ಹದಿಮೂರು ವರ್ಷಗಳ ಹೋರಾಟದ ಫಲವಾಗಿ ಡಾ.ವಿಷ್ಣುವರ್ಧನ್ ಅವರ ಸ್ಮಾರಕ ಮೈಸೂರಿನಲ್ಲಿ ತಲೆಯೆತ್ತಿದೆ. ಈ ಸಂಭ್ರಮವನ್ನು ಎಲ್ಲರಿಗಿಂತ ಮೊದಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ಅದರ ಇತರ ಅಂಗಸಂಸ್ಥೆಗಳು ಆಚರಿಸಬೇಕಿತ್ತು. ಆದರೆ, ತಮಗೆ ಸಂಬಂಧವೇ ಇಲ್ಲದಂತೆ ಅವುಗಳು ಮೌನವಹಿಸಿವೆ. ವಿಷ್ಣುವರ್ಧನ್ ಅವರೇನು ಪರಭಾಷಾ ನಟರಾ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಡಾ.ವಿಷ್ಣುಸೇನಾ ಸಮಿತಿಯ ಅಧ್ಯಕ್ಷರ ವೀರಕಪುತ್ರ ಶ್ರೀನಿವಾಸ್. ಚೇಂಬರ್ ಈ ನಡೆಯನ್ನು ಅವರು ಖಂಡಿಸಿದ್ದಾರೆ.
Advertisement
‘ವಿಷ್ಣುವರ್ಧನ್ ಅವರ ವಿಷಯದಲ್ಲಿ ಮೊದಲಿನಿಂದಲೂ ಇಂಥದ್ದೊಂದು ಧೋರಣೆ ನಡೆದುಕೊಂಡು ಬಂದಿದೆ. ಕನ್ನಡ ಸಿನಿಮಾ ರಂಗಕ್ಕೆ ಯಜಮಾನರು ಕೊಟ್ಟ ಕೊಡುಗೆಯನ್ನು ಇವರಿಗೆಲ್ಲ ಯಾವ ರೀತಿಯಲ್ಲಿ ಅರ್ಥ ಮಾಡಿಸಬೇಕು ಎಂದು ಗೊತ್ತಾಗುತ್ತಿಲ್ಲ. ಸ್ಮಾರಕ ಉದ್ಘಾಟನೆಯನ್ನು ಸ್ವತಃ ಚಿತ್ರೋದ್ಯಮವೇ ಸಡಗರದಿಂದ ಮಾಡಬೇಕಿತ್ತು. ವಾಣಿಜ್ಯ ಮಂಡಳಿಯು ಮುಂದೆ ನಿಂತುಕೊಂಡು ಎಲ್ಲರಿಗೂ ಆಹ್ವಾನಿಸಿ, ಮೈಸೂರಿನಲ್ಲಿ ಸೇರುವಂತೆ ಮಾಡಬೇಕಿತ್ತು. ಆದರೆ, ಅದು ಆಗುತ್ತಿಲ್ಲ ಎನ್ನುವುದೇ ಬೇಸರ’ ಎನ್ನುತ್ತಾರೆ ವೀರಕಪುತ್ರ ಶ್ರೀನಿವಾಸ್.
Advertisement
Advertisement
ಹಾಗಂತ ಅಭಿಮಾನಿಗಳು ಸುಮ್ಮನಿಲ್ಲ ಎನ್ನುವುದನ್ನೂ ಶ್ರೀನಿವಾಸ್ ಹೇಳುತ್ತಾರೆ. ಜನವರಿ 29ರಂದು ನಡೆಯಲಿರುವ ವಿಷ್ಣುವರ್ಧನ್ ಸ್ಮಾರ ಲೋಕಾರ್ಪಣೆಗೆ ಅಭಿಮಾನಿಗಳು ಸರ್ವರೀತಿಯಲ್ಲಿ ಸಿದ್ಧತೆ ಮಾಡಿಕೊಂಡಿದ್ದಾರೆ. ಸರಕಾರವು ಸ್ಮಾರಕ ಉದ್ಘಾಟನೆಯನ್ನು ಕೇವಲ ಸರಕಾರಿ ಕಾರ್ಯಕ್ರಮದಂತೆ ಹಮ್ಮಿಕೊಂಡಿದ್ದರೆ, ವಿಷ್ಣುಸೇನಾ ಸಮಿತಿಯ ಅಸಂಖ್ಯಾತ ಅಭಿಮಾನಿಗಳು ಜಾತ್ರೆಯ ರೀತಿಯಲ್ಲಿ ಆಚರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನುತ್ತಾರೆ. ಈಗಾಗಲೇ ಸರ್ವ ರೀತಿಯಲ್ಲೂ ಅಭಿಮಾನಿಗಳು ಸ್ಮಾರಕ ಲೋಕಾರ್ಪಣೆಗೆ ರೆಡಿಯಾಗಿದ್ದು, ಬೆಂಗಳೂರು ಮೈಸೂರು ರಸ್ತೆಯಲ್ಲಿ ವಿಷ್ಣುವರ್ಧನ್ ಅವರ ಕಟೌಟ್ ಗಳು ರಾರಾಜಿಸುತ್ತಿವೆ. ರಾಜ್ಯಾದ್ಯಂತ ಗೋಡೆಗಳ ಮೇಲೆ ವಿಷ್ಣುವರ್ಧನ್ ಸ್ಮಾರಕದ ಪೋಸ್ಟರ್ ಅಂಟಿಸಲಾಗಿದೆ. ಇಷ್ಟೇ ಅಲ್ಲದೇ ಹತ್ತು ಹಲವು ಕಾರ್ಯಕ್ರಮಗಳನ್ನು ಜನವರಿ 29 ರ ಬೆಳಗ್ಗೆಯಿಂದ ವಿಷ್ಣುಸೇನಾ ಸಮಿತಿಯ ಸದಸ್ಯರು ಹಮ್ಮಿಕೊಂಡಿದ್ದಾರೆ. ಇದನ್ನೂ ಓದಿ: ನಂದಮೂರಿ ತಾರಕ ರತ್ನಗೆ ಹೃದಯಾಘಾತ: ಆಸ್ಪತ್ರೆಗೆ ದಾಖಲು
