ಚೆನ್ನೈ: ತೂಕ ಕಡಿಮೆ ಆಗಲು ಶಸ್ತ್ರ ಚಿಕಿತ್ಸೆ ಮಾಡಿಕೊಂಡ ಮಹಿಳೆಯೊಬ್ಬರು ಈಗ ಪ್ರಾಣವನ್ನೇ ಕಳೆದುಕೊಂಡ ಘಟನೆ ತಮಿಳುನಾಡಿನ ಚೆನ್ನೈ ಆಸ್ಪತ್ರೆಯಲ್ಲಿ ನಡೆದಿದೆ.
160 ಕೆಜಿ ತೂಗುತ್ತಿದ್ದ 46 ವರ್ಷದ ವಲರ್‍ಮತಿ ತೂಕ ಜಾಸ್ತಿ ಇದೆ ಎಂದು ಬರಿಯಾಟ್ರಿಕ್ ಶಸ್ತ್ರಚಿಕಿತ್ಸೆಗೆ ದಾಖಲಾಗಿದ್ದಳು. ಆದರೆ ಈ ಶಸ್ತ್ರಚಿಕಿತ್ಸೆ ವಿಫಲವಾಗಿದ್ದು ಚೆನ್ನೈ ಸಿಟಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.
Advertisement
ಸ್ಥೂಲಕಾಯ ಚಿಕಿತ್ಸೆಯಿಂದ ಬಳಲುತ್ತಿದ್ದ ಪತ್ನಿಯನ್ನು ಆಸ್ಪತ್ರಗೆ ದಾಖಲಿಸಿದ್ದೆ. ಆದರೆ ವೈದ್ಯರು ನಮ್ಮ ಮನೆಯಲ್ಲಿರುವ ನಾಲ್ಕು ಮಂದಿಗೂ ಶಸ್ತ್ರ ಚಿಕಿತ್ಸೆ ನಡೆಸಬೇಕು ಎಂದು ಹೇಳಿದರು. ಅಷ್ಟೇ ಅಲ್ಲದೇ ನಮಗೆ ದುಡ್ಡು ಬೇಕಾಗಿಲ್ಲ, ನೀವು ನಮಗೆ ಶಸ್ತ್ರಚಿಕಿತ್ಸೆ ಆಗುವ ಮೊದಲು ಮತ್ತು ನಂತರದ ಫೋಟೋ ಕೊಡಬೇಕು ಅಂತ ವೈದ್ಯರು ಹೇಳಿದ್ದರು ಎಂದು ವಲರಾಮತಿಯ ಪತಿ ಅಲಗೆಸಾನ್ ಹೇಳಿದ್ದಾರೆ.
Advertisement
ನಾವೂ ಚಿಕಿತ್ಸೆಗಾಗಿ ಮತ್ತು ಔಷಧಿಗಾಗಿ ಸಾಕಷ್ಟು ಹಣ ಖರ್ಚು ಮಾಡಿದ್ದೇವೆ ಮೊದಲ ಶಸ್ತ್ರಚಿಕಿತ್ಸೆ ನಡೆದ ನಂತರ ವಲರಾಮತಿ ಒಂದು ತಿಂಗಳು ಕಾಲ ಆಸ್ಪತ್ರೆಯಲ್ಲಿ ದಾಖಲಾಗಿದ್ದಳು. ಅಷ್ಟೇ ಅಲ್ಲದೇ ಆರೋಗ್ಯದಲ್ಲಿ ತೊಡಕುಗಳಿರುವ ಕಾರಣ ವೈದ್ಯರು ಒಂಬತ್ತು ಬಾರಿ ಶಸ್ತ್ರಚಿಕಿತ್ಸೆ ನಡೆಸಬೇಕಿತ್ತು.
Advertisement
ವೈದ್ಯರ ನಿರ್ಲಕ್ಷ್ಯ ಎಂದು ಮಹಿಳೆಯ ಕುಟುಂಬದವರು ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ. ಪೊಲೀಸರು ಸೆಕ್ಷನ್ 174 ಅಡಿಯಲ್ಲಿ ಕೇಸನ್ನು ದಾಖಲಿಸಲಾಗಿದೆ. ಮರಣೋತ್ತರ ಪರೀಕ್ಷೆಗೆಗಾಗಿ ವಲರ್‍ಮತಿ ದೇಹವನ್ನು ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ.