ಬೆಂಗಳೂರು: ಕೋರಮಂಗಲದ ಮಂಗಳಾ ಕಲ್ಯಾಣ ಮಂಟಪದ ಬಳಿ ನಡೆದ ಭೀಕರ ಕಾರು ಅಪಘಾತಕ್ಕೆ ನೀರಿನ ಬಾಟಲ್ ಸಹ ಕಾರಣವಾಗಿರಬಹುದು ಎಂಬ ಮಾತು ಕೇಳಿ ಬಂದಿದೆ.
ಹೌದು. ಬೆಂಗಳೂರಿನಲ್ಲಿ ನಡೆದ ಭೀಕರ ಅಪಘಾತಗಳ ಪಟ್ಟಿಗೆ ಈ ಅಪಘಾತ ಸೇರ್ಪಡೆಯಾದ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ವಿವಿಧ ಆಯಾಮಗಳಿಂದ ಪೊಲೀಸರು ಈಗ ತನಿಖೆ ನಡೆಸುತ್ತಿದ್ದಾರೆ.
Advertisement
Advertisement
Advertisement
ಒಂದು ತಂಡ 7 ಮಂದಿ ಕಾರಿನಲ್ಲಿ ಪ್ರಯಾಣ ಮಾಡುವುದಕ್ಕೂ ಮೊದಲು ಎಲ್ಲೆಲ್ಲಿಗೆ ಹೋಗಿದ್ದರು? ಏನು ಮಾಡಿದ್ದರು ಎಂಬ ಮಾಹಿತಿಯನ್ನು ಕಲೆ ಹಾಕುತ್ತಿದ್ದರೆ ಇನ್ನೊಂದು ತಂಡ ಆಡಿ ಕಾರು ಇಷ್ಟೊಂದು ವೇಗವಾಗಿ ಹೋಗಲು ಕಾರಿನಲ್ಲೇ ಯಾವುದಾದರೂ ತಾಂತ್ರಿಕ ದೋಷ ಇತ್ತೆ ಎಂಬುದರ ಬಗ್ಗೆ ತನಿಖೆ ಆರಂಭಿಸಿದೆ.
Advertisement
ಈ ತನಿಖೆಯ ವೇಳೆ ನೀರಿನ ಬಾಟಲ್ ಸಿಕ್ಕಿದೆ. ನೀರಿನ ಬಾಟಲ್ ಕಾರಿನಲ್ಲಿ ಇರುವುದು ಸಾಮಾನ್ಯ. ಆದರೆ ಇಲ್ಲಿ ನೀರಿನ ಬಾಟಲ್ ಈ ಎಲ್ಲಿ ಸಿಕ್ಕಿದೆ ಎನ್ನುವುದು ಮುಖ್ಯವಾಗುತ್ತದೆ. ಈ ಪ್ರಕರಣದಲ್ಲಿ ಕಾಲಿನ ಭಾಗದಲ್ಲಿರುವ ಬ್ರೇಕ್ ಲಿವರ್ ಕೆಳಗಡೆ ವಾಟರ್ ಬಾಟಲ್ ಬಿದ್ದಿತ್ತು. ಇದರಿಂದಾಗಿ ಓವರ್ ಸ್ಪೀಡ್‍ನಲ್ಲಿದ್ದ ಕಾರನ್ನು ನಿಯಂತ್ರಣ ಮಾಡಲು ಸಾಧ್ಯವಾಗದೇ ಇದ್ದಿರಬಹುದು ಎಂದು ಪೊಲೀಸ್ ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ. ಇದನ್ನೂ ಓದಿ : ಕಾರು ಅಪಘಾತಕ್ಕೂ ಮುನ್ನ ಮದ್ಯ ಖರೀದಿಸಿದ್ದ ಇಶಿತಾ, ಬಿಂದು
ನೀರಿನ ಬಾಟಲ್ ಪೂರ್ಣವಾಗಿ ಭರ್ತಿಯಾಗಿದ್ದರೆ ಬ್ರೇಕ್ ಹಾಕಲು ಸಾಧ್ಯವಾಗುವುದೇ ಇರುವುದಿಲ್ಲ. ಹೀಗಾಗಿ ಆಡಿ ಕಾರು ನಿಯಂತ್ರಣಕ್ಕೆ ಸಿಗದೇ ಮಿತಿ ಮೀರಿದ ವೇಗದಲ್ಲಿ ಸಂಚರಿಸಿ ಈ ದುರ್ಘಟನೆ ಸಂಭವಿಸಿರುವ ಸಾಧ್ಯತೆಯಿದೆ.
ನೀರಿನ ಬಾಟಲ್ ಮೊದಲೇ ಕೆಳಗೆ ಬಿದ್ದಿತ್ತಾ ಅಥವಾ ಅಪಘಾತದ ರಭಸಕ್ಕೆ ಬಿದ್ದಿದ್ಯಾ ಎನ್ನುವುದು ಗೊತ್ತಿಲ್ಲ. ಆದರೆ ಬ್ರೇಕ್ ಅಡಿಯಲ್ಲೇ ಬಾಟಲ್ ಸಿಕ್ಕಿದ ಹಿನ್ನೆಲೆಯಲ್ಲಿ ಮೊದಲೇ ಬಿದ್ದಿರಬಹುದು ಎನ್ನುವುದು ಪೊಲೀಸರ ಅನುಮಾನ. ಇದನ್ನೂ ಓದಿ : ಮಿಡ್‍ನೈಟ್ ಪಾರ್ಟಿ ಮಾಡಿ ಜಾಲಿ ರೈಡ್? – ಜೊಮಾಟೊ ಡೆಲಿವರಿ ಬಾಯ್ ಜಸ್ಟ್ ಮಿಸ್