Advertisement
ವಿಷ್ಣುವರ್ಧನ್ ಅವರ ಸ್ಮಾರಕ ಉದ್ಘಾಟನೆಗೆ ವಾಹನ ಜಾಥಾ, ಕುಂಭಮೇಳ, ದೀಪೋತ್ಸವ, ಜಾನಪದ ಮೇಳ, ಕಟೌಟ್ ಜಾತ್ರೆ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದಾಗಿ ವೀರಕಪುತ್ರ ಶ್ರೀನಿವಾಸ್ ತಿಳಿಸಿದ್ದಾರೆ. ಜನವರಿ 29ರ ಬೆಳಗ್ಗೆ 6 ಗಂಟೆಗೆ ಬೆಂಗಳೂರಿನ ಅಭಿಮಾನ್ ಸ್ಟುಡಿಯೋ ಬಳಿ ಅಭಿಮಾನಿಗಳು ಒಟ್ಟಾಗಿ ಸೇರಲಿದ್ದು, ಅಲ್ಲಿಂದ 6.30ಕ್ಕೆ ವಾಹನ ಜಾಥಾ ನಡೆಯಲಿದೆ. ಬೆಂಗಳೂರು ಮೈಸೂರು ಮಧ್ಯೆ ಇರುವಂತಹ ಅಭಿಮಾನಿಗಳು ತಮ್ಮ ಊರಿನ ಹತ್ತಿರದ ಹೈವೆಗಳಲ್ಲಿ ಬಂದು ಜೊತೆಯಾಗಲಿದ್ದಾರೆ ಎಂದಿದ್ದಾರೆ.
ಒಟ್ಟು ನೂರು ಕಟೌಟ್ ಗಳು ಸ್ಮಾರಕದ ಉದ್ಘಾಟನೆಗಾಗಿಯೇ ಸಿದ್ಧಗೊಂಡಿವೆ. ಅವುಗಳು ಬೆಂಗಳೂರಿನಿಂದ ಮೈಸೂರುವರೆಗೂ ಮತ್ತು ಸ್ಮಾರಕದ ಹತ್ತಿರವೂ ತಲೆಯೆತ್ತಿ ನಿಲ್ಲಲಿವೆ. ಈಗಾಗಲೇ ಹಲವು ಕಡೆ ದುಂಡನೆಯ ಕಟೌಟ್ ಗಳನ್ನು ನಿಲ್ಲಿಸಲಾಗಿದೆ. ಜನವರಿ 29ರಂದು ವಾಹನ ಇಲ್ಲದವರಿಗಾಗಿಯೇ ಒಟ್ಟು ಹತ್ತು ಬಸ್ ಗಳನ್ನು ಆಯೋಜನೆ ಮಾಡಲಾಗಿದೆ. ಐದು ಬಸ್ ಗಳಲ್ಲಿ ಕುಂಭ ಹೊರುವ ಮತ್ತು ದೀಪೋತ್ಸವದಲ್ಲಿ ಭಾಗಿ ಆಗುವ ಹೆಣ್ಣುಮಕ್ಕಳಿಗೆ ಮೀಸಲಿಡಲಾಗಿದೆ. ಇನ್ನೂ ಐದು ಬಸ್ ಗಳು ವಾಹನ ಇಲ್ಲದವರಿಗಾಗಿ ಕಾದಿರುತ್ತವೆ.
ಎಲ್ಲರೂ ಮೈಸೂರಿನಲ್ಲಿ ಒಟ್ಟಾಗಿ ಅಲ್ಲಿಂದ ಮೂರು ಕೀಲೋ ಮೀಟರ್ ಜಾಥಾ ಹಮ್ಮಿಕೊಂಡು ಸ್ಮಾರಕ ತಲುಪಲಾಗುತ್ತದೆ. ಈ ಜಾಥಾದಲ್ಲಿ ವಿಷ್ಣುವರ್ಧನ್ ಅವರ ಗೀತೆಗಳು, ಜಾನಪದ ನೃತ್ಯ, ಜಾನಪದ ಕಲೆಗಳನ್ನು ಬಿಂಬಿಸುವಂತಹ ಯೋಜನೆ ಸಿದ್ಧವಾಗಿದೆ. ಕುಂಭಮೇಳದೊಂದಿಗೆ ಮಹಿಳೆಯರು ಕೂಡ ಜಾಥಾದಲ್ಲಿ ಹೆಜ್ಜೆ ಹಾಕಲಿದ್ದಾರೆ. ಜನವರಿ 29ರಂದು ಮೈಸೂರಿನಲ್ಲಿ ವಿಷ್ಣು ಜಾತ್ರೆಯೇ ನಡೆಯಲಿದೆ ಎಂದು ವೀರಕಪುತ್ರ ಶ್ರೀನಿವಾಸ್ ತಿಳಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k