಸ್ ಜಿಯೋ ನಿರ್ದೇಶಕಿ ಇಶಾ ಅಂಬಾನಿ ಅವರು ಪ್ರತಿಷ್ಠಿತ ಸ್ಮಿತ್ಸೋನಿಯನ್ ನ್ಯಾಷನಲ್ ಮ್ಯೂಸಿಯಂ ಆಫ್ ಏಷ್ಯನ್ ಆರ್ಟ್ ಮಂಡಳಿಗೆ ಟ್ರಸ್ಟಿಯಾಗಿ ನೇಮಕವಾಗಿದ್ದಾರೆ. ಸ್ಮಿತ್ಸೋನಿಯನ್ ನ್ಯಾಷನಲ್ ಮ್ಯೂಸಿಯಂ ಆಫ್ ಏಷ್ಯನ್ ಆರ್ಟ್ ಮಂಡಳಿಯು ಅಮೆರಿಕ ಮೂಲದ ವಿಶ್ವದ ಅತಿದೊಡ್ಡ ವಸ್ತುಸಂಗ್ರಹಾಲಯ, ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ಪ್ರಮುಖ ಭಾಗವಾಗಿದೆ.

ಅಮೆರಿಕದ ಮುಖ್ಯ ನ್ಯಾಯಮೂರ್ತಿ ಜಾನ್ ಜಿ ರಾಬರ್ಟ್ಸ್, ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ನೇತೃತ್ವದ ಆಡಳಿತ ಮಂಡಳಿಯು ಸೆಪ್ಟೆಂಬರ್ 23 ರಂದು ಇಶಾ ಅಂಬಾನಿ ಅವರ ನೇಮಕಾತಿಗೆ ಅನುಮೋದನೆ ನೀಡಿದೆ.

ಅಮೆರಿಕದ ಪ್ರಸಿದ್ಧ ವಸ್ತುಸಂಗ್ರಹಾಲಯ ಮಂಡಳಿಯ ಟ್ರಸ್ಟಿಯಾಗಿ ಇಶಾ ಅಂಬಾನಿ ನೇಮಕ

ನಾಲ್ಕು ವರ್ಷಗಳವರೆಗೆ ಇಶಾ ಅಂಬಾನಿ ಅವರು ಟ್ರಸ್ಟಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಇದೇ ವೇಳೆ ಡಾ. ವಿಜಯ್ ಆನಂದ್ ಅವರನ್ನು ಮಂಡಳಿಯ ಉಪಾಧ್ಯಕ್ಷರನ್ನಾಗಿ, ರಾಯಭಾರಿ ಪಮೇಲಾ ಎಚ್. ಸ್ಮಿತ್ ಅವರನ್ನು ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.

ನ್ಯಾಷನಲ್ ಮ್ಯೂಸಿಯಂ ಆಫ್ ಏಷ್ಯನ್ ಆರ್ಟ್ ಸ್ಮಿತ್ಸೋನಿಯನ್‌ನ ವಿಶೇಷ ಕಲಾ ವಸ್ತುಸಂಗ್ರಹಾಲಯವಾಗಿದ್ದು, ನ್ಯಾಷನಲ್ ಮಾಲ್‌ನಲ್ಲಿರುವ ಪ್ರಪ್ರಥಮ ಕಲಾ ವಸ್ತುಸಂಗ್ರಹಾಲಯವಾಗಿದೆ. ಇದನ್ನೂ ಓದಿ: ಜಿಯೋ-ಬಿಪಿ ಮೊದಲ ಮೊಬಿಲಿಟಿ ಸ್ಟೇಷನ್ ಆರಂಭ- ಇವಿ ಚಾರ್ಜಿಂಗ್‌, ಬ್ಯಾಟರಿ ಸ್ವಾಪ್

ಅಮೆರಿಕದ ಪ್ರಸಿದ್ಧ ವಸ್ತುಸಂಗ್ರಹಾಲಯ ಮಂಡಳಿಯ ಟ್ರಸ್ಟಿಯಾಗಿ ಇಶಾ ಅಂಬಾನಿ ನೇಮಕ

 

1923 ರಲ್ಲಿ ಫ್ರೀರ್ ಗ್ಯಾಲರಿ ಆಫ್ ಆರ್ಟ್ ಆಗಿ ಪ್ರಾರಂಭವಾದಾಗಿನಿಂದ ತನ್ನ ಅತ್ಯಪರೂಪದ ಸಂಗ್ರಹ ಮತ್ತು ಅದರ ಶತಮಾನದಷ್ಟು ಹಿಂದಿನ ವಿಶೇಷ ಸಂಗ್ರಹಗಳು, ಪ್ರದರ್ಶನಗಳು, ಸಂಶೋಧನಾ ಕಲೆಗಳ ಸಂರಕ್ಷಣೆ ಮತ್ತು ಸಂರಕ್ಷಣಾ ವಿಜ್ಞಾನದ ದೀರ್ಘ ಸಂಪ್ರದಾಯ ಶ್ರೇಷ್ಠತೆಗಾಗಿ ಅಂತರಾಷ್ಟ್ರೀಯ ಪ್ರಖ್ಯಾತಿ ಹೊಂದಿದೆ.  ಇದನ್ನೂ ಓದಿ: ಜಿಯೋ ಫೋನ್‌ ನೆಕ್ಸ್ಟ್ ಹೇಗೆ ತಯಾರಾಗುತ್ತಿದೆ? – ತಿರುಪತಿ ಫ್ಯಾಕ್ಟರಿಯ ವಿಡಿಯೋ ರಿಲೀಸ್‌

2023ರಲ್ಲಿ ಶತಮಾನೋತ್ಸವ ಸಂಭ್ರಮ ಆಚರಿಸುವ ಸಂದರ್ಭದಲ್ಲಿ ಇಶಾ ಅಂಬಾನಿ ಅವರನ್ನು ಟ್ರಸ್ಟಿಯಾಗಿ ನೇಮಕ ಮಾಡಿರುವುದು ವಿಶೇಷ. ಶಮಾನೋತ್ಸವ ಸಂಭ್ರಮವು ವಸ್ತುಸಂಗ್ರಹಾಲಯದ ಇತಿಹಾಸದಲ್ಲಿ ಒಂದು ಮೈಲಿಗಲ್ಲಾಗಿದ್ದು, ಮುಂದಿನ ಪೀಳಿಗೆಗೆ ವಸ್ತುಸಂಗ್ರಹಾಲಯವನ್ನು ಕಾಪಾಡುವ, ಸಂರಕ್ಷಿಸುವ ಮತ್ತು ವಿಸ್ತರಿಸುವ ನಿಟ್ಟಿನಲ್ಲಿ ಮಹತ್ವದ್ದಾಗಿದೆ.

ಅಮೆರಿಕದ ಪ್ರಸಿದ್ಧ ವಸ್ತುಸಂಗ್ರಹಾಲಯ ಮಂಡಳಿಯ ಟ್ರಸ್ಟಿಯಾಗಿ ಇಶಾ ಅಂಬಾನಿ ನೇಮಕ

ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್ (ಜಿಯೋ) ನ ಅಂಗಸಂಸ್ಥೆಯ ನಿರ್ದೇಶಕಿಯಾಗಿರುವ ಇಶಾ ಅಂಬಾನಿ, ಭಾರತದಲ್ಲಿ ತ್ವರಿತಗತಿ ಇಂಟರ್ನೆಟ್ ಒದಗಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. 2016ರಲ್ಲಿ 4ಜಿ ಸೇವೆಯು ಅತ್ಯಂತ ಕಡಮೆ ದರದಲ್ಲಿ ಲಭ್ಯವಾಗುವಂತೆ ಮಾಡುವಲ್ಲಿ ಶ್ರಮಿಸಿದ್ದಾರೆ. 44 ಕೋಟಿ ಚಂದಾದಾರನ್ನು ಹೊಂದಿರುವ ರಿಲಯನ್ಸ್ ಜಿಯೋ 20 ಬಿಲಿಯನ್ ಡಾಲರ್ ಬಂಡವಾಳ ಮಾರುಕಟ್ಟೆ ಮೌಲ್ಯ ಹೊಂದಿರುವ ರಿಲಯನ್ಸ್ ಇಂಡಸ್ಟ್ರೀಸ್ ಭಾಗವಾಗಿದೆ. ಹೊಸತಲೆಮಾರಿನ ತಾಂತ್ರಜ್ಞಾನ ಆಧರಿತ ಸೇವೆ ಒದಗಿಸುವ ನಿಟ್ಟಿನಲ್ಲಿ ಪ್ರಮುಖಪಾತ್ರ ವಹಿಸಿರುವ ಇಶಾ ಅಂಬಾನಿ, ಅಜಿಯೋಡಾಟ್ಕಾಮ್ ನ ಶಕ್ತಿಯೂ ಆಗಿದ್ದಾರೆ. ಜಿಯೋಮಾರ್ಟ್ ಮೂಲಕ ಇಕಾಮರ್ಸ್ ವಿಸ್ತರಿಸುವ ಹೊಣೆಯನ್ನು ಸಮರ್ಥವಾಗಿ ನಿರ್ವಹಿಸಿರುವ ಇಶಾ ಅಂಬಾನಿ ಸಾಮಾಜಿಕ ಸೇವೆಗಾಗಿ ತೊಡಗಿಸಿಕೊಂಡಿರುವ ದೇಶದ ಅತಿದೊಡ್ಡ ಸೇವಾಸಂಸ್ಥೆ ರಿಲಯನ್ಸ್ ಫೌಂಡೇಷನ್ ನಿರ್ದೇಶಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಸ್ಮಿತ್ಸೋನಿಯನ್ ನ್ಯಾಷನಲ್ ಮ್ಯೂಸಿಯಂ ಆಫ್ ಏಷ್ಯನ್ ಆರ್ಟ್ ಮಂಡಳಿಯ ಪ್ರಕಟಣೆ ತಿಳಿಸಿದೆ.

ಇಶಾ ಅವರ ದೃಷ್ಟಿ ಮತ್ತು ಕಲೆಗಳ ಮೇಲಿನ ಉತ್ಸಾಹವು ಸ್ಮಿತ್ಸೋನಿಯನ್ ಅವರ ಸಂಗ್ರಹಣೆಗಳು ಮತ್ತು ಪರಿಣತಿಯನ್ನು ಹೆಚ್ಚು ಸುಲಭವಾಗಿ ಮತ್ತು ತ್ವರಿತವಾಗಿ ತಲುಪಿಸುವ ನಿಟ್ಟಿನಲ್ಲಿ ಹಾಗೂ ಭಾರತೀಯ ಮತ್ತು ಏಷ್ಯಾ ಭಾಗದ ಕಲೆಗಳು ಮತ್ತು ಸಂಸ್ಕೃತಿಗಳ ಉತ್ತಮ ತಿಳುವಳಿಕೆ ಮತ್ತು ಆಚರಣೆಯನ್ನು ಸಕ್ರಿಯಗೊಳಿಸುವ ಪ್ರಯತ್ನಗಳನ್ನು ಉದ್ದೀಪಿಸುತ್ತದೆ ಎಂದು ನಿರೀಕ್ಷಿಸಿದ್ದೇವೆ ಎಂದು ಮಂಡಳಿಯು ಪ್ರಕಟಣೆಯಲ್ಲಿ ಶ್ಲಾಘಿಸಿದೆ.

Related Articles

Leave a Reply

Your email address will not be published. Required fields are marked *